MI Vs DC: ಮುಂಬೈ ವಾಂಖೆಡೆಯಲ್ಲಿ ಸೂರ್ಯನಿಗೆ ಶರಣಾದ ಡೆಲ್ಲಿ ಕ್ಯಾಪಿಟಲ್ಸ್: ಟೂರ್ನಿಯಿಂದ ಔಟ್
IPL 2025 MI Vs DC: ಐಪಿಎಲ್ 2025ನೇ ಆವೃತ್ತಿಯ 63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಇದುವರೆಗೂ ಆಡಿರುವ 13 ಪಂದ್ಯಗಳಲ್ಲಿ 5ರಲ್ಲಿ ಸೋತು, 8ರಲ್ಲಿ ಗೆದ್ದು ಬೀಗುವ ಮೂಲಕ ಪಾಯಿಂಟ್ಸ್ ಡೇಬಲ್‌ನಲ್ಲಿ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಅಲಂಕರಿಸಿದೆ. ಅಲ್ಲದೆ, ಪ್ಲೇ ಆಫ್ 4ನೇ ಪ್ಲೇಸ್‌ಮೆಂಟ್ ಅನ್ನು ತನ್ನದಾಗಿಸಿಕೊಂಡಿದೆ.

ಇಂದಿನ ಪಂದ್ಯ ಮುಂಬೈ ಇಂಡಿಯನ್ಸ್ ತವರು ಮೈದಾನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಿತು. ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳ್ಲಿ 5 ವಿಕೆಟ್‌ಗಳ ಕಳೆದುಕೊಂಡು 180 ರನ್‌ಗಳನ್ನು ಕಲೆಹಾಕಿ 181 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 18.2 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಬರೀ 121 ರನ್ ಕಲೆಹಾಕುವ ಮೂಲಕ ಸೋಲೊಪ್ಪಿಕೊಂಡಿತು.
ಅದರಲ್ಲೂ ಸೂರ್ಯಕುಮಾರ್ ಯಾದವ್ ಅವರು ಕೇವಲ 43 ಬಾಲ್‌ಗಳಲ್ಲಿ 7 ಬೌಂಡರಿ, 4 ಸಕ್ಸರ್‌ಗಳೊಂದಿಗೆ 73 ರನ್‌ಗಳನ್ನು ಕಲೆಹಾಕಿ ತಂಡದ ಗೆಲುವಿಗೆ ಪ್ರಮುಖಪಾತ್ರವಹಿಸಿದರು. ಇನ್ನುಳಿದಂತೆ ರಿಯಾನ್ ರಿಕ್ಕೆಲ್ಟನ್ 25(18), ರೋಹಿತ್ ಶರ್ಮಾ 5(5), ವಿಲ್ ಜಾಕ್ಸ್ 21(13), ತಿಲಕ್ ವರ್ಮಾ 27(27), ಹಾರ್ದಿಕ್ ಪಾಂಡ್ಯ 3(6), ನಮನ್ ಧಿರ್ 24(8) ಸಿಡಿಸುವ ಮೂಲಕ ತಂಡದ ಮೊತ್ತವನ್ನು 180ಕ್ಕೆ ಮುಟ್ಟಿಸಿದರು.
ಡೆಲ್ಲಿ ಪರ ಬೌಲಿಂಗ್ ಮಾಡಿದ ಮುಕೇಶ್ ಕುಮಾರ್ 2, ದುಶ್ಮಂತ ಚಮೀರ, ಮುಸ್ತಫಿಜುರ್ ರೆಹಮಾನ್, ಕುಲ್‌ದೀಪ್ ಯಾದವ್ ತಲಾ ಒಂದು ವಿಕೆಡ್ ಪಡೆದು ಮುಂಬೈ ಇಂಡಿಯನ್ಸ್ ತಂಡವನ್ನು 180ಕ್ಕೆ ಕಟ್ಟಿಹಾಕಿದರು. ಆದರೂ ಸಹ ಗೆಲುವು ಸಾಧ್ಯ ಆಗಲಿಲ್ಲ. ಈ ಪೈಕಿ ದುಶ್ಮಂತ ಚಮೀರ ಅವರು ನಾಲ್ಕು ಓವರ್ ಬೌಲಿಂಗ್ ಮಾಡಿ ಮುಂಬೈಗೆ 54 ರನ್ ನೀಡಿ ದುಬಾರಿಯಾದರು.
ಇನ್ನು ಡೆಲ್ಲಿ ಕಾಪಿಟಲ್ಸ್ ತಂಡ ಬ್ಯಾಟಿಂಗ್‌ನಲ್ಲಿ ಎಡವಿತು. ಆಡಬೇಕಾದ ಆಟಗಾರರೇ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಕೊನೆಗೂ ತನ್ನೆಲ್ಲಾ ವಿಕೆಟ್‌ಗಳನ್ನು ಒಪ್ಪಿಸಿ ಮುಂಬೈ ಇಂಡಿಯನ್ಸ್‌ಗೆ ಶರಣಾಯಿತು. ಕೆಎಲ್ ರಾಹುಲ್ 11, ಪಾಫ್ ಡುಪ್ಲೆಸಿಸ್ 6, ಅಭಿಷೇಶ್ ಪೊರೆಲ್ 6, ಸಮೀರ್ ರಿಜ್ವಿ 39, ವಿಪ್ರಜ್ ನಿಗಮ್ 20, ಸ್ಟಬ್ಸ್ 2, ಅಶುತೋಶ್ ಶರ್ಮಾ 18, ಮಾದವ್ ತಿವಾರಿ 3, ದುಶ್ಮಂತ್ ಚಮೀರ 8, ಕುಲ್‌ದೀಪ್ ಯಾದವ್ 7, ಮುಸ್ತಫಿಜರ್ ರೆಹಮಾನ್ 0. ಇನ್ನೂ ಈ ಸೋಲಿನ ಫಲಿತಾಂಶ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್‌ನಿಂದ ಹೊರತಳ್ಳಿದೆ.
ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಪ್ಲೇ ಆಫ್ ನಾಲ್ಕನೇ ಸ್ಥಾವನ್ನು ಗಿಟ್ಟಿಸಿಕೊಂಡಿದೆ. ಈಗಾಗಲೇ ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ತಂಡಗಳು ಎಂಟ್ರಿ ಕೊಟ್ಟಿದ್ದಾಗಿದೆ.
ಪ್ಲೇ ಆಫ್ ಪ್ರವೇಶಿಸಿದ ತಂಡಗಳು
* ಗುಜರಾತ್ ಟೈಟಾನ್ಸ್
* ರಾಯಲ್ ಚಾಲೆಂಜರ್ಸ್ ಬೆಂಗಳೂರು
* ಪಂಜಾಬ್ ಕಿಂಗ್ಸ್
* ಮುಂಬೈ ಇಂಡಿಯನ್ಸ್












Click it and Unblock the Notifications