RCB: ವಿಲ್‌ಜ್ಯಾಕ್ಸ್‌ಗಿಂತ ಡೇಂಜರ್ ಬ್ಯಾಟರ್ ಈ ಜಾಕೋಬ್ ಬೆಥೆಲ್!

ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ಎರಡು ದಿನಗಳ ಐಪಿಎಲ್ ಮೆಗಾ ಹರಾಜು ಮುಕ್ತಾಯವಾಗಿದೆ. ಎಲ್ಲಾ ತಂಡಗಳು ಬಲಿಷ್ಠ ತಂಡವನ್ನು ಕಟ್ಟಿರುವ ಖುಷಿಯಲ್ಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಉತ್ತಮ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿ ಆರ್ ಸಿಬಿ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಿದ್ದ ವಿಲ್‌ ಜ್ಯಾಕ್ಸ್‌ರನ್ನು ಕೈಬಿಟ್ಟ ಬಳಿಕ ಅಭಿಮಾನಿಗಳು ಸಿಟ್ಟಾಗಿದ್ದರು. ಆದರೆ ಆರ್ ಸಿಬಿ ವಿಲ್‌ಜ್ಯಾಕ್ಸ್‌ಗೆ ಬದಲಿ ಆಟಗಾನನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಇಂಗ್ಲೆಂಡ್ ತಂಡದ ಸ್ಫೋಟಕ ಆಲ್‌ರೌಂಡರ್ ಜಾಕೋಬ್ ಬೆಥೆಲ್ 2.6 ಕೋಟಿ ರೂಪಾಯಿಗೆ ಆರ್ ಸಿಬಿ ಪಾಲಾಗಿದ್ದಾರೆ. ವಿಲ್ ಜ್ಯಾಕ್ಸ್ ಬಲಗೈ ಬ್ಯಾಟರ್ ಮತ್ತು ಸ್ಪಿನ್ ಬೌಲರ್ ಆಗಿದ್ದರೆ, ಜಾಕೋಬ್ ಬೆಥೆಲ್ ಎಡಗೈ ಆಟಗಾರ ಮತ್ತು ಸ್ಪಿನ್ನರ್ ಆಗಿದ್ದಾರೆ. ಈಗಾಗಲೇ ಇಂಗ್ಲೆಂಡ್ ನೆಲದಲ್ಲಿ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದು, ಸ್ಫೋಟಕ ಬ್ಯಾಟರ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ipl 2025 auction rcb signs jacob bethell for 2 6 crore

ಜಾಕೋಬ್ ಬೆಥೆಲ್‌ 1.25 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿದ್ದರು. ಪಂಜಾಬ್ ಕಿಂಗ್ಸ್ ಕೂಡ ಬೆಥೆಲ್‌ರನ್ನು ಖರೀದಿ ಮಾಡಲು ಆಸಕ್ತಿ ತೋರಿಸಿತು. ಆರ್ ಸಿಬಿ ಜೊತೆ ಬಿಡ್ಡಿಂಗ್‌ನಲ್ಲಿ ಸ್ಪರ್ಧೆ ಮಾಡಿದರೂ, ಆರ್ ಸಿಬಿ ಮಾತ್ರ ಜಾಕೋಬ್‌ರನ್ನು ಬಿಟ್ಟುಕೊಡಲು ಸಿದ್ದವಿರಲಿಲ್ಲ ಕೊನೆಗೆ ಪಂಜಾಬ್ ಕಿಂಗ್ಸ್ ಬಿಡ್ಡಿಂಗ್‌ ರೇಸ್‌ನಿಂದ ಹಿಂದೆ ಸರಿಯಿತು, ಅಂತಿಮವಾಗಿ ಬೆಥೆಲ್ 2.6 ಕೋಟಿ ರೂಪಾಯಿಗೆ ಖರೀದಿ ಮಾಡಿತು.

ಸ್ಪೋಟಕ ಬ್ಯಾಟರ್

ಜಾಕೋಬ್ ಬೆಥೆಲ್ ಇಂಗ್ಲೆಂಡ್ ತಂಡಕ್ಕಾಗಿ 7 ಪಂದ್ಯಗಳನ್ನು ಆಡಿದ್ದು ಎರಡು ಅರ್ಧಶತಕಗಳ ಜೊತೆ 57.66 ಸರಾಸರಿಯಲ್ಲಿ 173 ರನ್‌ ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ 2 ಅರ್ಧಶತಕ ಗಳಿಸಿ ಗಮನ ಸೆಳೆದಿದ್ದಾರೆ. ಒಟ್ಟಾರೆ 52 ಟಿ20 ಪಂದ್ಯಗಳನ್ನು ಆಡಿದ್ದು 25.97 ರ ಸರಾಸರಿಯಲ್ಲಿ 909 ರನ್‌ಗಳನ್ನು ಹೊಂದಿದೆ. 142.47 ಸ್ಟ್ರೈಕ್‌ರೇಟ್ ಹೊಂದಿದ್ದು, ಆರು ಅರ್ಧಶತಕ ಗಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+