IPL 2025 RCB Vs KKR: ಆರಂಭದಲ್ಲಿ ಅಬ್ಬರಿಸಿದ ಕೆಕೆಆರ್ ಕೊನೆಗೆ ಟುಸ್ ಪಟಾಕಿ: ಆರ್‌ಸಿಬಿಗೆ ಬರೀ 175 ರನ್‌ಗಳ ಟಾರ್ಗೆಟ್
RCB Vs KKR: ಐಪಿಎಲ್ 2025ರ ಸೀಸನ್ ಹಬ್ಬಕ್ಕೆ ಇಂದು (ಮಾರ್ಚ್ 22) ಅದ್ಧೂರಿ ಚಾಲನೆ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 175 ರನ್‌ಗಳ ಟಾರ್ಗೆಟ್ ನೀಡಿದೆ.
ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಸೆಣಸಾಟ ಆರಂಭಿಸಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಇನ್ನು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಪಡೆ ಆರ್‌ಸಿಗೆ 175 ರನ್‌ಗಳ ಗುರಿಯನ್ನು ನೀಡಿದೆ.

ಆರಂಭದಲ್ಲಿ ಕೆಕೆಆರ್ ತಂಡದ ಆಟಗಾರರು ಭರ್ಜರಿ ಬ್ಯಾಟಿಂಗ್ ಮಾಡಿದರು. ಆದರೆ ಕೊನೆ ಕೊನೆಗೆ ಆರ್‌ಸಿಬಿ ಬೌಲರ್‌ಗಳ ಅಬ್ಬರ ಶುರುವಾಗಿದ್ದು, ಏರುಗತಿಯಲ್ಲಿ ರನ್‌ಗಳನ್ನು ಇಳಿಸಿದರು. ಮೊದಲಿಗೆ ಕೆಕೆಆರ್ ಪರ ಬ್ಯಾಟ್ ಮಾಡಿದ ಕ್ವಿಂಟನ್ ಡಿ ಕಾಕ್ 4, ಸನೀಲ್ ನರೈನ್ 44, ಅಜಿಂಕ್ಯಾ ರಹಾನೆ 56, ವೆಂಕಟೇಶ್ ಅಯ್ಯರ್ 6, ಅಂಗ್ರಿಶ್ 30, ರಿಂಕು ಸಿಂಗ್ 12, ಆಂಡ್ರೆ ರಸೆಲ್ 4, ರಂದೀಪ್ ಸಿಂಗ್ 6, ಹರ್ಷಿತ್ ರಾಣಾ 5, ಸ್ಪೆನ್ಸರ್ ಜಾನ್ಸನ್ 1 ರನ್ ಕಲೆಹಾಕಿದರು.
ಇನ್ನೂ ಆರ್‌ಸಿಬಿ ಪರ ಬೌಲಿಂಗ್ ಮಾಡಿದ ಜೋಶ್ ಹೇಜಲ್‌ವುಡ್ 2, ಯಶ್ ದಯಾಳ್ 1, ರಶಿಕ್ ದಾರ್ ಸಲಾಮ್ 1, ಕ್ರುನಾಲ್ ಪಾಂಡ್ಯ 3, ಸುಯಾಶ್ ಶರ್ಮಾ 1 ವಿಕೆಟ್ ಕೀಳುವ ಮೂಲಕ ಕೆಕೆಆರ್ ಅನ್ನು 175 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಕೆಕೆಆರ್ ಬ್ಯಾಟರ್‌ಗಳು ಆರಂಭದಲ್ಲಿ ಅಬ್ಬರಿಸಿದ್ದು ನೋಡಿದರೆ 200 ರನ್‌ಗಳ ಗಡಿ ದಾಟಿಸಲಿದ್ದಾರೆ ಎನ್ನುವಂತಿತ್ತು. ಆದ್ರೆ ಕೊನೆಯಲ್ಲಿ ಇದು ಉಲ್ಟಾ ಹೊಡೆದು ಆರ್‌ಸಿಬಿ ಬೌಲರ್‌ಗಳ ಕಡೆ ಲಕ್ ತಿರುಗಿಬಿಟ್ಟಿತು.
ಆರ್‌ಸಿಬಿ ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟೀದಾರ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕ್ರುನಾಲ್ ಪಾಂಡ್ಯ, ರಶಿಕ್ ದಾರ್ ಸಲಾಮ್, ಸುಯಾಶ್ ಶರ್ಮಾ, ಜೋಶ್ ಹೇಜಲ್‌ವುಡ್, ಯಶ್ ದಯಾಳ್
ಕೆಕೆಆರ್ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್, ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ(ನಾಯಕ), ರಿಂಕು ಸಿಂಗ್, ಅಂಗ್ರಿಶ್ ರಘುವಂಶಿ, ಸುನಿಲ್ ನರೈನ್, ಆ್ಯಂಡ್ರೆ ರಸೆಲ್, ರಮನ್‌ದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ,












Click it and Unblock the Notifications