RCB VS LSG: ಎಬಿ ಡೀ ವಿಲಿಯರ್ಸ್ ನೆನೆದು ಕಣ್ಣೀರು ಹಾಕಿದ ಆರ್‌ಸಿಬಿ ಫ್ಯಾನ್ಸ್!
2024ರ ಐಪಿಎಲ್ ಟೂರ್ನಿಯಲ್ಲಿ, ಆರ್‌ಸಿಬಿ ಸೋಲಿನ ಸುಳಿ ಮುಂದುವರಿದಿದೆ. ಆರ್‌ಸಿಬಿ ಬೆಂಗಳೂರು ಸತತ 2ನೇ ಸೋಲು ಕಂಡಿದೆ, ನಿನ್ನೆ ಲಖನೌ ವಿರುದ್ಧ ಆರ್‌ಸಿಬಿ ಬೆಂಗಳೂರು ತಂಡವು ಹೀನಾಯ ಸೋಲು ಎದುರಿಸಿದೆ. ಆದರೆ ಇದೇ ಸಮಯದಲ್ಲಿ ಆರ್‌ಸಿಬಿ ಫ್ಯಾನ್ಸ್‌ಗೆ ಎಬಿ ಡೀ ವಿಲಿಯರ್ಸ್ ನೆನಪು ಬಂದಿದ್ದು, ಕಣ್ಣೀರು ಹಾಕಿದ್ದಾರೆ ಆರ್‌ಸಿಬಿ ಫ್ಯಾನ್ಸ್!
ಹೌದು, ಎಬಿ ಡೀ ವಿಲಿಯರ್ಸ್ 2008ರಲ್ಲಿ ಐಪಿಎಲ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದರು. ಹೀಗೆ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಪ್ಲೇಯರ್ ಆಗಿದ್ದ ಎಬಿ ಡೀ ವಿಲಿಯರ್ಸ್ ಐಪಿಎಲ್ ಟೂರ್ನಿ ತುಂಬಾ ಹವಾ ಎಬ್ಬಿಸಿದ್ದರು. ಅದರಲ್ಲೂ ಆರ್‌ಸಿಬಿ ಬೆಂಗಳೂರು ತಂಡದ ಪರವಾಗಿ ಎಬಿ ಡೀ ವಿಲಿಯರ್ಸ್ ನಿರ್ಮಿಸಿದ ದಾಖಲೆಗಳನ್ನ ಹಿಂದೆ ಯಾರೂ ಮುರಿದಿಲ್ಲ, ಮುಂದೆ ಕೂಡ ಸುಲಭವಾಗಿ ಮುರಿಯಲು ಆಗಲ್ಲ ಎನ್ನಬಹುದು. ಇದೇ ಕಾರಣಕ್ಕೆ ಇದೀಗ ಆರ್‌ಸಿಬಿ ತಂಡ ಲಖನೌ ವಿರುದ್ಧ ಹೀನಾಯವಾಗಿ ಸೋತ ಬೆನ್ನಲ್ಲೇ, ಅಭಿಮಾನಿಗಳು ಎಬಿ ಡೀ ವಿಲಿಯರ್ಸ್ ಅವರನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕುತ್ತಿದ್ದಾರೆ.

ವಾಪಸ್ ಬರ್ತಾರಾ ಎಬಿ ಡೀ ವಿಲಿಯರ್ಸ್?
ಐಪಿಎಲ್ ಅಖಾಡದಲ್ಲಿ ಅತಿಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಈ ಎಬಿ ಡೀ ವಿಲಿಯರ್ಸ್ ಅವರಿಗೆ, ಅವರೇ ಸಾಟಿ ಎನ್ನಬಹುದು. ಸುಮಾರು 151.69 ಸ್ಟ್ರೈಕ್ ರೇಟ್ ಹೊಂದಿದ್ದಾರೆ ಎಬಿ ಡೀ ವಿಲಿಯರ್ಸ್. ಅದರಲ್ಲೂ 39.71 ಆವರೇಜ್ ಮೂಲಕ ಐಪಿಎಲ್ ಟೂರ್ನಿಯಲ್ಲಿ, 5,162 ರನ್ ಕಲೆಹಾಕಿರುವ ಅವರು 184 ಐಪಿಎಲ್ ಪಂದ್ಯ ಆಡಿದ್ದರು. ಈ ಪೈಕಿ ಹೆಚ್ಚಾಗಿ ಆರ್‌ಸಿಬಿ ಬೆಂಗಳೂರು ತಂಡದ ಪರವೇ ಬ್ಯಾಟ್ ಬೀಸಿದ್ದರು.
40 ಅರ್ಧಶತಕ ಬಾರಿಸಿದ ದಾಖಲೆ!
ಇದರ ಜೊತೆ 40 ಅರ್ಧಶತಕ ಕೂಡ ಎಬಿ ಡೀ ವಿಲಿಯರ್ಸ್ ಅವರ ಹೆಸರಲ್ಲೇ ಇದೆ. ಹೀಗಾಗಿಯೇ ನಿನ್ನೆ ಲಖನೌ ವಿರುದ್ಧ ಆರ್‌ಸಿಬಿ ತಂಡವು ಕೇವಲ 182 ರನ್ ಬಾರಿಸಲು ತಿಣುಕಾಡುವಾಗ, ಆರ್‌ಸಿಬಿ ಫ್ಯಾನ್ಸ್‌ಗೆ ನೇರ ಎಬಿ ಡೀ ವಿಲಿಯರ್ಸ್ ಅವರ ನೆನಪಾಗಿತ್ತು. ನಿನ್ನೆಯ ಪಂದ್ಯದಲ್ಲಿ ಆರ್‌ಸಿಬಿ ಟೀಂ ಕೇವಲ 153 ರನ್‌ಗೆ ಆಲೌಟ್ ಆಗಿ, 28 ರನ್‌ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಆರ್‌ಸಿಬಿ ಅಭಿಮಾನಿಗಳು ತೀವ್ರ ನೋವಿನಲ್ಲಿದ್ದು, ನಮಗೀಗ ಎಬಿ ಡೀ ವಿಲಿಯರ್ಸ್ ವಾಪಸ್ ಬರಬೇಕು ಅಂತಿದ್ದಾರೆ.
16 ವರ್ಷದಿಂದ ಕಪ್ ಗೆದ್ದಿಲ್ಲ
ಐಪಿಎಲ್ ಅಂದ್ರೆ ಭಾರತದಲ್ಲಿ ಒಂದು ಹಬ್ಬದ ರೀತಿ ಜನ ಸೆಲೆಬ್ರೇಷನ್ ಮಾಡ್ತಾರೆ. ಅದರಲ್ಲೂ ಬೆಂಗಳೂರು ನಿವಾಸಿಗಳಿಗೆ ಹಾಗೂ ಕನ್ನಡಿಗರಿಗೆ ಆರ್‌ಸಿಬಿ ತಂಡವೇ ಕಣ ಕಣದಲ್ಲಿಯೂ ಬೆರೆತು ಹೋಗಿದೆ. ಹೀಗಿದ್ದರೂ ಆರ್‌ಸಿಬಿ ತಂಡ ಮಾತ್ರ ಕಳೆದ 16 ವರ್ಷ ಕಪ್ ಗೆದ್ದೇ ಇಲ್ಲ. ಇಷ್ಟೆಲ್ಲಾ ನಡೆದರೂ ಕನ್ನಡಿಗರು ಮಾತ್ರ ಆರ್‌ಸಿಬಿ ಟೀಂ ಕೈಬಿಟ್ಟಿಲ್ಲ, ಹಾಗೇ ಈ ಬಾರಿ ಅಂದ್ರೆ 17ನೇ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೀಗಿದ್ದಾಗ ಕೂಡ ಆರ್‌ಸಿಬಿ ತಂಡ ಸತತ ಹೀನಾಯ ಸೋಲು ಕಾಣುತ್ತಿರುವುದು ಅಭಿಮಾನಿಗಳ ನಿದ್ದೆಗೆಡಿಸಿದೆ. ಹೀಗಾಗಿ ಎಬಿ ಡೀ ವಿಲಿಯರ್ಸ್ ಮತ್ತೆ ಆರ್‌ಸಿಬಿ ತಂಡಕ್ಕೆ ವಾಪಸ್ ಬರಲಿ ಅನ್ನೋದೆ ಅಭಿಮಾನಿಗಳ ಮಹತ್ವದ ಬೇಡಿಕೆ.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ ಆರ್‌ಸಿಬಿ ತಂಡ ಕಪ್ ಗೆದ್ದು ಬೀಗಲಿ ಅಂತಿದ್ದಾರೆ ಫ್ಯಾನ್ಸ್. ಅಲ್ಲದೆ ನಿನ್ನೆಯ ಸೋಲನ್ನು ಮರೆತು ಆರ್‌ಸಿಬಿ ತಂಡ ಮುಂದೆ ನುಗ್ಗಬೇಕು ಎಂಬುದು ಈ ಮೂಲಕ ಆರ್‌ಸಿಬಿ ಫ್ಯಾನ್ಸ್ ಬೇಡಿಕೆ ಆಗಿದೆ. ಹೀಗಾಗಿ ಆರ್‌ಸಿಬಿ ತಂಡ ಈಗಲಾದರೂ ತನ್ನ ಸೋಲುಗಳ ಗೋಡೆ ಒಡೆದು ಹೊರಬರುತ್ತಾ? ಅಥವಾ ಇದೇ ರೀತಿ ತನ್ನ ಸೋಲಿನ ಸರಪಳಿ ಮುಂದುವರಿಸುತ್ತಾ? ಅಂತಾ ಕಾದು ನೋಡಬೇಕಿದೆ.












Click it and Unblock the Notifications