IPL 2023: ಮತ್ತೊಂದು ಅಗ್ನಿಪರೀಕ್ಷೆಗೆ RCB ಸಜ್ಜು: ರಾಜಸ್ಥಾನ್ ರಾಯಲ್ಸ್ ಸವಾಲು ಗೆಲ್ಲಲಿದೆಯಾ ಫಾಫ್ ಪಡೆ
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾನುವಾರ ಎರಡು ಪಂದ್ಯಗಳು ನಡೆಯಲಿದೆ. ಮೊದಲ ಮುಖಾಮುಖಿಯಲ್ಲಿ ಆರ್‌ಸಿಬಿ ತಂಡ ಕಣಕ್ಕಿಳಿಯಲಿದ್ದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣೆಸಾಡಲಿದೆ. ಜೈಪುರದಲ್ಲಿ ಈ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದ್ದು ಆರ್‌ಸಿಬಿ ಪಾಲಿಗೆ ಅತ್ಯಂತ ಮಹತ್ವದ ಪಂದ್ಯವಾಗಿದೆ. ಪ್ಲೇಆಫ್‌ಗೇರುವ ಸ್ಪರ್ಧೆಯಲ್ಲಿ ಮುಂದುವರಿಯಬೇಕಾದರೆ ಆರ್‌ಸಿಬಿಗೆ ಭಾನುವಾರದ ಪಂದ್ಯ ಅತ್ಯಂತ ನಿರ್ಣಾಯಕ.
ಸದ್ಯ ಆರ್‌ಸಿಬಿ ತಂಡ 11 ಪಂದ್ಯಗಳನ್ನು ಆಡಿದ್ದು 5 ಗೆಲುವು ಹಾಗೂ 6 ಸೋಲು ಅನುಭವಿಸಿದೆ. ಈ ಮೂಲಕ 10 ಅಂಕಗಳನ್ನು ಪಡೆದುಕೊಂಡಿದ್ದು 6ನೇ ಸ್ಥಾನದಲ್ಲಿದೆ. ಕಳೆದ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಸೋಲು ಅನುಭವಿಸಿರುವ ಕಾರಣ ಅಂಕಪಟ್ಟಿಯಲ್ಲಿ ಹಿನ್ನಡೆ ಕಂಡಿತು. ಡೆಲ್ಲಿ ಕ್ಯಾಪಿಟಲ್ಸ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಆಡಿದ ಪಂದ್ಯಗಳಲ್ಲಿ ಆರ್‌ಸಿಬಿ ಆಘಾತಕಾರಿ ಸೋಲು ಅನುಭವಿಸಿರುವ ಕಾರಣ ಸಂಕಷ್ಟದಲ್ಲಿದೆ.

ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ತಂಡ ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡಿ ನಿರ್ಣಾಯಕ ಹಂತದಲ್ಲಿ ಸತತ ಸೋಲಿಗೆ ಸಿಲುಕಿದ ಪರಿಣಾಮ ಸಂಕಷ್ಟದಲ್ಲಿದೆ. ಆದರೆ ಕಳೆದ ಪಂದ್ಯದಲ್ಲಿ ಯಶಸ್ವಿ ಜಸ್ವಾಲ್ ಅಮೋಘ ಆಟದ ಪರಿಣಾಮವಾಗಿ ಆರ್‌ಆರ್ ತಂಡ ಭಾರೀ ಅಂತರದ ಗೆಲುವು ಸಾಧಿಸಿತು. ಹೀಗಾಗಿ ಮತ್ತೆ ಗೆಲುವಿನ ಲಯಕ್ಕೆ ಮರಳಿರುವ ಆರ್‌ಆರ್ ಆರ್‌ಸಿಬಿಗೆ ಕಠಿಣ ಸವಾಲೊಡ್ಡುವ ವಿಶ್ವಾಸದಲ್ಲಿದೆ.
ಪಂದ್ಯದ ಮಾಹಿತಿ ಹಾಗೂ ನೇರಪ್ರಸಾರದ ವಿವರ
ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯ ಜೈಪುರದ ಸವಾಯ್‌ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಮೇ 14 ಭಾನುವಾರ ಮಧ್ಯಾಹ್ನ ಆಯೋಜನೆಯಾಗಲಿದೆ. ಮಧ್ಯಾಹ್ನ 3:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 3 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪಂದ್ಯದ ನೇರಪ್ರಸಾರ ಮಾಡಿದರೆ ಜಿಯೋ ಸಿನಿಮಾದಲ್ಲಿ ಲೈವ್‌ಸ್ಟ್ರೀಮಿಂಗ್ ಮೂಲಕ ವೀಕ್ಷಿಸುವ ಅವಕಾಶವಿದೆ.
RR vs RCB ಪಿಚ್ ರಿಪೋರ್ಟ್
ಸವಾಯ್‌ಮಾನ್‌ಸಿಂಗ್ ಕ್ರೀಡಾಂಗಣ ಸಾಮಾನ್ಯವಾಗಿ ಬ್ಯಾಟಿಂಗ್ ಹಾಘೂ ಬೌಲಿಂಗ್ ಎರಡು ವಿಭಾಗಕ್ಕೂ ಉತ್ತಮ ನೆರವು ನಿಡುವ ಪಿಚ್ ಎನಿಸಿಕೊಂಡಿದೆ. ಸಾಕಷ್ಟು ಸಮತೋಲಿತ ಪಿಚ್ ಎನಿಸಿಕೊಂಡಿತ್ತು. ಇನ್ನು ಆರಂದಲ್ಲಿ ಈ ಪಿಚ್‌ನಲ್ಲಿ ವೇಗಿಗಳು ಉತ್ತಮವಾಗಿ ಬೆಂಬಲ ನೀಡುವಾವಕಾಶವಿದ್ದು ನಂತರ ಬ್ಯಾಟರ್‌ಗಳಿಗೆ ಅವಕಾಶವಿದೆ.
ಹವಾಮಾನ ವರದಿ ಹೇಗಿದೆ?: ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಕಡಿಮೆಯಿದೆ. ಹಾಗಾಗಿ ಪೂರ್ಣ ಪ್ರಮಾಣದಲ್ಲಿ ಪಂದ್ಯ ಆಯೋಜನೆಯಾಗಲಿದ್ದು, 29-34 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರಲಿದೆ.
ಆರ್‌ಸಿಬಿ ಸಂಭಾವ್ಯ ಆಡುವ ಬಳಗ
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಹರ್ಷಲ್ ಪಟೇಲ್, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್, ಮತ್ತು ಜೋಶ್ ಹ್ಯಾಜಲ್‌ವುಡ್.
ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ಆಡುವ ಬಳಗ: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ಜೋ ರೂಟ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಕೆಎಂ ಆಸಿಫ್ ಮತ್ತು ಯುಜ್ವೇಂದ್ರ ಚಹಾಲ್.












Click it and Unblock the Notifications