RCB Vs PBKS: ಆರ್‌ಸಿಬಿ ಕಳಪೆ ಬ್ಯಾಟಿಂಗ್‌ ಪದರ್ಶನ ಕಂಡು ಸಿಎಂ ಸಿದ್ದರಾಮಯ್ಯ ಮಾಡಿದ್ದೇನು?

RCB Vs PBKS: ಐಪಿಎಲ್‌ 2025ರ 34ನೇ ಪಂದ್ಯದಲ್ಲಿ ಆರ್‌ಸಿಬಿ ತಂಡವು ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೋಲನುಭವಿಸಿದೆ. ಸುಲಭವಾಗಿ ಸೋತಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅಲ್ಲದೆ, ಆರ್‌ಸಿಬಿಯ ಕಳಪೆ ಬ್ಯಾಟಿಂಗ್‌ ಪ್ರದರ್ಶನ ಕಂಡು ಪಂದ್ಯ ವೀಕ್ಷಣೆಗೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಏನು ಮಾಡಿದ್ರು ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ನಿನ್ನೆ (ಏಪ್ರಿಲ್‌ 19) ಬೆಂಗಳೂರಿನ ಚಿನ್ನಸ್ವಾಮಿ ಅಂದರೆ ತವರು ಮೈದಾನದಲ್ಲೇ ಆರ್‌ಸಿಬಿ ಸೋಲನುಭವಿಸಿದೆ. ಈ ಮೂಲಕ ಆರ್‌ಸಿಬಿ ಇದುವರೆಗೂ ಆಡಿರುವ 7ರಲ್ಲಿ ನಾಲ್ಕು ಪಂದ್ಯಗಳನ್ನು ಹೊರಗಡೆ ರಾಜ್ಯದ ಕ್ರೀಡಾಂಗಣದಲ್ಲಿ ಗೆದ್ದರೆ, ಇನ್ನುಳಿದ 3 ಪಂದ್ಯಗಳನ್ನು ತವರಿನಲ್ಲೇ ಸೋತಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ ಅವರು ಕೂಡ ಬೇಸರ ಗೊಂಡಿದ್ದಾರೆ.

IPL 2025 RCB s Poor Batting Performance Disappoints CM Siddaramaiah

ಬೆಂಗಳೂರಿನಲ್ಲಿ ಮಳೆ ಕಾರಣ ಪಂದ್ಯ ಆರಂಭವಾಗಲು ತುಸು ತಡವಾಯಿತು. ಬಳಿಕ ವಿಳಂಬವಾದ ಹಿನ್ನೆಲೆ ಪಂದ್ಯವನ್ನು 14 ಓವರ್‌ಗಳುಗೆ ಸೀಮಿತ ಮಾಡಲಾಯಿತು. ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ ತಂಡ ಬೌಲಿಂಗ್ ಅಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ನಿಗದಿತ 12 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 95 ರನ್‌ ಕಲೆಹಾಕಿತು. ಈ ಮೂಲಕ ಪಂಜಾಬ್‌ಗೆ 96 ರನ್‌ಗಳ ಸಾಧಾರಣ ಗುರಿ ನೀಡಿತು.

ಆರ್‌ಸಿಬಿ 95 ರನ್‌ ಕಲೆಹಾಕಲು ಟೀಂ ಡೆವಿಡ್‌ ಅಬ್ಬರದ ಬ್ಯಾಟಿಂಗ್‌ನಿಂದ ಬಂದ 50 ರನ್‌ಗಳೇ ಪ್ರಮುಖ ಕಾರಣ. ಫಿಲ್ ಸಾಲ್ಟ್‌ 4, ವಿರಾಟ್‌ ಕೊಹ್ಲಿ 1, ನಾಯಕ ರಜತ್ ಪಟಿದಾರ್ 23, ಲಿವಿಂಗ್‌ಸ್ಟೋನ್‌ 4, ಜಿತೇಶ್ ಶರ್ಮಾ 2, ಕೃನಾಲ್‌ ಪಾಂಡ್ಯ 1, ಮನೋಜ್ 1, ಯಶ್‌ ದಯಾಳ್‌ ಯಾವುದೇ ರನ್‌ ಇಲ್ಲದೆ ಪೆವಿಲಿಯನ್‌ ಸೇರಿದರು.

ಇನ್ನು ಕೊನೆಗೆ ಬಂದ ಹೇಜಲ್‌ವುಡ್‌ ಯಾವುದೇ ರನ್‌ ಗಳಿಸದೆ ನಾಟ್‌ ಆಗಿ ಉಳಿದರು. ಸ್ಟ್ರೈಕ್‌ನಲ್ಲಿದ್ದ ಟೀಂ ಡೆವಿಡ್‌ ಕೊನೆಯ ಓವರ್‌ನಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಸುವ ಮೂಲಕ ತಂಡದ ಮೊತ್ತವನ್ನು 95ರ ವರೆಗೂ ಕೊಂಡೊಯ್ದರು. ಮತ್ತೊಂದೆಡೆ ಆರ್‌ಸಿಬಿ ಪರ ಬೌಲರ್‌ಗಳು ಕೂಡ ಸಾಕಷ್ಟು ಶ್ರಮ ಹಾಕಿದ್ದು, ಇದು ವ್ಯರ್ಥ ಆದಂತಾಯಿತು.

ಪಂಜಾಬ್‌ ಬೌಲರ್‌ಗಳ ಅಬ್ಬರ: ಪಂಜಾಬ್‌ ಪರ ಬೌಲಿಂಗ್‌ ಮಾಡಿದ ಅರ್ಷ್‌ದೀಪ್ ಸಿಂಗ್, ಜಾನ್ಸನ್‌, ಚಹಾಲ್‌, ಹರ್‌ಪ್ರೀತ್ ತಲಾ 2 ವಿಕೆಟ್‌, ಕ್ಸವೀರ್ ಒಂದು ವಿಕೆಟ್‌ ತೆಗೆಯುವ ಮೂಲಕ ಆರ್‌ಸಿಬಿಯನ್ನು 95 ರನ್‌ಗಳಿಗೆ ಕಟ್ಟಿಹಾಕಿದರು. ಆರ್‌ಸಿಬಿ ನೀಡಿದ ಸಾಧಾರಣ ಗುರಿ ಬೆನ್ನತ್ತಿದ ಪಂಜಾಬ್‌ ಕಿಂಗ್ಸ್‌ 12.1 ಓವರ್‌ಗೆ 5 ವಿಕೆಟ್‌ ಕಳೆದುಕೊಂಡು 98 ರನ್‌ ಕಲೆಹಾಕಿ ಗೆದ್ದು ಬೀಗಿತು. ಈ ಮೂಲಕ ಆರ್‌ಸಿ ಪರ ಅಬ್ಬರದ ಬ್ಯಾಟಿಂಗ್‌ ಮಾಡಿ 50 ರನ್‌ ಕಲೆಹಾಕಿದ ಟೀಂ ಡೆವಿಡ್‌ ಅವರ ಶ್ರಮ ವ್ಯರ್ಥ ಆದಂತಾಯಿತು.

ಪಂಜಾಬ್‌ ಕಿಂಗ್ಸ್‌ ಪರ ಬ್ಯಾಟಿಂಗ್‌ ಮಾಡಿದ ಪ್ರಿಯಾನ್ಸ್‌ ಆರ್ಯ 16, ಪ್ರಭ್‌ಸಿಮ್ರಾನ್‌ ಸಿಂಗ್ 13, ನಾಯಕ ಶ್ರೇಯಸ್‌ ಅಯ್ಯರ್ 7, ಜೋಶ್‌ ಇಂಗ್ಲಿಸ್‌ 14, ಶಶಾಂಕ್‌ ಸಿಂಗ್ 1, ನೆಹಾಲ್‌ ವದೇರಾ 33 ರನ್‌ ಸಿಡಿಸಿ ಔಟಾಗದೇ ಉಳಿದು, ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಇನ್ನೂ ಸ್ಟೋಹ್ನಿಸ್‌ ಕೂಡ ಔಟಾಗದೇ ಕೊನೆಯಲ್ಲಿ ವಿನ್ನಿಂಗ್‌ ಶಾಟ್‌ ಮಾಡುವ ಮೂಲಕ 7 ರನ್‌ಗಳನ್ನು ಕಲೆಹಾಕಿದರು.

Take a Poll

ಆರ್‌ಸಿಬಿಯಲ್ಲಿ ಆರಂಭಿಕ ಕ್ರಮಾಂಕದಿಂದಲೂ ಕೊನೆವರೆಗೂ ಆರ್‌ಸಿಬಿಯಲ್ಲಿ ಬ್ಯಾಟಿಂಗ್‌ ತೀವ್ರ ಕಳಪೆಯಾಗಿದ್ದು, ಕೊನೆಯಲ್ಲಿ ಟೀಂ ಡೆವಿಡ್‌ ಏಕಾಂಗಿ ಓರಾಟ ನಡೆಸಿ 50 ರನ್‌ಗಳನ್ನು ಚಚ್ಚುವ ಮೂಲಕ ತಂಡದ ಮೊತ್ತವನ್ನು 90ರ ಗಡಿ ದಾಟಿಸಿರು. ಆದರೂ ಆರ್‌ಸಿಬಿ ಸೋಲನುಭವಿಸಿತು. ಇನ್ನೂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆರ್‌ಸಿಬಿ ಮ್ಯಾಚ್‌ ವೀಕ್ಷಣೆ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಬಂದಿದ್ದರು. ಆದರೆ, ಆರ್‌ಸಿಬಿ ಕಳಪೆ ಬ್ಯಾಟಿಂಗ್‌ ಪ್ರದರ್ಶನದಿಂದ ಅವರು ಬೇಸರದಿಂದ ಪಂದ್ಯದ ಅರ್ಧಕ್ಕೆ ಎದ್ದು ಹೋದ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+