IPL Auction 2024: ಕೊನೆ ಕ್ಷಣದಲ್ಲಿ ಹರಾಜಿನಿಂದ ಹೊರ ಬಿದ್ದ ಮೂವರು ಕ್ರಿಕೆಟಿಗರು: ಇಬ್ಬರು ಹೊಸ ಆಟಗಾರರ ಸೇರ್ಪಡೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. 10 ಫ್ರಾಂಚೈಸಿಗಳು ಐಪಿಎಲ್ 2024 ಕ್ಕೆ ಮುಂಚಿತವಾಗಿ ತಮ್ಮ ತಂಡಗಳನ್ನು ಬಲಪಡಿಸುವ ಸಲುವಾಗಿ ಪ್ರಮುಖ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪೈಪೋಟಿ ನಡೆಸಲಿದೆ.
10 ತಂಡಗಳಲ್ಲಿ ಒಟ್ಟು 77 ಸ್ಥಾನಗಳು ಖಾಲಿಯಿದ್ದು ಐಪಿಎಲ್ ಹರಾಜಿನಲ್ಲಿ 13 ದೇಶಗಳ ಒಟ್ಟು 333 ಆಟಗಾರರು ಕಣಕ್ಕಿಳಿಯಲಿದ್ದಾರೆ. ಇವರಲ್ಲಿ 214 ಮಂದಿ ಭಾರತೀಯರು. 10 ತಂಡಗಳು ಒಟ್ಟು 262.95 ಕೋಟಿ ರೂ. ಪರ್ಸ್ ಹೊಂದಿದ್ದು, ಹಲವು ಆಟಗಾರರು ಕೋಟಿ ಕೋಟಿ ಹಣ ಜೇಬಿಗೆ ಇಳಿಸುವ ಸಾಧ್ಯತೆ ಇದೆ.

ಗುಜರಾತ್ ಟೈಟಾನ್ಸ್ (ಜಿಟಿ) ಹೆಚ್ಚಿನ ಪರ್ಸ್ ಹೊಂದಿದ್ದು ರೂ 38.15 ಕೋಟಿಯೊಂದಿಗೆ ಹರಾಜಿಗೆ ಹೋಗಲಿದೆ. ಉಳಿದಂತೆ : ಸನ್‌ರೈಸರ್ಸ್ ಹೈದರಾಬಾದ್ (34 ಕೋಟಿ ರೂ.), ಕೋಲ್ಕತ್ತಾ ನೈಟ್ ರೈಡರ್ಸ್ (ರೂ. 32.7 ಕೋಟಿ), ಚೆನ್ನೈ ಸೂಪರ್ ಕಿಂಗ್ಸ್ (ರೂ. 31.4 ಕೋಟಿ), ಪಂಜಾಬ್ ಕಿಂಗ್ಸ್ (ರೂ. 29.1 ಕೋಟಿ), ಡೆಲ್ಲಿ ಕ್ಯಾಪಿಟಲ್ಸ್ (ರೂ. 28.95 ಕೋಟಿ) , ರಾಯಲ್ ಚಾಲೆಂಜರ್ಸ್ ಬೆಂಗಳೂರು (ರೂ. 23.25 ಕೋಟಿ), ಮುಂಬೈ ಇಂಡಿಯನ್ಸ್ (ರೂ. 17.75 ಕೋಟಿ), ರಾಜಸ್ಥಾನ್ ರಾಯಲ್ಸ್ (ರೂ. 14.5 ಕೋಟಿ), ಮತ್ತು ಲಕ್ನೋ ಸೂಪರ್ ಜೈಂಟ್ಸ್ (ರೂ. 13.15 ಕೋಟಿ) ಹೊಂದಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ 2024 ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್, ಟ್ರಾವಿಸ್ ಹೆಡ್, ಪ್ಯಾಟ್ ಕಮ್ಮಿನ್ಸ್, ಶಾರ್ದೂಲ್ ಠಾಕೂರ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ವನಿಂದು ಹಸರಂಗ ಸೇರಿದಂತೆ ಹಲವು ಪ್ರಮುಖ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಹೆಚ್ಚಿನ ಪೈಪೋಟಿ ನಡೆಯಲಿದೆ.
ಕೊನೆ ಕ್ಷಣದಲ್ಲಿ ಇಬ್ಬರು ಆಟಗಾರರು ಹೊರಕ್ಕೆ
ಪ್ರತಿ ತಂಡವು ತಂಡದಲ್ಲಿ ಗರಿಷ್ಠ 25 ಆಟಗಾರರನ್ನು ಹೊಂದಬಹುದು, ಎಂಟು ವಿದೇಶಿ ಆಟಗಾರರು ಮಾತ್ರ ತಂಡದಲ್ಲಿ ಇರಬೇಕು, ತಂಡದಲ್ಲಿ ಕನಿಷ್ಠ ಆಟಗಾರರ ಸಂಖ್ಯೆ 18 ಆಗಿರಬೇಕು. 77 ಆಟಗಾರರ ಸ್ಥಾನ ಖಾಲಿ ಇದ್ದು ಇದರಲ್ಲಿ 30 ವಿದೇಶಿ ಆಟಗಾರರ ಕೋಟಾ ಖಾಲಿ ಇದೆ. ಶಾರುಖ್ ಖಾನ್ ಅವರ ಕೋಲ್ಕತ್ತಾ ನೈಟ್ ರೈಡರ್ಸ್ ಹರಾಜಿನಲ್ಲಿ 12 ಸ್ಲಾಟ್ ಹೊಂದಿದೆ.
50 ಲಕ್ಷ ಮೂಲ ಬೆಲೆ ಹೊಂದಿರುವ ಇಂಗ್ಲೆಂಡ್‌ನ ಯುವ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಹರಾಜಿನಿಂದ ಹಿಂದೆ ಸರಿದಿದ್ದಾರೆ. ಬಾಂಗ್ಲಾದೇಶದ ವೇಗಿಗಳಾದ ತಸ್ಕಿನ್ ಅಹ್ಮದ್ ಮತ್ತು ಶೋರಿಫುಲ್ ಇಸ್ಲಾಂ ಕೂಡ ಹರಾಜು ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದಾರೆ.
ಮೂವರು ಆಟಗಾರರು ಹರಾಜು ಪ್ರಕ್ರಿಯೆಯಿಂದ ಹಿಂದೆ ಸರಿದ ಬಳಿಕ ಮಹಾರಾಷ್ಟ್ರದ ಬ್ಯಾಟರ್ ಮತ್ತು ಪ್ರಸ್ತುತ ಭಾರತದ ಅಂಡರ್ 19 ಕ್ರಿಕೆಟಿಗ, ಕೌಶಲ್ ತಾಂಬೆ ಮತ್ತು ರಾಜಸ್ಥಾನದ ವೇಗದ ಬೌಲಿಂಗ್ ಆಲ್‌ರೌಂಡರ್ ಸಾಹಿಲ್ ದಿವಾನ್ ಹರಾಜು ಪಟ್ಟಿಗೆ ಸೇರಿಕೊಂಡಿದ್ದಾರೆ.
-
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB: ಆರ್ ಸಿಬಿ ತಂಡದ ಅಧಿಕೃತ ಪೇಮೆಂಟ್ಸ್ ಪಾಲುದಾರ ನವಿ ಯುಪಿಐ, ಫ್ಯಾನ್ಸ್ ಗಮನಿಸಿ -
RCB Playing 11 Prediction: ಎಸ್ಆರ್ಎಚ್ ವಿರುದ್ಧ ಆರ್ಸಿಬಿ ಪ್ಲೇಯಿಂಗ್ 11 -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಮೈದಾನಕ್ಕೆ ಬರ್ತಾರಾ ಆರ್ಸಿಬಿ ಅಭಿಮಾನಿಗಳ ಹೊಸ ಕ್ರಶ್ ಬಿರ್ಲಾ ಕುಡಿ ಅನನ್ಯಾ?; ಕಾವ್ಯಾ ಮಾರನ್ ಬಗ್ಗೆ ಹೊಸ ಚರ್ಚೆ -
IPL 2026 Full Schedule: ಐಪಿಎಲ್ 2026ರ ಸಂಪೂರ್ಣ ವೇಳಾಪಟ್ಟಿ ಪ್ರಕಟ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
IPL Free VIP Tickets: ಶಾಸಕರಿಗೆ ಐಪಿಎಲ್ ವಿಐಪಿ ಟಿಕೆಟ್ ಪಡೆಯುವ ಹಕ್ಕು ಇದೆ: ಡಿ.ಕೆ.ಶಿವಕುಮಾರ್ ಸಮರ್ಥನೆ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ











Click it and Unblock the Notifications