IPL 2024: ಆರ್‌ಸಿಬಿ ಪ್ರಶಸ್ತಿ ಬರ ಈ ವರ್ಷ ಅಂತ್ಯ: ಈ ತಪ್ಪುಗಳನ್ನು ಕಡಿಮೆ ಮಾಡಿದರೆ ಇದೆ ಗೆಲ್ಲುವ ಅವಕಾಶ!

ಐಪಿಎಲ್ 2024ರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಎಲ್ಲಾ ತಂಡಗಳು ಈಗಾಗಲೇ ಸಿದ್ಧತೆಯನ್ನು ಆರಂಭಿಸಿವೆ. ಆರ್‌ಸಿಬಿ ಕೂಡ ಈ ಬಾರಿ ಭಾರಿ ನಿರೀಕ್ಷೆಯೊಂದಿಗೆ ಪಂದ್ಯಾವಳಿಗೆ ಸಜ್ಜಾಗುತ್ತಿದೆ. ಮಿನಿ ಹರಾಜಿನಲ್ಲಿ ಹಲವು ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ವಿರಾಟ್ ಕೊಹ್ಲಿ, ಎಬಿಡಿ, ಕ್ರಿಸ್ ಗೇಲ್ ಅವರಂತಹ ದಿಗ್ಗಜ ಆಟಗಾರರು ತಂಡಕ್ಕಾಗಿ ಆಡಿದರೂ ಆರ್‌ಸಿಬಿ ಒಮ್ಮೆಯೂ ಕಪ್ ಗೆದ್ದಿಲ್ಲ, ಮೂರು ಬಾರಿ ಫೈನಲ್ ಪ್ರವೇಶಿಸಿದರೂ, ಕಪ್ ಗೆಲ್ಲುವಲ್ಲಿ ವಿಫಲವಾಗಿದೆ.

IPL 2024 Will RCB End Trophy Drought This Year Here are the Pros and Cons of the Team

ಈ ಬಾರಿ ತಂಡದಲ್ಲಿ ಕೆಲವು ಬದಲಾವಣೆ ಮಾಡಿದ ಬಳಿಕ ಮೇಲ್ನೋಟಕ್ಕೆ ತಂಡ ಬಲಿಷ್ಠವಾಗಿದ್ದರೂ, ಕೆಲವು ಕೊರತೆಗಳನ್ನು ನೋಡಬಹುದಾಗಿದೆ. ಮುಖ್ಯವಾಗಿ ಸ್ಪಿನ್ ಬೌಲರ್ ಕೊರತೆ ತಂಡವನ್ನು ಕಾಡಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ಐಪಿಎಲ್ 2024ರ ಆರ್‌ಸಿಬಿ ತಂಡ

ವಿಕೆಟ್‌ಕೀಪರ್‌ಗಳು: ಅನುಜ್ ರಾವತ್, ದಿನೇಶ್ ಕಾರ್ತಿಕ್.

ಬ್ಯಾಟರ್ ಗಳು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ಸೌರವ್ ಚೌಹಾಣ್.

ಆಲ್ ರೌಂಡರ್‌ಗಳು: ಮಹಿಪಾಲ್ ಲೊಮ್ರೊರ್, ಗ್ಲೆನ್ ಮ್ಯಾಕ್ಸ್‌ವೆಲ್, ಮನೋಜ್ ಭಾಂಡಗೆ, ಟಾಮ್ ಕರ್ರಾನ್, ಸ್ವಪ್ನಿಲ್ ಸಿಂಗ್, ವಿಲ್ ಜಾಕ್ಸ್, ಕ್ಯಾಮರೂನ್ ಗ್ರೀನ್.

ಬೌಲರ್‌ಗಳು: ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ರಾಜನ್ ಕುಮಾರ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಯಶ್ ದಯಾಲ್, ವಿಜಯ್‌ಕುಮಾರ್ ವೈಶಾಕ್, ಮಯಾಂಕ್ ದಾಗರ್.

ಆರ್‌ಸಿಬಿ ತಂಡದ ದೌರ್ಬಲ್ಯ

ಆರ್‌ಸಿಬಿ ತಂಡದ ಮುಖ್ಯವಾದ ದೌರ್ಬಲ್ಯ ಅದರ ಬೌಲಿಂಗ್, ಈ ಬಾರಿ ಮುಖ್ಯವಾಗಿ ಸ್ಪಿನ್ನರ್ ಗಳ ಕೊರತೆ ತಂಡದಲ್ಲಿದೆ. ಹಸರಂಗ ಅವರನ್ನು ತಂಡದಿಂದ ಕೈಬಿಟ್ಟ ಬಳಿಕ ಉತ್ತಮ ಬೌಲರ್ ತಂಡಕ್ಕೆ ಆಯ್ಕೆ ಮಾಡಿಲ್ಲ. ಭಾರತದಲ್ಲಿನ ಪಿಚ್‌ಗಳು ಸ್ಪಿನ್‌ಗೆ ಸಹಕಾರಿಯಾಗಿದ್ದು ಅದೊಂದು ಕೊರತೆ ಕಾಡುವ ಸಾಧ್ಯತೆ ಇದೆ. ಈ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತದೆ ಎನ್ನುವುದನ್ನು ನೋಡಬೇಕಿದೆ.

ತಂಡವಾಗಿ ಉತ್ತಮ ಪ್ರದರ್ಶನ ಬೇಕು

ಆರ್ ಸಿಬಿ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡುಪ್ಲೆಸಿಸ್, ವಿಲ್ ಜ್ಯಾಕ್ಸ್, ದಿನೇಶ್ ಕಾರ್ತಿಕ್, ರಜತ್ ಪಾಟಿದಾರ್ ಅವರಂತ ಬಲಿಷ್ಠ ಬ್ಯಾಟಿಂಗ್ ಪಡೆ ಇದೆ. ಆದರೂ ಆರ್ ಸಿಬಿ ಕೆಲವೊಮ್ಮೆ ತಂಡವಾಗಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತದೆ. ಈ ಬಾರಿ ಈ ತಪ್ಪನ್ನು ಸರಿ ಮಾಡಿಕೊಳ್ಳಬೇಕಿದೆ. ತಂಡವಾಗಿ ಉತ್ತಮ ಪ್ರದರ್ಶನ ನೀಡಿದಾಗ ಮಾತ್ರ ಪ್ರಮುಖ ಪಂದ್ಯಗಳಲ್ಲಿ ಗೆಲ್ಲುವುದು ಸುಲಭವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+