ಐಪಿಎಲ್ 2026 ಹರಾಜು ದಿನಾಂಕ ಘೋಷಿಸಿದ ಬಿಸಿಸಿಐ: ಎಲ್ಲಿ & ಯಾವಾಗ? ಇಲ್ಲಿದೆ ಮಾಹಿತಿ
IPL 2026 Auction: ಐಪಿಎಲ್ 2026ಕ್ಕೆ ಎಲ್ಲಾ 10 ಪ್ರಾಂಚೈಸಿಗಳು ಸಕಲ ಸಿದ್ಧತೆ ನಡೆಸಿದ್ದು, ಈಗಾಗಲೇ ಕೆಲ ಆಟಗಾರರನ್ನು ಕೈಬಿಟ್ಟು ಉಳಿದವರನ್ನು ಉಳಿಸಿಕೊಂಡಿವೆ. ಈ ಪ್ರಕ್ರಿಯೆ ಬೆನ್ನಲ್ಲೇ ಇದೀಗ ಐಪಿಎಲ್ ಹರಾಜಿಗೆ ಬಿಸಿಸಿಐ ಮುಹೂರ್ತ ಫಿಕ್ಸ್ ಮಾಡಿದೆ. ಹಾಗಾದ್ರೆ ಯಾವಾಗ ಹಾಗೂ ಎಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ ಹರಾಜು ಡಿಸೆಂಬರ್ 16ರಂದು ಅಬುಧಾಬಿಯ ಎತಿಹಾದ್ ಅರೆನಾದಲ್ಲಿ ನಡೆಯಲಿದೆ ಎಂದು ಬಿಸಿಸಿಐ ದೃಢಪಡಿಸಿದೆ. ಸತತ 3ನೇ ವರ್ಷ ವಿದೇಶದಲ್ಲಿ ಐಪಿಎಲ್ ಹರಾಜು ನಡೆಯುತ್ತಿದೆ. ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರನ್ನು ಪ್ರಕಟ ಮಾಡಿದ ಬಳಿಕ ಈ ಮಹತ್ವದ ಬೆಳವಣಿಗೆ ನಡೆದಿದೆ.

ಈಗಾಗಲೇ ಒಟ್ಟು 49 ವಿದೇಶಿ ಆಟಗಾರರು ಸೇರಿದಂತೆ 173 ಆಟಗಾರರನ್ನು ತಂಡಗಳಲ್ಲಿ ಉಳಿಸಿಕೊಳ್ಳಲಾಗಿದೆ. ಈ ಮೂಲಕ 77 ಆಟಗಾರರ ಸ್ಲಾಟ್‌ಗಳ ಹರಾಜಿನಲ್ಲಿ 237.55 ಕೋಟಿ ರೂಪಾಯಿ ಸಂಯೋಜಿತ ಹಣ ಉಳಿದಿದೆ. ಹಾಗಾದ್ರೆ ಮಿನಿ ಹರಾಜಿಗೆ ಯಾವ ತಂಡ ಎಷ್ಟು ಹಣ ಉಳಿಸಿಕೊಂಡಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಯಾವ ತಂಡ ಎಷ್ಟು ಹಣ ಉಳಿಸಿಕೊಂಡಿದೆ?
ಕೆಕೆಆರ್ - 64.3 ಕೋಟಿ ರೂಪಾಯಿ
ಸಿಎಸ್‌ಕೆ - 43.4 ಕೋಟಿ ರೂಪಾಯಿ
ಎಸ್‌ಆರ್‌ಎಚ್ - 25.5 ಕೋಟಿ ರೂಪಾಯಿ
ಎಲ್‌ಎಸ್‌ಜಿ - 22.95 ಕೋಟಿ ರೂಪಾಯಿ
ಡೆಲ್ಲಿ ಕ್ಯಾಪಿಟಲ್ಸ್ - 21.8 ಕೋಟಿ
ಆರ್‌ಸಿಬಿ - 16.4 ಕೋಟಿ ರೂಪಾಯಿ
ಆರ್‌ಆರ್ - 16.05 ಕೋಟಿ ರೂಪಾಯಿ
ಜಿಟಿ - 12.9 ಕೋಟಿ ರೂಪಾಯಿ
ಪಿಬಿಕೆಎಸ್ - 11.5 ಕೋಟಿ ರೂಪಾಯಿ
ಎಂಐ - 2.75 ಕೋಟಿ ರೂಪಾಯಿ
ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ರಿಟೈನ್ ಹಾಗೂ ರಿಲೀಸ್ ಆಟಗಾರರ ಪಟ್ಟಿಯನ್ನು ಪ್ರಕಟ ಮಾಡಿವೆ. ಈ ಮೂಲಕ ಇದೀಗ ಹರಾಜಿಗೆ ಭರ್ಜರಿ ಸಿದ್ಧತೆಗಳನ್ನು ಆರಂಭ ಮಾಡಿಕೊಳ್ಳಲಾಗಿದೆ. ಅದರಂತೆಯೇ ಎಲ್ಲಾ ಫ್ರಾಂಚೈಸಿಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಮಾತ್ರ ಮಿನಿ ಆಕ್ಷನ್ ಪ್ರಕ್ರಿಯೆ ನಡೆಯಲಿದೆ.
ಇದೀಗ ಹರಾಜಿಗೆ ಆಟಗಾರರ ಹೆಸರು ನೊಂದಾಣಿ ಪ್ರಕ್ರಿಯೆ ಸಿದ್ಧತೆ ನಡೆದಿದೆ. ಇದು ಪೂರ್ಣಗೊಂಡ ಬಳಿಕ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಇದರಲ್ಲಿ ಸ್ಥಾನ ಪಡೆದ ಆಟಗಾರರ ಹೆಸರುಗಳು ಮಾತ್ರ ಡಿಸೆಂಬರ್ 16ರಂದು ನಡೆಯಲಿರುವ ಹರಾಜಿನಲ್ಲಿ ಕಾಣಿಸಿಕೊಳ್ಳಲಿವೆ.ಆಗ ಯಾವ ತಂಡ ಯಾರನ್ನು ಎಷ್ಟಕ್ಕೆ ಕೊಂಡುಕೊಳ್ಳಲಿದೆ ಎಂದು ಕಾದುನೋಡಬೇಕಿದೆ. ಈ ಕ್ಷಣಕ್ಕಾಗಿ ಎಲ್ಲಾ ತಂಡಗಳು ಭರ್ಜರಿ ಸಿದ್ಧತೆ ನಡೆಸಿವೆ. ಕೆಲ ಟೀಂಗಳಿಗೆ ಈಗಾಗಲೇ ಬಹುತೇಕ ಕಳೆದ ಬಾರಿಯ ಆಟಗಾರರೇ ಮುಂದುವರೆಯಲದ್ದು, ಇಂತಹ ತಂಡಗಳು ಒಬ್ಬರು ಅಥವಾ ಇಬ್ಬರನ್ನು ಕೊಂಡುಕೊಳ್ಳುವ ಸಾಧ್ಯತೆಯಿದೆ. ಅಥವಾ ಖರೀದಿ ಮಾಡದೆಯೂ ಇರಬಹುದು. ಆದರೆ, ತುಂಬಾ ಮಂದು ಆಟಗಾರರನ್ನು ಬಿಡುಗಡೆಗೊಳಿಸಿದ ಪ್ರಾಂಚೈಸಿಗಳು ಮಾತ್ರ ಆಟಗಾರರನ್ನು ಖರೀದಿಸಲು ತುದಿಗಾಲಲ್ಲಿ ಕಾದು ಕುಳಿತಿವೆ.












Click it and Unblock the Notifications