ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಸೋಲಿನ ಬೆನ್ನಲ್ಲೇ ಆರ್‌ಆರ್ ಸಿಇಒ ಹೋಗಿದ್ದೆಲ್ಲಿಗೆ? ವಿಡಿಯೋ ಭಾರೀ ವೈರಲ್
IPL 2025 RCB Vs RR: ಇತ್ತೀಚೆಗಷ್ಟೇ ತವರು ಮೈದಾನ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ತಂಡವು ಆರ್‌ಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಇನ್ನೂ ಸೋಲಿನ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್ ತಂಡದ ಸಿಇಒ ಅವರು ನಡುರಸ್ತೆಯಲ್ಲಿ ನಡೆದುಕೊಂಡು ಆ ಜಾಗಕ್ಕೆ ಹೋಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಹಾಗಾದ್ರೆ ಅವರು ಹೋಗಿದ್ದೆಲ್ಲಿಗೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ಆಟ ಅಂದಮೇಲೆ ಸೋಲು ಗೆಲುವು ಇದ್ದೇ ಇರುತ್ತದೆ. ಆದರೆ ಆರ್‌ಸಿಬಿ ಅಭಿಮಾನಿಗಳಿಗೆ ಇವೆರಡಕ್ಕಿಂತಲೂ ತಂಡದ ಮೇಲಿನ ಅಭಿಮಾನವೇ ಹೆಚ್ಚು. ಸೋಲಲಿ ಗೆಲ್ಲಲ್ಲಿ ಆರ್‌ಸಿಬಿ ಮೇಲಿನ ಅಭಿಮಾನ ಮಾತ್ರ ಹೆಚ್ಚಾಗುತ್ತದೆಯೇ ಹೊರತು ದಕಡಿಮೆ ಆಗುವುದಿಲ್ಲ ಅಂತಿದ್ದಾರೆ. ಅಲ್ಲದೆ, ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರರುವ ತಂಡ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾತ್ರ ಅಂದರೆ ತಪ್ಪಾಗಲಾರದು.

ಎಷ್ಟೇ ಬಾರಿ ಸೋತರೂ ಮುಂದಿನ ಬಾರಿಯಾದರೂ ನಮ್ಮ ತಂಡ ಗೆದ್ದೇ ಗೆಲ್ಲುತ್ತದೆ ಎಂದು ಭರವಸೆಯಲ್ಲಿ ಇರುತ್ತಾರೆ. ಇನ್ನು ಈ ಆವೃತ್ತಿಯಲ್ಲಿ ಆರ್‌ಸಿಬಿ ತವರಿನಿಂದ ಆಚೇ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು, ತವರಿನಲ್ಲಿ ಮಾತ್ರ ಸತತ ಮೂರು ಪಂದ್ಯಗಳನ್ನು ಸೋತಿತ್ತು. ಆದರೆ, ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದಿದ್ದು, ಇದು ತವರಿನಲ್ಲಿ ಗೆದ್ದ ಮೊದಲ ಪಂದ್ಯವಾಗಿದೆ. ತವರಿನಲ್ಲಿ ಒಂದು ಪಂದ್ಯ ಗೆದ್ದಿದ್ದಕ್ಕೆ ಫೈನಲ್ ಗೆದ್ದಿದೆ ಎನ್ನುವ ಮಟ್ಟಿಗೆ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು.
ಇನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭಿಮಾನಿಗಳ ಅದ್ಧೂರಿ ಸಂಭ್ರಮ ಕಂಡ ಆರ್‌ಆರ್ ತಂಡದ ಆಟಗಾರರು ಹಾಗೂ ಮ್ಯಾನೇಜ್‌ಮೆಂಟ್ ಅಚ್ಚರಿಗೊಳಗಾದರು. ಅಷ್ಟೇ ಅಲ್ಲದೆ, ಪಂದ್ಯ ಸೋತ ಬಳಿಕ ರಾಜಸ್ತಾನ್ ರಾಯಲ್ಸ್ ತಂಡದ ಸಿಇಒ ಬೆಜಾರಿನಿಂದ ರಸ್ತೆಯಲ್ಲಿ ಟಾನಿಕ್ ಕಡೆ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು 11 ರನ್‌ಗಳಿಂದ ಸೋಲಿಸಿತು. ಈ ಸೋಲಿನ ಬಳಿಕ ರಾಜಸ್ಥಾನ ರಾಯಲ್ಸ್ ತಂಡದ ಸಿಇಒ ಜೇಕ್ ಲಶ್ ಮೆಕ್ರಮ್ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲು ವೈರಲ್ ಆಗುತ್ತಿದೆ. ಇದರಲ್ಲಿ ಅವರು ಟಾನಿಕ್ ಲಿಕ್ಕರ್ ಶಾಪ್ಗೆ ಭೇಟಿ ನೀಡುತ್ತಿರುವುದು ಕಂಡುಬಂದಿದೆ.
ಆರ್‌ಸಿಬಿ ತವರಿನಲ್ಲಿ ಆರ್‌ಆರ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಆರ್‌ಸಿಬಿ ಈ ಆವೃತ್ತಿಯಲ್ಲಿ ಆಡಿದ 9 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿ 12 ಅಂಕಗಳನ್ನು ಪಡೆಯುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ಏರಿದೆ.
🤣🤣🤣😭😭😭💀💀💀
— Santoshvk18 (@VK18foreverrr) April 25, 2025
RR owner wanted some drink to forget that match #RCBvRR
pic.twitter.com/8FRc1I7kZa
ಮತ್ತೊಂದೆಡೆ ರಾಜಸ್ಥಾನ್ ಆಡಿದ 9 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದು 7ರಲ್ಲಿ ಸೋಲುವ ಮೂಲಕ 4 ಅಂಕಗಳನ್ನು ಪಡದದು 8ನೇ ಸ್ಥಾನದಲ್ಲಿದ್ದು, ಬಹುತೇಕ ಪ್ಲೇ ಆಫ್ನಿಂದ ಹೊರಬಿದ್ದಿದೆ. ಒಂದು ವೇಳೆ ಆರ್ಸಿಬಿ ವಿರುದ್ಧ ಗೆಲುವು ಸಾಧಿಸಿದ್ದರೆ ರಾಜಸ್ಥಾನ ತಂಡಕ್ಕೆ ಪ್ಲೇ ಆಫ್ಗೆ ಹೋಗುವ ಸಾಧ್ಯತೆ ಇತ್ತು. ಆದರೆ ಈಗ ಆ ಆಸೆ ಕೂಡ ನುಚ್ಚುನೂರಾದಂತಾಗಿದೆ.
ಇನ್ನು ತಂಡದ ಸೋಲಿನ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್ ಸಿಇಒ ಮೆಕ್ರಮ್ ಚಿನ್ನಸ್ವಾಮಿ ಕ್ರೀಡಾಂಗಣ ಪಕ್ಕದಲ್ಲಿರುವ ಲಿಕ್ಕರ್ ಶಾಲ್ ಟಾನಿಕ್ ಕಡೆಗೆ ಹೋಗಿದ್ದಾರೆ. ಈ ವಿಡಿಯೋವನ್ನು ಆರ್‌ಸಿಬಿ ಬೆಂಬಲಿಗರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. Santoshvk18 ಎನ್ನುವ ಖಾತೆಯಿಂದ ಈ ವಿಡಿಯೋ ಹಂಚಿಕೆಯಾಗಿದೆ.
ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡವು ನಿಗದಿತ 20 ಓವರ್ಗಳಿಗೆ 5 ವಿಕೆಟ್ ಕಳೆದುಕೊಂಡು 205 ರನ್‌ಗಳನ್ನು ಕಲೆಹಾಕಿ 206 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ್ದ ಆರ್‌ಆರ್ ನಿಗದಿತ 20 ಓವರ್ಗೆ 9 ವಿಕೆಟ್ ನಷ್ಟಕ್ಕೆ 194 ರನ್‌ಗಳನ್ನು ಮಾತ್ರ ಗಳಿಸಿ ಸೋಲನುಭವಿಸಿತು.
ವಿರಾಟ್ ಕೊಹ್ಲಿ 70 ಮತ್ತು ದೇವದತ್ ಪಡಿಕ್ಕಲ್ 50 ರನ್‌ಗಳಿಸಿ ತಂಡ ಬೃಹತ್ ರನ್ ಕಲೆಹಾಕಲು ನೆರವಾದರು. ಬಳಿಕ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ ಆರಂಭದಲ್ಲಿ ಉತ್ತರ ಪ್ರದರ್ಶನ್ ತೋರಿತು. ಆದರೆ, ಆರ್‌ಸಿಬಿ ಬೌಲರ್‌ಗಳನ್ನು ಒಂದೊಂದೇ ವಿಕೆಟ್ ಕೀಳಲು ಪ್ರಾರಂಭಿಸಿದರು. ಪ್ರಮುಖವಾಗಿ ಜೋಶ್ ಹ್ಯಾಜಲ್‌ವುಡ್ ಕೊನೇ ಹಂತದಲ್ಲಿ ಮಾರಕ ಬೌಲಿಂಗ್ ಪ್ರದರ್ಶನ ಮಾಡುವ ಮೂಲಕ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ಶುಭ್ಮನ್ ಗಿಲ್ ಭೇಟಿಯಾದ ಅನನ್ಯಾ ಬಿರ್ಲಾ; ಆರ್ಸಿಬಿ ಹೊಸ ಮಾಲೀಕನ ಸಹೋದರಿಗೆ ಗುಜರಾತ್ ಜೆರ್ಸಿನಾ ಎಂದ ನೆಟ್ಟಿಗರು -
IPL 2026: ಆರ್ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಐಪಿಎಲ್ ಟಿಕೆಟ್ ಇದ್ದರೆ 'ನಮ್ಮ ಮೆಟ್ರೋ' ಪ್ರಯಾಣ ಉಚಿತ -
IPL 2026: ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಪಂದ್ಯ, ಮಾರ್ಚ್ 28ಕ್ಕೆ ಬೆಂಗಳೂರಿನ ಯಾವ ರಸ್ತೆಗಳೆಲ್ಲ ಬಂದ್ ಆಗಲಿದೆ? ಇಲ್ಲಿದೆ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ












Click it and Unblock the Notifications