Get Updates
Get notified of breaking news, exclusive insights, and must-see stories!

IPL 2023: ಸಂಜು ಸ್ಯಾಮ್ಸನ್ ಆಟಕ್ಕೆ ತಲೆದೂಗಿದ ಹರ್ಭಜನ್: ಭಾರತದ ಪರ ಆಡಲಿ ಎಂದ ಮಾಜಿ ಕ್ರಿಕೆಟಿಗ

ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿದೆ. ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ. ಇನ್ನು ತಂಡದ ನಾಯಕ ಸಂಜು ಸ್ಯಾಮ್ಸನ್ ಅದ್ಭುತ ಪ್ರದರ್ಶಣ ನೀಡುತ್ತಿದ್ದು ಜಿಟಿ ವಿರುದ್ಧ ಪಂದ್ಯದಲ್ಲಿ ನೀಡಿದ ಪ್ರದರ್ಶನ ಎಲ್ಲರ ಗಮನ ಸಳೆದಿದೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಪ್ರತಿಕ್ರಿಯಿಸಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ.

ಗುಜರಾತ್ ಟೈಟನ್ಸ್ ವಿರುದ್ಧ ನೀಡಿದ ಮ್ಯಾಚ್ ವಿನ್ನಿಂಗ್ ಪ್ರದರ್ಶನದ ಹಿನ್ನೆಲೆಯಲ್ಲಿ ಮಾತನಾಡಿದ ಹರ್ಭಜನ್ ಸಿಂಗ್ ಆರ್‌ಆರ್ ನಾಯಕ ಸಂಜು ಸ್ಯಾಮ್ಸನ್ ಭಾರತದ ಪರವಾಗಿ ಆಡಲೆಬೇಕು ಎಂದು ಒತ್ತಾಯಿಸಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧದಲ್ಲಿ ಸಂಜು ಸ್ಯಾಮ್ಸನ್ ಪ್ರದರ್ಶನವನ್ನು ಹೊಗಳಿದ ಭಜ್ಜಿ ಇದೊಂದು ದೈತ್ಯ ಪ್ರದರ್ಶನವಾಗಿದ್ದು ಸಂಜು ಸ್ಯಾಮ್ಸನ್ ನಿಜಕ್ಕೂ ವಿಶೇಷ ಆಟಗಾರ ಎಂದು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

IPL 2023: Harbhajan Singh said Sanju Samson has to play for India

"ಇದು ಅಮೋಘ ಪ್ರದರ್ಶನ. ನಾಯಕನ ಆಟ ಪ್ರದರ್ಶನ ಅಂದರೆ ಇದು. ಇಂಥಾ ಆಟಗಾರರು ಇತರ ಎಲ್ಲಾ ಆಟಗಾರರಿಗಿಂತ ಹೆಚ್ಚಿನ ಉತ್ಸಾಹದಲ್ಲಿರುತ್ತಾರೆ. ಸಂಜು ಒಬ್ಬ ವಿಶೇಷವಾದ ಆಟಗಾರ. ಈ ಪಂದ್ಯದಲ್ಲಿ ಹೇಟ್ಮೇಯರ್ ಅವರಿಗಿಂತಲೂ ಹೆಚ್ಚಿನ ಪರಿಣಾಮವನ್ನು ಉಂಟು ಮಾಡಿದ್ದಾರೆ ಸಂಜು. ಹೇಟ್ಮೇಯರ್ ಅದನ್ನು ಮುಂದುವರಿಸಿ ಪೂರ್ಣಗೊಳಿಸಿದರು" ಎಂದು ರಾಜಸ್ಥಾನ್ ರಾಯಲ್ಸ್ ಬಗ್ಗೆ ಹರ್ಭಜನ್ ಸಿಂಗ್ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

IPL 2023 RCB Vs CSK: ಕೊನೆಯ ಬಾರಿ ಚಿನ್ನಸ್ವಾಮಿಯಲ್ಲಿ ನಡೆದ ರೋಚಕ ಪಂದ್ಯದಲ್ಲಿ ಗೆದ್ದಿದ್ಯಾರು?

"ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಅರಿವಿದ್ದರೆ ಇಂಥಾ ಇನ್ನಿಂಗ್ಸ್ ಬರುತ್ತದೆ. ಎಂಎಸ್ ಧೋನಿ ಕೂಡ ಇದೇ ರೀತಿ ಪಂದ್ಯಗಳಲ್ಲಿ ಆಳಕ್ಕಿಳಿಯುತ್ತಿದ್ದರು. ಯಾಕೆಂದರೆ ಅವರಿಗೆ ಅವರ ಸಾಮರ್ಥ್ಯದ ಬಗ್ಗೆ ಅರಿವಿತ್ತು. ತಾನಿ ಕೊನೆಯ ವರೆಗೂ ಇದ್ದರೆ ಪಂದ್ಯವನ್ನು ಪೂರ್ಣಗೊಳಿಸಬಹುದು ಎಂಬುದು ಅವರಿಗೂ ತಿಳಿದಿತ್ತು" ಎಂದು ಸಂಜು ಸ್ಯಾಮ್ಸನ್ ಅವರನ್ನು ಎಂಎಸ್ ಧೋನಿ ಜೊತೆಗೆ ಹೋಲಿಕೆ ಮಾಡಿದ್ದಾರೆ ಹರ್ಭಜನ್ ಸಿಂಗ್.

ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅದ್ಭುತ ಇನ್ನಿಂಗ್ಸ್ ಆಡಿದ್ದು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. 32 ಎಸೆತಗಳನ್ನು ಎದುರಿಸಿದ ಸಂಜು 60 ರನ್‌ ಬಾರಿಸಿ ಅಬ್ಬರಿಸಿದರು. ಈ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ ವಿರುದ್ಧ ಆರ್‌ಆರ್ ತಂಡ ಪ್ರಪ್ರಥಮ ಗೆಲುವು ಸಾಧಿಸಲು ಕಾರಣವಾದರು. ಜಿಟಿ ತಂಡ ನೀಡಿದ್ದ 178 ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಒಂದು ಹಂತದಲ್ಲಿ 54 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಿಂದ ಸಂಜು ಸ್ಯಾಮ್ಸನ್ ಮೇಲೆತ್ತುವಲ್ಲಿ ಯಶಸ್ವಿಯಾದರು. ಅಂತಿಮ ಹಂತದಲ್ಲಿ ಶಿಮ್ರಾನ್ ಹೇಟ್ಮೇಯರ್ ಕೂಡ ಅಮೋಘ ಆಟದ ಮೂಲಕ ತಂಡವನ್ನು ಗೆಲ್ಲಿಸಿದರು.

IPL 2023: ಸೇಡು ತೀರಿಸಿಕೊಳ್ಳಬೇಕಿತ್ತು! ಗುಜರಾತ್ ಟೈಟಾನ್ಸ್ ವಿರುದ್ಧ ಗೆಲುವಿನ ಬಳಿಕ ಶಿಮ್ರಾನ್ ಹೆಟ್ಮೆಯರ್ ಪ್ರತಿಕ್ರಿಯೆ

ಅಂದಹಾಗೆ ಈ ಗೆಲುವಿನ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಐದು ಪಂದ್ಯಗಳನ್ನಾಡಿರುವ ರಾಜಸ್ಥಾನ್ ರಾಯಲ್ಸ್ ತಂಡ ನಾಲ್ಕು ಗೆಲುವು ಸಾಧಿಸಿದ್ದು 8 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಲಕ್ನೋ ಸೂಪರ್ ಜೈಂಟ್ಸ್, ಗುಜರಾತ್ ಟೈಟನ್ಸ್, ಪಂಜಾಬ್ ಕಿಂಗ್ಸ್ ಹಾಗೂ ಕೆಕೆಆರ್ ಅಗ್ರ ಐದು ಸ್ಥಾನಗಳಲ್ಲಿರುವ ಉಳಿದ ತಂಡಗಳಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+