IPL 2023 Final: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಲೈಟ್ ಶೋನಲ್ಲಿ ವಿರಾಟ್ ಕೊಹ್ಲಿ!
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಫೈನಲ್ ಪಂದ್ಯದ ಇನ್ನಿಂಗ್ಸ್ ಬ್ರೇಕ್ ಸಂದರ್ಭದಲ್ಲಿ ಲೈಟಿಂಗ್ ಶೋ ನಡೆಸಲಾಗಿದ್ದು, ಲೈಟಿಂಗ್‌ನಲ್ಲಿ ಧೋನಿ ಮತ್ತು ವಿರಾಟ್ ಕೊಹ್ಲಿ ಮೂಡಿಬಂದಿದ್ದು ಅಭಿಮಾನಿಗಳಿಗೆ ರೋಮಾಂಚನ ಮೂಡಿಸಿದೆ.
ಐಪಿಎಲ್‌ನಲ್ಲಿ 7000 ರನ್ ಪೂರೈಸಿದ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಹಲವು ಪ್ರಮುಖ ದಾಖಲೆಗಳನ್ನು ಲೈಟ್ ಶೋನಲ್ಲಿ ಪ್ರದರ್ಶಿಸಲಾಗಿದ್ದು, ಕಿಂಗ್ ಕೊಹ್ಲಿ ಚಿತ್ತಾರ ಮೂಡುತ್ತಿದ್ದಂತೆ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿತ್ತು.

ಇನ್ನು ಸಿಎಸ್‌ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಮಾಡಲು ಬರುತ್ತಿರುವ ಚಿತ್ರವನ್ನು ಲೈಟ್ ಶೋನಲ್ಲಿ ತೋರಿಸಲಾಗಿದೆ. ಐಪಿಎಲ್‌ನಲ್ಲಿ 250 ನೇ ಪಂದ್ಯವಾಡುತ್ತಿದ್ದು ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ಭಾನುವಾರ ನಡೆಯಬೇಕಿದ್ದ ಫೈನಲ್ ಪಂದ್ಯ ಮಳೆಯ ಕಾರಣದಿಂದ ರದ್ದಾಗಿತ್ತು. ಮೀಸಲು ದಿನ ಇದ್ದ ಕಾರಣ ಸೋಮವಾರಕ್ಕೆ ಮುಂದೂಡಲಾಗಿತ್ತು. ಸೋಮವಾರ ಮಳೆ ಬಾರದ ಕಾರಣ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಯಿತು.
Dhoni & Kohli frame in the show in Narendra Modi Stadium. pic.twitter.com/5bywXhB4LJ
— Johns. (@CricCrazyJohns) May 29, 2023
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತಮ ಆರಂಭವನ್ನು ಪಡೆದ ಗುಜರಾತ್ ಬೃಹತ್ ಮೊತ್ತ ಗಳಿಸುವ ಮುನ್ಸೂಚನೆ ನೀಡಿತು. ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಶುಭಮನ್ ಗಿಲ್ 39 ರನ್ ಗಳಿಸಿ ಔಟಾದರು.
ಮತ್ತೊಬ್ಬ ಯುವ ಆಟಗಾರ ಸಾಯಿ ಸುದರ್ಶನ್ ಮತ್ತು ವೃದ್ಧಿಮಾನ್ ಸಾಹ ಸಿಎಸ್‌ಕೆ ತಂಡದ ಬೌಲರ್ ಗಳ ಬೆವರಿಳಿಸಿದರು. ವೃದ್ಧಿಮಾನ್ ಸಾಹ 39 ಎಸೆತಗಳಲ್ಲಿ 54 ರನ್ ಗಳಿಸಿದರೆ, ಸಾಯು ಸುದರ್ಶನ್ 47 ಎಸೆತಗಳಲ್ಲಿ 8 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ 96 ಗಳಿಸಿ ಮಿಂಚಿದರು. ಅಂತಿಮವಾಗಿ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 214 ರನ್ ಗಳಿಸಿತು.
The lightshow in Narendra Modi Stadium.
— Johns. (@CricCrazyJohns) May 29, 2023
What a beautiful stuff! pic.twitter.com/xLkrL1mfsV
ಇನ್ನಿಂಗ್ಸ್ ಬ್ರೇಕ್‌ನಲ್ಲಿ ಲೈಟ್ ಶೋ
ಇನ್ನು ಇನ್ನಿಂಗ್ಸ್ ಬ್ರೇಕ್‌ನಲ್ಲಿ ಲೈಟಿಂಗ್ ಶೋ ನೋಡುಗರ ಗಮನ ಸೆಳೆಯಿತು. 2.24 ನಿಮಿಷಗಳ ಈ ವಿಡಿಯೋ 2023ರ ಐಪಿಎಲ್‌ನ ಪ್ರಮುಖ ಕ್ಷಣಗಳನ್ನು ಪ್ರಸಾರ ಮಾಡಲಾಯಿತು. ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರು ಈ ಲೈಟಿಂಗ್ ಶೋನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಸಂತಸಕ್ಕೆ ಕಾರಣವಾಯಿತು.












Click it and Unblock the Notifications