IPL 2025 RCB vs KKR: ಮೇ 17ರಿಂದ ಮತ್ತೆ ಐಪಿಎಲ್ ಹಬ್ಬ; ಬೆಂಗಳೂರಿನಲ್ಲೇ ಮೊದಲ ಪಂದ್ಯ
ಭಾರತ ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್ ಪಂದ್ಯಾವಳಿಯನ್ನು ಒಂದು ವಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಪರಿಸ್ಥಿತಿ ತಣ್ಣಗಾಗಿದ್ದು ಐಪಿಎಲ್ ಪಂದ್ಯಾವಳಿಯ ಉಳಿದ ಪಂದ್ಯಗಳನ್ನು ಮೇ 17ರಿಂದ ಆರಂಭಿಸಲಾಗುತ್ತಿದೆ. ಆದರೆ ವೇಳಾಪಟ್ಟಿಯನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ.
ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಧರ್ಮಶಾಲಾದಲ್ಲಿ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು, ಆ ಪಂದ್ಯವನ್ನು ಕೂಡ ಮೊದಲಿನಿಂದ ಆಡಿಸಲಾಗುತ್ತದೆ. ಆದರೆ ಮೇ 17ರಂದು ಬೆಂಗಳೂರಿನಲ್ಲಿ ಮೊದಲ ಪಂದ್ಯ ನಡೆಯಲಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೆಣೆಸಲಿದೆ.

ಕ್ವಾಲಿಫೈಯರ್, ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳ ಸ್ಥಳವನ್ನು ಬಳಿಕ ತಿಳಿಸುವುದಾಗಿ ಬಿಸಿಸಿಐ ಹೇಳಿದೆ. ಮೇ 25ರಂದು ಕೊನೆಯ ಲೀಗ್ ಹಂತದ ಪಂದ್ಯ ನಡೆಯಲಿದೆ. ಮೇ 29ರಂದು ಕ್ವಾಲಿಫೈಯರ್ 1, ಮೇ 30ರಂದು ಎಲಿಮಿನೇಟರ್ ಪಂದ್ಯ ನಡೆದರೆ, ಜೂನ್ 1 ರಂದು ಕ್ವಾಲಿಫೈಯರ್ 2 ಪಂದ್ಯ ನಡೆಯಲಿದ್ದು ಜೂನ್ 3ರಂದು ಫೈನಲ್ ಪಂದ್ಯ ನಡೆಯಲಿದೆ.
ಐಪಿಎಲ್ ಪರಿಷ್ಕೃತ ವೇಳಾಪಟ್ಟಿ
- ಮೇ 17, ಶನಿವಾರ- ಆರ್‌ಸಿಬಿ vs ಕೆಕೆಆರ್, ಸ್ಥಳ; ಬೆಂಗಳೂರು. ಸಂಜೆ 7.30 ರಿಂದ
- ಮೇ 18, ಭಾನುವಾರ- ರಾಜಸ್ಥಾನ ರಾಯಲ್ಸ್ vs ಪಂಜಾಬ್ ಕಿಂಗ್ಸ್, ಸ್ಥಳ; ಜೈಪುರ. ಮಧ್ಯಾಹ್ನ 3.30 ರಿಂದ
- ಮೇ 18, ಭಾನುವಾರ - ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟಾನ್ಸ್, ಸ್ಥಳ; ದೆಹಲಿ. ಸಂಜೆ 7.30 ರಿಂದ
- ಮೇ 19, ಸೋಮವಾರ - ಲಕ್ನೋ ಸೂಪರ್ ಜೈಂಟ್ಸ್ vs ಸನ್‌ರೈಸರ್ಸ್ ಹೈದರಾಬಾದ್, ಸ್ಥಳ; ಲಕ್ನೋ. ಸಂಜೆ 7.30 ರಿಂದ
- ಮೇ 20, ಮಂಗಳವಾರ - ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ ರಾಯಲ್ಸ್, ಸ್ಥಳ; ಜೈಪುರ. ಸಂಜೆ 7.30 ರಿಂದ
- ಮೇ 21, ಬುಧವಾರ - ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಸ್ಥಳ; ಮುಂಬೈ. ಸಂಜೆ 7.30 ರಿಂದ
- ಮೇ 22, ಗುರುವಾರ - ಗುಜರಾತ್ ಟೈಟಾನ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಸ್ಥಳ; ಅಹಮದಾಬಾದ್. ಸಂಜೆ 7.30 ರಿಂದ
- ಮೇ 23, ಶುಕ್ರವಾರ - ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್, ಸ್ಥಳ; ಬೆಂಗಳೂರು. ಸಂಜೆ 7.30 ರಿಂದ
- ಮೇ 24, ಶನಿವಾರ - ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಸ್ಥಳ; ಜೈಪುರ. ಸಂಜೆ 7.30 ರಿಂದ
- ಮೇ 25, ಭಾನುವಾರ- ಗುಜರಾತ್ ಟೈಟಾನ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಸ್ಥಳ; ಅಹಮದಾಬಾದ್. ಮಧ್ಯಾಹ್ನ 3.30 ರಿಂದ
- ಮೇ 25, ಭಾನುವಾರ- ಸನ್‌ರೈಸರ್ಸ್ ಹೈದರಾಬಾದ್ vs ಕೆಕೆಆರ್, ಸ್ಥಳ; ದೆಹಲಿ. ಸಂಜೆ 7.30 ರಿಂದ
- ಮೇ 26, ಸೋಮವಾರ - ಪಂಜಾಬ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್, ಸ್ಥಳ: ಜೈಪುರ, ಸಂಜೆ 7.30 ರಿಂದ
- ಮೇ 27, ಮಂಗಳವಾರ- ಆರ್‌ಸಿಬಿ vs ಲಕ್ನೋ ಸೂಪರ್ ಜೈಂಟ್ಸ್, ಸ್ಥಳ: ಲಕ್ನೋ, ಸಂಜೆ 7.30 ರಿಂದ
- ಮೇ 29, ಗುರವಾರ - ಕ್ವಾಲಿಫೈಯರ್ 1
- ಮೇ 30, ಶುಕ್ರವಾರ - ಎಲಿಮಿನೇಟರ್
- ಜೂನ್ 1, ಭಾನುವಾರ - ಕ್ವಾಲಿಫೈಯರ್ 2
- ಜೂನ್ 3, ಮಂಗಳವಾರ - ಫೈನಲ್












Click it and Unblock the Notifications