ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ ಹೋಟೆಲ್ ರೂಮಲ್ಲಿ ಹಣ, ಒಡವೆ ಕಳೆದುಕೊಂಡ ಭಾರತೀಯ ಕ್ರಿಕೆಟರ್

|
Google Oneindia Kannada News

ಬೆಂಗಳೂರು, ಸೆ. 27: ಕಳೆದ ವಾರ ಮುಕ್ತಾಯಗೊಂಡ ಇಂಗ್ಲೆಂಡ್ ಕ್ರಿಕೆಟ್ ಪ್ರವಾಸದಲ್ಲಿ ಭಾರತೀಯ ಮಹಿಳಾ ತಂಡ ಅದ್ಭುತ ಪ್ರದರ್ಶನ ತೋರಿ ಗೆಲುವಿನ ಸಿಹಿ ಪಡೆದಿದೆ. ಇದೇ ವೇಳೆ ತಂಡದ ಆಟಗಾರ್ತಿಯೊಬ್ಬರಿಗೆ ಕಹಿಯ ಅನುಭವವಾಗಿದೆ. ವಿಕೆಟ್ ಕೀಪರ್ ತಾನಿಯಾ ಭಾಟಿಯಾ ಅವರು ಇಂಗ್ಲೆಂಡ್‌ನಲ್ಲಿ ತಮ್ಮ ವಸ್ತುಗಳು ಕಳುವಾಗಿವೆ ಎಂದು ಆರೋಪಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

ಲಂಡನ್‌ನಲ್ಲಿ ತಮ್ಮ ತಂಡದೊಂದಿಗೆ ತಂಗಿದ್ದ ಹೋಟೆಲ್‌ವೊಂದರಲ್ಲಿ ಕಳ್ಳತನ ಆಗಿದೆ ಎಂದು ಭಾಟಿಯಾ ದೂರಿದ್ದಾರೆ. ಹೋಟೆಲ್ ರೂಮಿನಲ್ಲಿ ಭಾಟಿಯಾ ಇಟ್ಟಿದ್ದ ನಗದು ಹಣ ಮತ್ತು ಒಡವೆಯನ್ನು ಯಾರೋ ಕದ್ದಿದ್ದಾರಂತೆ. ಲಂಡನ್‌ನ ಪ್ರತಿಷ್ಠಿತ ಮಾರಿಯಾಟ್ ಹೋಟೆಲ್‌ನಲ್ಲಿ ಭಾರತದ ಕ್ರಿಕೆಟ್ ಆಟಗಾರ್ತಿಯರು ಉಳಿದುಕೊಂಡಿದ್ದರು.

ಕ್ರಿಕೆಟ್‌ಗೆ ಜೂಲನ್ ಗೋಸ್ವಾಮಿ ವಿದಾಯ: ಅಭಿಮಾನಿಗಳಿಂದ ಟ್ವಿಟ್ಟರ್‌ನಲ್ಲಿ ಹಾರೈಕೆಕ್ರಿಕೆಟ್‌ಗೆ ಜೂಲನ್ ಗೋಸ್ವಾಮಿ ವಿದಾಯ: ಅಭಿಮಾನಿಗಳಿಂದ ಟ್ವಿಟ್ಟರ್‌ನಲ್ಲಿ ಹಾರೈಕೆ

ಎರಡು ಟ್ವೀಟ್‌ಗಳನ್ನು ಮಾಡಿರುವ ತಾನಿಯಾ ಭಾಟಿಯಾ, ಭಾರತೀಯ ತಂಡಕ್ಕೆ ಇಸಿಬಿ ನೀಡಿರುವ ಭದ್ರತಾ ವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ.

Indian Women Cricketer Taniyaa Bhatia Claims She Was Robbed in London

ಮಾರಿಯಾಟ್ ಹೋಟೆಲ್ ಲಂಡನ್ ಮೈಡಾ ವೇಲ್‌ನ (Marriot Hotel London Maida Vale) ಮ್ಯಾನೇಜ್ಮೆಂಟ್ ಬಗ್ಗೆ ಬಹಳ ನಿರಾಸೆಯಾಗಿದೆ. ಯಾರೋ ಒಬ್ಬರು ನನ್ನ ಖಾಸಗಿ ರೂಮಿಗೆ ಹೋಗಿ ನಗದು ಹಣ, ಕಾರ್ಡ್, ವಾಚ್, ಒಡವೆ ಇದ್ದ ಬ್ಯಾಗನ್ನು ಕದ್ದಿದ್ದಾರೆ. ಈ ಹೋಟೆಲ್ ಬಹಳ ಅಸುರಕ್ಷಿತ.

ದಕ್ಷಿಣ ಆಫ್ರಿಕಾ ವಿರುದ್ಧದ T20 ಸರಣಿಯಿಂದ ಹೊರಗುಳಿದ ಶಮಿದಕ್ಷಿಣ ಆಫ್ರಿಕಾ ವಿರುದ್ಧದ T20 ಸರಣಿಯಿಂದ ಹೊರಗುಳಿದ ಶಮಿ

"ಈ ಪ್ರಕರಣವನ್ನು ಬೇಗ ತನಿಖೆ ನಡೆಸಿ ಬಗೆಹರಿಸಬೇಕು. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಆದ್ಯತೆಯ ಪಾರ್ಟ್ನರ್ ಹೋಟೆಲ್‌ನಲ್ಲಿ ಇಂಥ ಭದ್ರತಾ ಲೋಪ ಇರುವುದು ಅಚ್ಚರಿ ಮೂಡಿಸುತ್ತದೆ. ಮಂಡಳಿ ಕೂಡ ಈ ಪ್ರಕರಣವನ್ನು ಗಮನಿಸಿ ಕ್ರಮ ಕೈಗೊಳ್ಳಬಹುದು ಎಂದು ಭಾವಿಸಿದ್ದೇನೆ" ಎಂದು ವಿಕೆಟ್ ಕೀಪರ್ ಬ್ಯಾಟರ್ ತಾನಿಯಾ ಭಾಟಿಯಾ ತಮ್ಮ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ಇಸಿಬಿಯಿಂದ ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಇದೇ ವೇಳೆ, ಸೆಪ್ಟೆಂಬರ್ 10ರಿಂದ 24ರವರೆಗೆ ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ಮಧ್ಯೆ ಟಿ20 ಮತ್ತು ಒಡಿಐ ಸರಣಿಗಳು ನಡೆದಿದ್ದವು.

Indian Women Cricketer Taniyaa Bhatia Claims She Was Robbed in London

ಭಾರತದ ಮಹಿಳೆಯರು 3 ಪಂದ್ಯಗಳ ಟಿ20 ಸರಣಿಯನ್ನು 1-2ರಿಂದ ಸೋಲುವ ಮುನ್ನ ವೀರೋಚಿತ ಹೋರಾಟ ತೋರಿದ್ದರು. ನಂತರ ನಡೆದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತೀಯರನ್ನು ಸೋಲಿಸಲು ಆಂಗ್ಲ ಮಹಿಳೆಯರಿಂದ ಸಾಧ್ಯವಾಗಲಿಲ್ಲ. 3 ಪಂದ್ಯಗಳ ಆ ಓಡಿಐ ಸರಣಿಯನ್ನು ಭಾರತ 3-0ಯಿಂದ ಕ್ಲೀನ್ ಸ್ವೀಪ್ ಮಾಡಿತು. ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಕೊನೆಯ ಪಂದ್ಯ ನಡೆದಿತ್ತು. ವಿಶ್ವದ ಅತ್ಯುತ್ತಮ ಮಹಿಳಾ ವೇಗದ ಬೌಲರ್ ಎನಿಸಿರುವ ಝೂಲನ್ ಗೋಸ್ವಾಮಿ ಅವರಿಗೆ ಲಾರ್ಡ್ಸ್ ಪಂದ್ಯ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.

ತಾನಿಯಾ ಭಾಟಿಯಾ ಭಾರತದ ಪರ 2 ಟೆಸ್ಟ್, 10 ಒಡಿಐ ಮತ್ತು 53 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಭಾಟಿಯಾ ಒಂದೂ ಪಂದ್ಯ ಆಡಲು ಅವಕಾಶ ಪಡೆಯಲಿಲ್ಲ. ಟಿ20 ಸರಣಿಯಲ್ಲಿ ರಿಚಾ ಘೋಷ್ ಮತ್ತು ಓಡಿಐ ಸರಣಿಯಲ್ಲಿ ಯಸ್ತಿಕಾ ಭಾಟಿಯಾ ಅವರು ಟೀಮ್ ಇಂಡಿಯಾದಲ್ಲಿ ವಿಕೆಟ್ ಕಾವಲು ಮಾಡಿದ್ದರು.

(ಒನ್ಇಂಡಿಯಾ ಸುದ್ದಿ)

English summary
Taniya Bhatia, an wicket keeper in Indian Women's Cricket Team that toured England recently, has alleged that she was robbed in the hotel in London. She blasted the hotel for lack of security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X