LSG vs RCB: ಲಕ್ನೋ ತಂಡದ ಈ ಒಂದು ನಿರ್ಧಾರ ಅರ್ಥವೇ ಆಗಲಿಲ್ಲ ಎಂದ ಟಾಮ್ ಮೂಡಿ
ಆರ್‌ಸಿಬಿ ತಂಡದ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತವರಿನಲ್ಲಿಯೇ ಸೋಲಿನ ಮುಖಭಂಗಕ್ಕೆ ಒಳಗಾಗಿದೆ. ಅಲ್ಪ ಮೊತ್ತಕ್ಕೆ ಆರ್‌ಸಿಬಿ ತಂಡವನ್ನು ಕಟ್ಟಿಹಾಕಿದ ಹೊರತಾಗಿಯೂ ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಏಕಾನ ಕ್ರೀಡಾಂಗಣದ ಕಠಿಣ ಪಿಚ್‌ನಲ್ಲಿ ಬ್ಯಾಟಿಂಗ್ ನಡೆಸಲು ವಿಫಲವಾದ ಲಕ್ನೋ ಸೂಪರ್ ಜೈಂಟ್ಸ್ ತಂಡ 18 ರನ್‌ಗಳ ಅಂತರದ ಸೋಲು ಅನುಭವಿಸಿದೆ.
ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಕೊನೆಯ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವ ನಿರ್ಧಾರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಎಲ್ ರಾಹುಲ್ ಅವರು ಕೊನೆಯ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಕಣಕ್ಕಿಳಿದಿರುವುದೇ ಸೋಲಿಗೆ ಕಾರಣವಾಯಿತು ಎಂದಿದ್ದಾರೆ. ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಕೆಎಲ್ ರಾಹುಲ್ ಕೊನೆಯ ಬ್ಯಾಟರ್ ಆಗಿ ಬ್ಯಾಟಿಂಗ್‌ಗೆ ಇಳಿದರು.

"ನನಗೆ ಅದು ನಿಜವಾಗಿಯೂ ಅರ್ಥೈಸಿಕೊಳ್ಳಳು ಸಾಧ್ಯವಾಗಲಿಲ್ಲ. ಆತ ಬ್ಯಾಟಿಂಗ್ ನಡೆಸಲು ಕಣಕ್ಕಿಳಿಯುತ್ತಾರೆ ಎಂದಾದರೆ ಪಂದ್ಯದ ಮಧ್ಯ ಭಾಗದಲ್ಲಿ ಕಣಕ್ಕಿಳಿಯಬೇಕಾಗಿತ್ತು. ಅವರು ಮೂರರಿಂದ ನಾಲ್ಕು ಬೌಂಡರಿಗಳನ್ನು ಬಾರಿಸಿದ್ದರೆ ಸಾಕಿತ್ತು. ಅವರು 12-20 ರನ್‌ಗಳನ್ನು ವೇಗವಾಗಿ ಗಳಿಸಲು ಸಾಧ್ಯವಾಗಿದ್ದರೆ ಪಂದ್ಯ ಗೆಲ್ಲುವ ಅವಕಾಶವಿತ್ತು" ಎಂದಿದ್ದಾರೆ ಮಾಜಿ ಕೋಚ್ ಟಾಮ್ ಮೂಡಿ.
ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್ ವಿಭಾಗದಲ್ಲಿ ಹಿನ್ನಡೆ ಅನುಭವಿಸಿತು. ಬ್ಯಾಟಿಂಗ್‌ಗೆ ಸವಾಲೆನಿಸುವ ಪಿಚ್‌ನಲ್ಲಿ ಆರ್‌ಸಿಬಿ ತಂಡದ ಬ್ಯಾಟಿಂಗ್ ವಿಭಾಗ 126 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು. ಆರ್‌ಸಿಬಿ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಮೊದಲ ವಿಕೆಟ್‌ಗೆ 61 ರನ್‌ಗಳಿಸಿದ್ದು ತಂಡ ಈ ಮೊತ್ತವನ್ನು ಗಳಿಸಲು ಕಾರಣವಾಯಿತು. ಉಳಿದಂತೆ ಯಾವುದೇ ಅಟಗಾರನಿಂದಲೂ ಉತ್ತಮ ಪ್ರದರ್ಶನ ಬಾರಲಿಲ್ಲ.
LSG vs RCB: ಮೈದಾನದಲ್ಲೇ ಜಗಳವಾಡಿದ ಕೊಹ್ಲಿ- ಗಂಭೀರ್‌ಗೆ ಭಾರೀ ಶಿಕ್ಷೆ; ನವೀನ್‌ಗೂ ದಂಡದ ಬಿಸಿ
ಆರ್‌ಸಿಬಿ ನೀಡಿದ ಈ ಗುರಿಯನ್ನು ಬೆನ್ನಟ್ಟಿದ ಎಲ್‌ಎಸ್‌ಜಿ ತಂಡ ಆರ್‌ಸಿಬಿಯ ಭರ್ಜರಿ ಬೌಲಿಂಗ್ ದಾಳಿಗೆ ಹಿನ್ನಡೆ ಅನುಭವಿಸಿತು. ಸಂಘಟಿತ ಪ್ರದರ್ಶನ ನೀಡಿದ ಆರ್‌ಸಿಬಿ ಕೇವಲ 108 ರನ್‌ಗೆ ಎಲ್‌ಎಸ್‌ಜಿ ತಂಡವನ್ನು ಆಲೌಟ್ ಮಾಡಿದೆ. ಈ ಮೂಲಕ ಟೂರ್ನಿಯಲ್ಲಿ ಐದನೇ ಗೆಲುವು ಸಾಧಿಸಿದೆ ಆರ್‌ಸಿಬಿ. ಈ ಮೂಲಕ ಅಂಕಪಟ್ಟಯಲ್ಲಿ ಐದನೇ ಸ್ಥಾನಕ್ಕೇರಿದೆ ಆರ್‌ಸಿಬಿ ತಂಡ.
ಇನ್ನು ಆರ್‌ಸಿಬಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿರುವ ವಿರಾಟ್ ಕೊಹ್ಲಿ ಈ ಗೆಲುವಿನ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. "ಈ ಹಾದಿಯಲ್ಲಿ ಈ ಗೆಲುವು ನಮಗೆ ಬಹಳ ಮುಖ್ಯವಾಗಿತ್ತು. ತವರಿನ ತಂಡಕ್ಕಿಂತಲೂ ಇಲ್ಲಿ ನಮಗೆ ದೊರೆತ ಬೆಂಬಲ ನಂಬಲಸಾಧ್ಯವಾಗಿತ್ತು. ಇದು ತಂಡವಾಗಿ ನಾವು ಎಷ್ಟು ಪ್ರೀತಿಯನ್ನು ಪಡೆದುಕೊಂಡಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇದು ಸಹಿಹಿಯಾದ ಗೆಲುವಾಗಿದ್ದು ಹಲವು ಕಾರಣಗಳಿಗಾಗಿ ಉತ್ತಮವಾದ ಅನುಭವ ನೀಡಿದೆ. ಬಹಳ ಮುಖ್ಯವಾಗಿ ಈ ಮೊತ್ತವನ್ನು ರಕ್ಷಿಸಿಕೊಳ್ಳಲು ನಾವು ತೋರಿದ ಮನೋಭಾವ ಬಹಳ ಮುಖ್ಯವಾಗುತ್ತದೆ. ನಮ್ಮಿಂದ ಇದು ಸಾಧ್ಯ ಎಂಬ ಭಾವನೆ ಎಲ್ಲರಲ್ಲಿಯೂ ಇತ್ತು. ಈ ಕಾರಣದಿಂದಾಗಿಯೇ ನಾವು ಗೆಲುವು ಸಾಧಿಸಿದ್ದೇವೆ" ಎಂದಿದ್ದಾರೆ ವಿರಾಟ್ ಕೊಹ್ಲಿ












Click it and Unblock the Notifications