IPL 2025 Retenstion: ಐಪಿಎಲ್ ರಿಟೆನ್ಷನ್‌ ನೇರ ಪ್ರಸಾರ, ಸಮಯ; ಮಾಹಿತಿ, ವಿವರ

ಐಪಿಎಲ್ 2025ರ ಮೆಗಾ ಹರಾಜಿಗೆ ಮುನ್ನ ಎಲ್ಲಾ ಪ್ರಾಂಚೈಸಿಗಳಿಗೆ ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ರಿಟೆನ್ಷನ್‌ ಪಟ್ಟಿಯನ್ನು ಇಂದು ಬಿಡಗಡೆ ಮಾಡಲಿವೆ. ಅಕ್ಟೋಬರ್ 30ರಂದು ರಿಟೆನ್ಷನ್ ಪಟ್ಟಿಯನ್ನು ಸಲ್ಲಿಸಲು ಕೊನೆಯ ದಿನವಾಗಿದ್ದು, ಎಲ್ಲಾ ತಂಡಗಳು ಈಗಾಗಲೇ ತಾವು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಳಿತ ಮಂಡಳಿಗೆ ಸಲ್ಲಿಸಿವೆ.

ಅಕ್ಟೋಬರ್ 31ರ ಗುರುವಾರ (ಇಂದು) ಸಂಜೆ ಈ ಪಟ್ಟಿಯನ್ನು ಬಹಿರಂಗಗೊಳಿಸಲಾಗುತ್ತದೆ. ಐಪಿಎಲ್ ಅಭಿಮಾನಿಗಳು ಈ ಬಗ್ಗೆ ಭಾರಿ ಕುತೂಹಲದಿಂದ ಕಾಯುತ್ತಿದ್ದಾರೆ. ಮೆಗಾ ಹರಾಜು ಇರುವ ಕಾರಣ ಹಲವು ಪ್ರಮುಖ ಆಟಗಾರರು ತಂಡವನ್ನು ಬಿಟ್ಟು ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮುಖ್ಯವಾಗಿ ರೋಹಿತ್ ಶರ್ಮಾ, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಶಮಿ ಅವರಂತಹ ಆಟಗಾರರು ತಂಡದಿಂದ ಹೊರಬರುವ ಬಗ್ಗೆ ಸುದ್ದಿಯಾಗಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

ipl 2025 retention live streaming watch online tv details

ಕಳೆದ ಆವೃತ್ತಿಯಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು, ಹಾರ್ದಿಕ್ ಪಾಂಡ್ಯ ನಾಯಕರಾದ ಬಳಿಕ ರೋಹಿತ್ ಶರ್ಮಾ ಅಭಿಮಾನಿಗಳು ಸಿಟ್ಟಾಗಿದ್ದರು. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ಜೊತೆ ಇದೇ ನನ್ನ ಕೊನೆಯ ಆವೃತ್ತಿ ಎನ್ನುವ ರೀತಿ ಮಾತನಾಡಿದ್ದ ವಿಡಿಯೋ ವೈರಲ್ ಕೂಡ ಆಗಿತ್ತು. ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವರು ಉಳಿಯುತ್ತಾರಾ ಇಲ್ಲ ಹರಾಜಿಗೆ ಬರುತ್ತಾರ ಎನ್ನುವ ಬಗ್ಗೆ ಹಿಟ್ ಮ್ಯಾನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಮತ್ತೊಂದು ಕಡೆ ರಿಷಬ್ ಪಂತ್, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ನಾಯಕತ್ವ ವಿಚಾರದಲ್ಲಿ ತಂಡದ ಆಡಳಿತ ಮಂಡಳಿ ಜೊತೆ ಮನಸ್ತಾಪ ಉಂಟಾಗಿದೆ ಎನ್ನುವ ಸುದ್ದಿ ಇದೆ. ಅಕ್ಷರ್ ಪಟೇಲ್‌ಗೆ ನಾಯಕತ್ವ ನೀಡಲು ಮಂಡಳಿ ಚಿಂತಿಸಿದ್ದು, ಪಂತ್ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದ್ದು, ಹರಾಜಿಗೆ ಬರುವ ಬಗ್ಗೆ ಪಂತ್ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

2024ರ ಐಪಿಎಲ್‌ನಲ್ಲಿ ಕೆಕೆಆರ್ ತಂಡಕ್ಕೆ ಪ್ರಶಸ್ತಿ ತಂದುಕೊಡುವಲ್ಲಿ ಯಶಸ್ವಿಯಾಗಿದ್ದ ಶ್ರೇಯಸ್ ಅಯ್ಯರ್ ಕೂಡ ತಂಡವನ್ನು ಬಿಡಲಿದ್ದಾರೆ ಎನ್ನುವ ಸುದ್ದಿ ಇದೆ. ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹೋಗುವ ಸಾಧ್ಯತೆ ಕೂಡ ಇದೆ ಎನ್ನಲಾಗಿದ್ದು ಇಂದು ಸಂಜೆ ಎಲ್ಲಾ ಕುತೂಹಲಗಳಿಗೆ ತೆರೆ ಬೀಳಲಿದೆ. ಮೆಗಾ ಹರಾಜಿಗಾಗಿ ಈ ಬಾರಿ ಎಲ್ಲಾ ಫ್ರಾಂಚೈಸಿಗಳಿಗೆ 120 ಕೋಟಿ ರೂಪಾಯಿ ಪರ್ಸ್ ನೀಡಲಾಗಿದೆ.

ರಿಟೆನ್ಷನ್‌ ಲೈವ್‌ ಯಾವಾಗ, ಎಲ್ಲಿ ನೋಡಬಹುದು?

ಇಂದು (ಗುರುವಾರ, ಅ. 31) ಸಂಜೆ 4 ಗಂಟೆಯಿಂದ ರಿಟೆನ್ಷನ್ ಪಟ್ಟಿ ಬಿಡುಗಡೆ ಆರಂಭವಾಗಲಿದೆ. ಟಿವಿಯಲ್ಲಿ ವೀಕ್ಷಣೆ ಮಾಡುವವರು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದಾಗಿದ್ದು, ಮೊಬೈಲ್‌ನಲ್ಲಿ ನೋಡುವವರು ಜಿಯೋ ಸಿನಿಮಾದಲ್ಲಿ ವೀಕ್ಷಣೆ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+