IPL 2025 Final: ಐಪಿಎಲ್ ಫೈನಲ್ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ 11
RCB Final Playing 11: ಐಪಿಎಲ್ 2025 ಮೊದಲ ಕ್ವಾಲಿಫೈಯರ್‌ನಲ್ಲೇ ಆರ್‌ಸಿಬಿ ಪಂಜಾವಿರುದ್ಧ ಗೆದ್ದು ಫೈನಲ್ ಪ್ರವೇಶ ಮಾಡಿದೆ. ಹೈವೋಲ್ಟೇಜ್ ಫೈನಲ್ ಮ್ಯಾಚ್ ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜೂನ್ 3ರಂದು ನಡೆಯಲಿದೆ. ಹಾಗಾದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಕುತೂಹಲದ ಪ್ರಶ್ನೆಗೆ ಉತ್ತರ ಇಲ್ಲಿದೆ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಸೀಸನ್‌ನಲ್ಲಿ ಆರಂಭದಿಂದಲೂ ಬ್ಯಾಟಿಂಗ್, ಬೌಲಿಂಗ್ ಎರಡು ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಫೈನಲ್ ಪ್ರವೇಶ ಮಾಡಿದೆ. ಜೂನ್ 1ರಂದು ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಗೆಲ್ಲುವ ತಂಡದ ವಿರುದ್ಧ ಫೈನಲ್ ಪಂದ್ಯ ಆಡಲಿದೆ.

ಜೂನ್ 1ರಂದು ಚಂಡೀಗಢದ ಮುಲ್ಲನಪುರ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಕ್ವಾಲಿಫೈಯರ್ 2 ಪಂದ್ಯ ನಡೆಯಲಿದೆ. ಇದರಲ್ಲಿ ಗೆದ್ದ ತಂಡವು ಆರ್‌ಸಿಬಿ ಜೊತೆ ಜೂನ್ 3ರರಂದು ಫೈನಲ್ ಪಂದ್ಯ ಆಡಲಿದೆ. ಈ ಪಂದ್ಯಕ್ಕಾಗಿ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ.
ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಆರ್‌ಸಿಬಿ ಈವರೆಗೂ ಆಡಿರುವ ಸೀಸನ್‌ಗಳಲ್ಲಿ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಹಾಗಂತ ಅಭಿಮಾನಿಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ. ಹೀಗೆ ಈ ಟೀಂ ಬರೀ ಕರ್ನಾಟಕ, ಭಾರತ ಅಷ್ಟೇ ಅಲ್ಲದೆ, ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ಇನ್ನು ಜೂನ್ 3ರಂದು ನಡೆಯುವ ಆರ್‌ಸಿಬಿ ಫೈನಲ್ ಪಂದ್ಯ ವೀಕ್ಷಿಸಲು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಆದರೆ, ನಾಳೆವರೆಗೂ ಕಾಯಬೇಕಿದೆ. ಯಾಕಂದ್ರೆ ಆರ್‌ಸಿಬಿ ವಿರುದ್ಧ ಫೈನಲ್ ಆಡುವ ತಂಡ ಯಾವುದು ಎಂದು ಜೂನ್ 1ರಂದು ನಿರ್ಧಾರವಾಗಲಿದೆ.
ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 9 ವರ್ಷಗಳ ಬಳಿಕ ಮತ್ತೆ ಭರ್ಜರಿಯಾಗಿ ಫೈನಲ್ ಪ್ರವೇಶಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲೇ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ನೇರವಾಗಿದೆ ಫೈನಲ್‌ಗೇರಿದೆ. ಆರ್‌ಸಿಬಿ ಈವರೆಗೆ ಐಪಿಎಲ್ ಒಂದೇ ಒಂದು ಟ್ರೋಫಿ ಗೆದಿದ್ದ. ಆದರೆ, ಈ ಬಾರಿ ಗೆಲ್ಲುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ. ಯಾಕೆಂದ್ರೆ ಈ ಬಾರಿ ಬಲಿಷ್ಠ ತಂಡಗಳನ್ನೇ ಬಗ್ಗು ಬಡಿಯುವ ಮೂಲಕ ಈ ಘಟ್ಟವನ್ನು ಬಂದು ತಲುಪಿದೆ, ಇನ್ನೂ ಟ್ರೋಫಿ ಎತ್ತುವುದಿಲ್ಲವೇ ಎನ್ನುವ ಮಾತು ಅಭಿಮಾನಿಗಳದ್ದಾಗಿದೆ.
2016ರಕ್ಕೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳರು ತಂಡವು 2011 ಮತ್ತು 2009 ರಲ್ಲಿ ಫೈನಲ್ ಪ್ರವೇಶ ಮಾಡಿತ್ತು. ಆದರೆ, ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು. ಆದರೆ, 2025ರ ಐಪಿಎಲ್ ಟ್ರೋಫಿ ಎತ್ತುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದೆ. ಯಾಕಂದ್ರೆ ಈ ಬಾರಿ ಉತ್ತಮ ಆಟಗಾರರನ್ನೇ ಹೊಂದಿರುವ ಆರ್‌ಸಿಬಿ ಕಠಿಣ ಪಂದ್ಯಗಳನ್ನು ಗೆದ್ದು ಯಶಸ್ವಿಯಾಗಿ ಫೈನಲ್ ಪ್ರವೇಶ ಮಾಡಿದೆ. ಫೈನಲ್ ಪಂದ್ಯದಲ್ಲಿ ಎದುರಾಳಿ ಯಾವುದೇ ತಂಡ ಇದ್ದರೂ ಸೋಲಿಸಿ ಟ್ರೋಫಿ ಗೆಲ್ಲಲಿದೆ ಎನ್ನುವುದು ಅಭಿಮಾನಿಗಳ ಮಾತಾಗಿದೆ.
ಮತ್ತೊಂದೆಡೆ ಈ ಬಾರಿಯಾದ್ರೂ ಫೈನಲ್ ಪಂದ್ಯದಲ್ಲಿ ಗೆದ್ದೇ ಗೆಲ್ಲಬೇಕು ಎಂದು ಆರ್‌ಸಿಬಿ ಪಣತೊಟ್ಟಿದೆ. ಹಾಗಾದ್ರೆ ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವುದೇ ಬಹುತೇಕ ಮಂದಿಯ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರವಾಗಿ ತಂಡದಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಫೈನಲ್ ಆಡುವ 11ರ ಬಳಗ ಇನ್ನೂ ಫೈನಲ್ ಆಗಬೇಕಿದೆ.
ಆರ್‌ಸಿಬಿ ಸಾಂಭಾವ್ಯ ತಂಡ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ. ಕೀ.), ಮಯಾಂಕ್ ಅಗರ್ವಾಲ್, ಟಿಮ್ ಡೇವಿಡ್/ಲಿವಿಂಗ್‌ಸ್ಟೋನ್, ರೊಮಾರಿಯೂ ಶೆಫರ್ಡ್, ಕೃನಾಲ್ ಪಾಂಡ್ಯ, ಜೋಶ್ ಹೇಜಲ್‌ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಲ್.












Click it and Unblock the Notifications