IPL 2026: 'ಕ್ರಿಕೆಟ್ ದೇವರ' ಮಗ ಸೇರಿ 10 ಸ್ಟಾರ್ ಆಟಗಾರರು ರಿಟೈನ್ಗೂ ಮುನ್ನ ಟ್ರೇಡ್.. ತಂಡ ಹಾಗೂ ಮೊತ್ತವೆಷ್ಟು?
IPL 2026 Trade: ಈಗಾಗಲೇ 2025ರ ಐಪಿಎಲ್ ಆವೃತ್ತಿ ಮುಕ್ತಾಯವಾಗಿದ್ದು, ಇದೀಗ ಎಲ್ಲರ ಚಿತ್ತ 19ನೇ ಆವೃತ್ತಿಯತ್ತ ನೆಟ್ಟಿದೆ. ಮುಂದಿನ ಸೀಸನ್ ರಿಟೈನ್ ಇಂದು (ನವೆಂಬರ್ 15) ನಡೆಯಲಿದೆ. ಇದಕ್ಕೂ ಮುನ್ನ ಕ್ರಿಕೆಟ್ ದೇವರ ಪುತ್ರ ಸೇರಿದಂತೆ 10 ಸ್ಟಾರ್ ಆಟಗಾರರು ಟ್ರೇಡ್ ಆಗಿದ್ದಾರೆ. ಹಾಗಾದ್ರೆ ಅವರು ಯಾರು? ಯಾವ ಟೀಂ ಹಾಗೂ ಎಷ್ಟು ಮೊತ್ತಕ್ಕೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ 2026 ರಿಟೈನ್ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಇದಕ್ಕೂ ಮುನ್ನ 10 ಸ್ಟಾರ್ ಆಟಗಾರರು ಟ್ರೇಡ್ ಆಗಿದ್ದಾರೆ. ಈ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್, ರವೀಂದ್ರ ಜಡೇಜ ಕೂಡ ಇದ್ದಾರೆ. ಹಾಗಾದ್ರೆ ಇವರಿಗೆಲ್ಲಾ ಎಷ್ಟು ಮೊತ್ತ ನೀಡಿ ಯಾವ ತಂಡಕ್ಕೆ ಬರಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ರಿಟೆನ್ಷನ್ಗೂ ಮುಂಚೆ 10 ಫ್ರಾಂಚೈಸಿಗಳಿಗೆ ಆಟಗಾರರ ಟ್ರೇಡಿಂಗ್ಗೆ ಅವಕಾಶ ಕಲ್ಪಿಸಲಾಗಿದೆ. ಇದರಂತೆಯೇ ಕೆಲ ಫ್ರಾಂಚೈಸಿಗಳು ಈಗಾಗಲೇ ಬೇರೆ ತಂಡಗಳಲ್ಲಿ ಇದ್ದ ಆಟಗಾರರನ್ನು ತಮ್ಮ ತಂಡಕ್ಕೆ ಬರಮಾಡಿಕೊಂಡಿವೆ. ಕೆಲವರು ಸ್ವಾಪ್ ಡೀಲ್ ಮೂಲಕ ಟ್ರೇಡ್ ಆದರೆ, ಇನ್ನೂ ಕೆಲವರು ಆಟಗಾರು ಕ್ಯಾಶ್ ಡೀಲ್ ಮೂಲಕ ಬೇರೆ ತಂಡಗಳಿಗೆ ಸೇರ್ಪಡೆ ಆಗಿದ್ದಾರೆ.
ಅದರಲ್ಲೂ ಪ್ರಮುಖವಾಗಿ ನಾಯಕನಾಗಿ ಆರ್ಆರ್ ತಂಡ ಮುನ್ನಡೆಸಿದ್ದ ಸಂಜು ಸ್ಯಾಮ್ಸನ್ ಅವರು ಚೈನ್ನೈ ಸೂಪರ್ ಕಿಂಗ್ಸ್ಗೆ ಸೇರ್ಪಡೆಯಾಗಿದ್ದಾರೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ, ಸ್ಯಾಮ್ ಕರನ್ ಅವರನ್ನು ನೀಡಿ ಸಂಜು ಸ್ಯಾಮ್ಸನ್ ಅವರನ್ನು ಸ್ವಾಪ್ ಡೀಲ್ ಮಾಡಿಕೊಂಡಿದೆ.
ಟ್ರೇಡ್ ಆದ 10 ಆಟಗಾರರಿಗೆ ನೀಡಲಾದ ಮೊತ್ತವೆಷ್ಟು?
* ಸಂಜು ಸ್ಯಾಮ್ಸನ್ಗೆ ಸಿಎಸ್ಕೆ ರಾಜಸ್ಥಾನ್ ರಾಯಲ್ಸ್ನಿಂದ ಅದೇ 18,00,00,000 ರೂಪಾಯಿಗೆ ಕೊಟ್ಟು ಬರಮಾಡಿಕೊಂಡಿದೆ.
* ರವೀಂದ್ರ ಜಡೇಜಾ ಅವರನ್ನು ಸಿಎಸ್ಕೆಯಿಂದ ಆರ್ಆರ್ 14,00,00,000 ಕೋಟಿ ರೂಪಾಯಿ ಕೊಟ್ಟು ಸ್ವಾಗತಿಸಿದೆ.
* ಸ್ಯಾಮ್ ಕರನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ನಿಂದ ರಾಜಸ್ಥಾನ್ ರಾಯಲ್ಸ್ 2.4 ಕೋಟಿ ರೂಪಾಯಿ ನೀಡಿ ಸೇರ್ಪಡೆಮಾಡಿಕೊಂಡಿದೆ.
* ಸನ್ರೈಸರ್ಸ್ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ (LSG) 10,00,00,000 ಕೋಟಿ ರೂಪಾಯಿ ನೀಡಿ ಖರೀದಿಸಿದೆ.
* ಶಾರ್ದೂಲ್ ಠಾಕೂರ್ ಅವರನ್ನು ಲಖನೌ ಸೂಪರ್ ಜೈಂಟ್ಸ್ನಿಂದ ಮುಂಬೈ ಇಂಡಿಯನ್ಸ್ 2,00,00,000 ರೂಪಾಯಿ ನೀಡಿ ಖರೀದಿಸಿದೆ.
* ಮಯಂಕ್ ಮಾರ್ಕಂಡೆ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆ ಆಗಿದ್ದಾರೆ. ಅವರು ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಪರ ಆಡಿದ್ದರು. ಇದೀಗ ಅವರನ್ನು ಮುಂಬೈ ಇಂಡಿಯನ್ಸ್ 30,00,000 ರೂಪಾಯಿ ನೀಡಿ ಟ್ರೇಡ್ ಮಾಡಿಕೊಂಡಿದೆ.
* ಕಳೆದ ಬಾರಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಇದೀಗ ಲಕ್ನೋ ಸೂಪರ್ ಜೈಂಟ್ಸ್ (LSG) 30,00,000 ರೂಪಾಯಿಗೆ ಖರೀದಿ ಮಾಡಿಕೊಂಡಿದೆ.
* ಶೆರ್ಫಾನ್ ರುದರ್ಫೋರ್ಡ್ ಅವರನ್ನು ಗುಜರಾತ್ ಟೈಟನ್ಸ್ನಿಂದ ಮುಂಬೈ ಇಂಡಿಯನ್ಸ್ 2.6 ಕೋಟಿ ರೂಪಾಯಿ ನೀಡಿ ಟ್ರೇಡ್ ಮಾಡಿಕೊಂಡಿದೆ.
* ಕಳೆದ ಬಾರಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ನಿತೀಶ್ ರಾಣಾ ಅವರನು ಇದೀಗ ಡೆಲ್ಲಿ ಕ್ಯಾಪಿಟಲ್ಸ್ 4.2 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.
* ಡೊನೋವನ್ ಫೆರೇರಾ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ನಿಂದ ರಾಜಸ್ಥಾನ್ ರಾಯಲ್ಸ್ಗೆ 75,00,000 ರೂಪಾಯಿಗೆ ಟ್ರೇಡ್ ಮಾಡಿಕೊಳ್ಳಲಾಗಿದೆ.
ಟ್ರೇಡ್ ಆದ ಸ್ಟಾರ್ ಆಟಗಾರರು
* ಸಂಜು ಸ್ಯಾಮ್ಸನ್
* ರವೀಂದ್ರ ಜಡೇಜಾ
* ಸ್ಯಾಮ್ ಕರನ್
* ಮೊಹಮ್ಮದ್ ಶಮಿ
* ಶಾರ್ದೂಲ್ ಠಾಕೂರ್
* ಮಯಂಕ್ ಮಾರ್ಕಂಡೆ
* ಅರ್ಜುನ್ ತೆಂಡೂಲ್ಕರ್
* ಶೆರ್ಫಾನ್ ರುದರ್ಫೋರ್ಡ್
* ನಿತೀಶ್ ರಾಣಾ
* ಡೊನೋವನ್ ಫೆರೇರಾ
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications