RCB Playing 11 Prediction: ಐಪಿಎಲ್ 2026ಕ್ಕೆ ಆರ್‌ಸಿಬಿ ಪ್ಲೇಯಿಂಗ್ 11 ಭವಿಷ್ಯ..
IPL 2026 RCB Playing 11: ಐಪಿಎಲ್ 2025 ಚಾಂಪಿಯನ್ ಆಗಿರುವ ಆರ್‌ಸಿಬಿ ಮುಂದಿನ ಬಾರಿಯೂ ಟ್ರೋಫಿ ಗೆಲ್ಲುವ ಹಠದಲ್ಲಿದೆ. ಇಂದು (ಡಿಸೆಂಬರ್ 16) 2026ರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ವೇಳೆ ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಸಕಲ ಸಿದ್ಧತೆ ನಡೆಸಿಕೊಂಡಿದೆ. ಹಾಗಾದ್ರೆ, ಮುಂದಿನ ಬಾರಿಗೆ ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಆರ್‌ಸಿಬಿ ಈ ಬಾರಿಯ ಐಪಿಎಲ್‌ನಲ್ಲಿ ಕೊನೆವರೆಗೂ ಉತ್ತಮ ಪ್ರದರ್ಶನ ತೋರಿ ಬಲಿಷ್ಠ ತಂಡಗಳನ್ನು ಬಗ್ಗುಬಡಿದು ಫೈನಲ್ ಪ್ರವೇಶ ಮಾಡಿತು. ಪಂಜಾಬ್ ಕಿಂಗ್ಸ್ ವಿರುದ್ಧ ಫೈನಲ್‌ನಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಬ್ಯಾಟಿಂಗ್, ಬೌಲಿಂಗ್ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರಿದ್ದೇ ಟ್ರೋಫಿ ಗೆಲುವಿಗೆ ಪ್ರಮುಖ ಕಾರಣವಾಯಿತು. ಅಷ್ಟರ ಮಟ್ಟಿಗೆ ಬಲಿಷ್ಠ ತಂಡವನ್ನು ಕಟ್ಟಿದೆ.

ಮುಂದಿನ ಬಾರಿಗೆ ಬಹುತೇಕ ಕಳೆದ ಬಾರಿಯ ಆಟಗಾರರನ್ನೇ ಆರ್‌ಸಿಬಿ ಉಳಿಸಿಕೊಂಡಿದ್ದು, ಇದೀಗ ಉಳಿದ ಹಣದಲ್ಲಿ ಇಂದು ನಡೆಯಲಿರುವ ಮಿನಿ ಹರಾಜಿನಲ್ಲಿ ಇಬ್ಬರು ಅಥವಾ ಮೂವರು ಸ್ಟಾರ್ ಆಟಗಾರರನ್ನು ಕೊಂಡುಕೊಳ್ಳಲು ಸಕಲ ತಯಾರಿ ನಡೆಸಿದೆ. ಈ ಮೂಲಕ ತಂಡವನ್ನು ಮತ್ತಷ್ಟು ಬಲಗೊಳಿಸುವುತ್ತ ಚಿಂತನೆ ನಡೆಸಿದೆ. ಹಾಗಾದ್ರೆ, ಈ ಬಾರಿ ಪ್ಲೇಯಿಂಗ್ 11 ಕಳೆದ ಬಾರಿಯಂತೆ ಇರಲಿದೆ ಎನ್ನಲಾಗುತ್ತಿದೆ. ಯಾವುದೇ ದೊಡ್ಡ ಬದಲಾವಣೆ ಇರುವುದಿಲ್ಲ.
ಆರ್‌ಸಿಬಿ ಪ್ಲೇಯಿಂಗ್ 11: ಈಗಾಗಲೇ ತಂಡ ಸ್ಟಾರ್ ಆಟಗಾರರನ್ನೇ ಒಳಗೊಂಡಿದ್ದು, ಮುಂದಿನ ಬಾರಿಯೂ ಟ್ರೋಫಿ ಮುಡಿಗೇರಿಸಿಕೊಳ್ಳುವತ್ತ ಗಮನಹರಿಸಿದೆ. ಪ್ಲೇಯಿಂಗ್ 11ನಲ್ಲಿ ಯಾರೆಲ್ಲಾ ಕಾಣಿಸಿಕೊಳ್ಳಲಿದ್ದಾರೆ ಎಂದು ನೋಡೋದಾದ್ರೆ, ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿ.ಕೀ.), ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.
ಒಂದು ವೇಳೆ ಇವರಲ್ಲಿ ಯಾರಾದರೂ ಗಾಯದಿಂದ ಹೊರಗುಳಿದರೆ, ಅವರ ಸ್ಥಾನ ತುಂಬಬಲ್ಲ ಆಟಗಾರರು ಆರ್‌ಸಿಬಿ ಆಟಗಾರರು ಇದ್ದಾರೆ. ಆದರೂ, ಮತ್ತಿಬ್ಬರು ಸ್ಟಾರ್ ಆಟಗಾರರು ಇರಲಿ ಎನ್ನುವ ಉದ್ದೇಶದಿಂದ ಆರ್‌ಸಿಬಿ ಮಿನಿ ಹರಾಜಿನಲ್ಲಿ ಇಂದು ಜಿದ್ದಾಜಿದ್ದಿಗೆ ಬೀಳುವುದಂತೂ ಖಂಡಿತ.
ಪ್ರಸ್ತುತ ಆರ್‌ಸಿಬಿ ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಸಿಖ್ ಸಲಾಮ್, ಅಭಿನಂದನ್ ಸಿಂಗ್, ಸುಶೇಷ್ ಶರ್ಮಾ.
ಕಳೆದ ಬಾರಿಯಂತೆ ಮುಂದಿನ ಬಾರಿಯೂ ಬ್ಯಾಟಿಂಗ್‌ಗೆ ಆರಂಭಿಕರಾಗಿ ವಿರಾಟ್‌ಕೊಹ್ಲಿ ಜೊತೆ ಹೊಡಿಬಡಿ ದಾಂಡಿಗ ಫಿಲ್ ಸಾಲ್ಟ್ ಕಣಕ್ಕಿಳಿಯಲಿದ್ದಾರೆ. ಬಳಿಕ ಕನ್ನಡಿಗ ದೇವದತ್ ಪಡಿಕ್ಕಲ್ ಮತ್ತು ನಾಯಕ ರಜತ್ ಪಾಟಿದಾರ್ ಬರಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮತ್ತೊಬ್ಬ ಹಿಟ್ಟರ್ ಟಿಮ್ ಡೇವಿಡ್ ಬರಲಿದ್ದು, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯೆ ಫಿನಿಶಿಂಗ್ ಜವಾಬ್ದಾರಿ ಹೊರಬೇಕಿದೆ. ಇವರ ಜೊತೆ ಅವಕಾಶ ಸಿಕ್ಕಂರೆ ಬ್ಲ್ಯಾಕ್ ಡ್ರ್ಯಗನ್ ರೊಮಾರಿಯೋ ಶೆಫರ್ಡ್ ಸಹ ಎಂಟ್ರಿ ಕೊಡುವ ಸಾಧ್ಯತೆ ಹೆಚ್ಚಿದೆ. ಹೀಗೆ ಬ್ಯಾಟಿಂಗ್‌ನಲ್ಲಿ ತಂಡ ಬಲಿಷ್ಠವಾಗಿದೆ.
ಬೌಲಿಂಗ್ ವಿಭಾಗದಲ್ಲಿ ರೊಮಾರಿಯೋ ಶೆಫರ್ಡ್ (ಆಲ್‌ರೌಂಡರ್), ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್ ಕಾಣಿಸಿಕೊಳ್ಳಲಿದ್ದು, ಕೃನಾಲ್ ಪಾಂಡ್ಯ ಸ್ಪಿನ್ ಆಲ್‌ರೌಂಡರ್ ಆಗಿ ಬರಲಿದ್ದಾರೆ. ಇವರಿಗೆ ಬಲ ತುಂಬಲು ಸುಯೇಷ್ ಶರ್ಮಾ ಕೂಡ ಇದ್ದು, ಬೌಲಿಂಗ್‌ನಲ್ಲಿ ಎದುರಾಳಿಗಳನ್ನು ಕಟ್ಟಿ ಹಾಕುವ ಸಾಮರ್ಥ್ಯವನ್ನು ತಂಡ ಹೊಂದಿದೆ.
ಆದರೂ ಒಂದು ವೇಳೆ ಯಶ್ ದಯಾಳ್ ಅಥವಾ ಜೋಶ್ ಹ್ಯಾಜಲ್‌ವುಡ್ ಗಾಯಗೊಂಡು ಹೊರಗುಳಿದರೆ, ಇವರಿಗೆ ಮತ್ತೊಬ್ಬರು ಸಾಥ್ ನೀಡಲು ಬೇಕೇ ಬೇಕಾಗುತ್ತದೆ. ಆದ್ದರಿಂದ ಆರ್‌ಸಿಬಿ ಇದೀಗ ಒಬ್ಬ ಸ್ಪಿನ್ ಬೌಲರ್ ಜೊತೆ ಸ್ಪೀಡ್ ಬೌಲರ್ ಕೊಂಡುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications