ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರ್ಯಕುಮಾರ್ ಹೊಸ ಕಾರು 2 ಕೋಟಿ; ಇನ್ನೂ ದುಬಾರಿ ಕಾರು ಹೊಂದಿರುವ ಕ್ರಿಕೆಟಿಗರಿವರು

|
Google Oneindia Kannada News

ರಿಕೆಟರ್‌ಗಳಿಗೂ ಲಕ್ಸುರಿ ಕಾರು, ಲಕ್ಸುರಿ ವಾಚ್‌ಗಳಿಗೂ ಅದೇನೋ ಗಾಢ ಸಂಬಂಧ. ಹಲವು ಕ್ರಿಕೆಟಿಗರು ಒಂದಲ್ಲ, ಎರಡಲ್ಲ, ನಾಲ್ಕೈದು ಲಕ್ಷುರಿ ಕಾರುಗಳನ್ನು ಕೊಂಡು ಖುಷಿ ಪಡುತ್ತಾರೆ. ಇದೀಗ ಸೂರ್ಯಕುಮಾರ್ ಯಾದವ್ ಖರೀದಿಸಿದ ಮರ್ಸಿಡೆಸ್ ಬೆಂಜ್ ಲಕ್ಸುರಿ ಕಾರೊಂದು ಎಲ್ಲರ ಗಮನ ಸೆಳೆದಿದೆ.

ಸೂರ್ಯಕುಮಾರ್ ಯಾದವ್ ಸದ್ಯ ಟಿ20 ಕ್ರಿಕೆಟ್‌ನಲ್ಲಿ ಟಾಪ್ ರೇಂಜ್‌ನಲ್ಲಿದ್ದಾರೆ. ಭಾರತದ ಅತ್ಯಂತ ಸ್ಫೋಟಕ ಆಟಗಾರರಲ್ಲಿ ಅವರೊಬ್ಬರು. ಒಂದೆರಡು ಓವರ್‌ನಲ್ಲಿ ಪಂದ್ಯದ ಗತಿ ಬದಲಿಸಬಲ್ಲ ಬ್ಯಾಟ್ಸ್‌ಮನ್ ಅವರು. ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡದ ಪ್ರಮುಖ ಆಟಗಾರ ಅವರು.

ಜಿಂಬಾಬ್ವೆ ಪ್ರವಾಸ: ನಾಯಕನಾಗಿ ಭಾರತ ತಂಡಕ್ಕೆ ಮರಳಿದ ಕನ್ನಡಿಗಜಿಂಬಾಬ್ವೆ ಪ್ರವಾಸ: ನಾಯಕನಾಗಿ ಭಾರತ ತಂಡಕ್ಕೆ ಮರಳಿದ ಕನ್ನಡಿಗ

ಏಷ್ಯಾಕಪ್ ಟೂರ್ನಿಯಲ್ಲಿ ಅವರ ಆಟ ಶುರುವಾಗುವ ಮುನ್ನ ಎಲ್ಲರ ಚಿತ್ತ ಅವರ ಹೊಸ ಕಾರಿನತ್ತ ಹರಿದಿದೆ. ಮರ್ಸಿಡೆಸ್ ಬೆಂಜ್ ಕಂಪನಿಯ ಜಿಎಲ್‌ಇ ಕೂಪ್ ಕಾರನ್ನು ಮುಂಬೈನಲ್ಲಿ ಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿಗೆ ಈ ಹೊಸ ಕಾರಿನ ಕೀ ಹಸ್ತಾಂತರಿಸುತ್ತಿರುವ ಫೋಟೋವನ್ನು ಕಾರ್ ಡೀಲರ್ ಸಂಸ್ಥೆ ಆಟೊ ಹಂಗಾರ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಆದರೆ, ಸೂರ್ಯಕುಮಾರ್ ಯಾದವ್ ತಮ್ಮ ಕಾರಿನ ಚಿತ್ರ ಪೋಸ್ಟ್ ಮಾಡಿಲ್ಲ. ಡೀಲರ್ ಸಂಸ್ಥೆ ಈ ಕಾರು ಜಿಎಲ್‌ಇ ಕೂಪ್ ಎಂದು ಮಾತ್ರ ಹೇಳಿದೆ. ಈ ಮಾಡೆಲ್ ಕಾರಿನಲ್ಲಿ ಎರಡು ವೇರಿಯಂಟ್‌ಗಳಿವೆ. 1.55 ಕೋಟಿ ರೂ ನಿಂದ ಬೆಲೆ ಆರಂಭವಾಗುತ್ತದೆ. ಟಾಪ್ ವೇರಿಯೆಂಟ್ ಮಾಡೆಲ್ ಕಾರು 2.15 ಕೋಟಿ ರೂ ಇದೆ. ಸೂರ್ಯಕುಮಾರ್ ಯಾದವ್ ಟಾಪ್ ಎಂಡ್ ಕಾರ್ ಖರೀದಿಸಿರಬಹುದು ಎಂದು ಎಲ್ಲಾ ಮಾಧ್ಯಮಗಳು ಅಂದಾಜು ಮಾಡಿವೆ.

ಜರ್ಮನಿ ದೇಶದ ಮೆರ್ಸಿಡೆಸ್ ಬೆಂಜ್‌ನ ಈ ಎಸ್‌ಯುವಿ ಹೊಸ ಕಾರು ಕೇವಲ 3.8 ಸೆಕೆಂಡ್‌ನಲ್ಲಿ 100 ಕಿಮೀ ವೇಗ ಮುಟ್ಟಬಲ್ಲುದಂತೆ.

ಇನ್ನು ಸೂರ್ಯಕುಮಾರ್ ಯಾದವ್ ಅವರಿಗಿಂತ ದುಬಾರಿ ಬೆಲೆಯ ಕಾರುಗಳನ್ನು ಕೊಂಡ ಕ್ರಿಕೆಟ್ ಆಟಗಾರರನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಬಹುದು. ಅವರ ವಿವರ ಮುಂದಿದೆ.

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

ಕ್ರಿಕೆಟ್ ದೇವರು ಎನಿಸಿರುವ ಸಚಿನ್ ತೆಂಡೂಲ್ಕರ್ ಕಾರು ಪ್ರೇಮಿ. ಇವರ ಬಳಿ ಬಿಎಂಡಬ್ಲ್ಯೂ ಐ8 ಕಾರಿದೆ. ಇದರ ಬೆಲೆ 2.62 ಕೋಟಿ ರೂ ಇದೆ. ಮೇಲಾಗಿ ಸಚಿನ್ ತೆಂಡೂಲ್ಕರ್ ಬಿಎಂಡಬ್ಲ್ಯೂ ಇಂಡಿಯಾ ಸಂಸ್ಥೆಯ ಬ್ರ್ಯಾಂಡ್ ಅಂಬಾಸಡರ್ ಆಗಿದ್ದಾರೆ. ಹೀಗಾಗಿ, ಬಿಎಂಡಬ್ಲ್ಯೂನ ಟಾಪ್ ಎಂಡ್ ಕಾರು ಖರೀದಿ ಮಾಡಿದ್ದರಲ್ಲಿ ಅಚ್ಚರಿ ಇಲ್ಲ.

ಸಚಿನ್ ಬಳಿ ಇದೊಂದೇ ಅಲ್ಲ, ಬಿಎಂಡಬ್ಲ್ಯೂನ ಇನ್ನೂ ಕೆಲ ಕಾರುಗಳಿವೆ.

Asia Cup 2022: ಪಂದ್ಯಗಳು, ಸ್ಥಳ, ಟಿಕೆಟ್ ದರ, ನೇರಪ್ರಸಾರ ವಿವರಗಳನ್ನು ತಿಳಿಯಿರಿAsia Cup 2022: ಪಂದ್ಯಗಳು, ಸ್ಥಳ, ಟಿಕೆಟ್ ದರ, ನೇರಪ್ರಸಾರ ವಿವರಗಳನ್ನು ತಿಳಿಯಿರಿ

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಇವರ ಈಗಿನ ಫಾರ್ಮ್ ಏನೇ ಇರಲಿ ವಿರಾಟ್ ಕೊಹ್ಲಿ ಈಗಿನ ತಲೆಮಾರಿನ ಕ್ರಿಕೆಟಿಗರಲ್ಲಿ ಬೆಸ್ಟ್ ಎನ್ನಲಡ್ಡಿ ಇಲ್ಲ. ಅನೇಕ ವರ್ಷಗಳ ಕಾಲ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ಬಂದಿರುವ ವಿರಾಟ್ ಕೊಹ್ಲಿ ಬಹಳ ಬೇಗ ಸಚಿನ್‌ರ ಅನೇಕ ದಾಖಲೆಗಳನ್ನು ಮುರಿಯುವ ಸೂಚನೆಯಂತೂ ನೀಡಿದ್ದರು.

ವಿರಾಟ್ ಕೊಹ್ಲಿ ಬೌಂಡರಿಯಾಚೆಗಿನ ವೈಯಕ್ತಿಕ ಬದುಕಿನಲ್ಲೂ ಕಲರ್‌ಫುಲ್ ವ್ಯಕ್ತಿ. ಸ್ಯಾಂಡಲ್ವುಡ್ ರಾಣಿ ಅನುಷ್ಕಾ ಶರ್ಮಾ ಇವರ ಪತ್ನಿಯಾಗಿರುವುದು ಒಂದೆಡೆ. ವಿರಾಟ್ ಕೊಹ್ಲಿ ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್‌ಗಳ ಸಾಲಿನಲ್ಲಿದ್ದಾರೆ.

ವಿರಾಟ್ ಕೊಹ್ಲಿ ಬಳಿ ಆಡಿ ಆರ್8 ವಿ10 (Audi R8 V10) ಕಾರು ಇದೆ. ಇದರ ಬೆಲೆ 3 ಕೋಟಿ ಇದೆ.

ಯುವರಾಜ್ ಸಿಂಗ್

ಯುವರಾಜ್ ಸಿಂಗ್

ಭಾರತಕ್ಕೆ ಅನೇಕ ರೋಚಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟವರು ಯುವರಾಜ್ ಸಿಂಗ್. ತಮ್ಮ ಆಲ್‌ರೌಂಡ್ ಅಟದಿಂದ ಗಮನ ಸೆಳೆದಿದ್ದಾರೆ. 2011ರ ವಿಶ್ವಕಪ್‌ನಲ್ಲಿ ಇವರ ಆಟವನ್ನು ಮರೆಯಲು ಸಾಧ್ಯವೇ. ಇನ್ನು ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಭಾರಿಸಿದ ದೃಶ್ಯ ಸದಾಕಾಲ ಸ್ಮರಣೆಯಲ್ಲಿ ಜೀವಂತವಾಗಿರುತ್ತದೆ.

ಹಾಕಿ ಆಟಗಾರನ ಮಗನಾದ ಯುವರಾಜ್ ಸಿಂಗ್ ಬಳಿ ಲಂಬೋರ್ಗಿಯ ಲಕ್ಸುರಿ ಕಾರಿದೆ. ಅದು ಮುರ್ಸೀಲಾಗೊ. ಲಂಬೋರ್ಗಿನಿ ಮುರ್ಸೀಲಾಗೋ ಕಾರು ಗಂಟೆಗೆ 342 ಕಿಮೀ ವೇಗದಲ್ಲಿ ಓಡಬಲ್ಲುದು. ಯುವರಾಜ್ ಸಿಂಗ್ ಮೈದಾನಕ್ಕಿಳಿದರೆ ಚಿರತೆಯಂತೆ ಓಡುತ್ತಾರೆ. ಅವರ ಕಾರೂ ಕೂಡ ಭಯಂಕರ ಸ್ಪೀಡು.

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ

ಟೀಮ್ ಇಂಡಿಯಾದ ಹೊಸ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಸಖತ್ತಾಗಿರುವ ಕಾರು ಖರೀದಿ ಮಾಡಿದ್ದಾರೆ. ಬಹಳ ಕಷ್ಟಪಟ್ಟು ಈ ಹಂತಕ್ಕೆ ಬಂದಿರುವ ಹಾರ್ದಿಕ್ ಪಾಂಡ್ಯದ ಜೀವನ ಮತ್ತು ಜೀವನ ಶೈಲಿ ಬಹಳ ಬದಲಾಗಿದೆ. ಐಷಾರಾಮಿ ಜೀವನದ ಸುಖದ ಅನುಭವ ಪಡೆದಿದ್ದಾರೆ.

ಗುಜರಾತ್ ರಾಜ್ಯದ ಹಾರ್ದಿಕ್ ಪಾಂಡ್ಯ ಬಳಿ ಲಂಬೋರ್ಗಿನಿ ಹುರಕನ್ ಕಾರಿದೆ. ಇದರ ಬೆಲೆ ಬರೋಬ್ಬರಿ 3.73 ಕೋಟಿ ರೂ ಇದೆ. ಬಹಳ ಪ್ರಬಲ ಎಂಜಿನ್ ಹೊಂದಿರುವ ಈ ಲಂಬೋರ್ಗಿನಿ ಕಾರು ಕೇವಲ 2.9 ಸೆಕೆಂಡ್‌ನಲ್ಲಿ 100 ಕಿಮೀ ವೇಗ ತಲುಪಬಹುದು.

ಹಾರ್ದಿಕ್ ಪಾಂಡ್ಯ ಬಳಿ 1.82 ಕೋಟಿ ರೂ ಬೆಲೆಯ ಲ್ಯಾಂಡ್ ರೋವರ್ ರೇಂಜ್ ರೋವರ್ ಕಾರಿದೆ.

ವೀರೇಂದರ್ ಸೆಹ್ವಾಗ್

ವೀರೇಂದರ್ ಸೆಹ್ವಾಗ್

ನಜಾಫ್‌ಗಡ್‌ನ ನವಾಬ ಎಂದೇ ಖ್ಯಾತರಾಗಿದ್ದ ವೀರೇಂದ್ರ ಸೆಹ್ವಾಗ್ ಭಾರತ ಕಂಡ ಅದ್ಭುತ ಬ್ಯಾಟುಗಾರರಲ್ಲಿ ಒಬ್ಬರು. ಫುಟ್‌ವರ್ಕ್ ಇಲ್ಲದಿದ್ದರೂ ಇವರ ಸ್ಫೋಟಕ ಆಟ ಎಂಥವರನ್ನೂ ಬೆರಗಾಗಿಸುವಂತಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿಹೆಚ್ಚು ತ್ರಿಶತಕ ಭಾರಿಸಿದ ದಾಖಲೆ ಇವರದ್ದು.

ವೀರೇಂದ್ರ ಸೆಹ್ವಾಗ್‌ಗೆ ವೇಗವಾಗಿ ರನ್ ಗಳಿಸುವ ಹುಚ್ಚಿನ ಜೊತೆಗೆ ವೇಗದ ಕಾರುಗಳೆಂದರೂ ಹುಚ್ಚು. ಅವರ ಬಳಿ ಬೆಂಟ್ಲೀ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ ಕಾರು ಇದೆ. ಇದರ ಬೆಲೆ 3.74 ಕೋಟಿ ರೂ ಎನ್ನಲಾಗಿದೆ. ಈ ಕಾರು 5.2 ಸೆಕೆಂಡ್‌ನಲ್ಲಿ 100 ಕಿಮೀ ವೇಗ ತಲುಪಬಲ್ಲುದು.

ಇತರ ಆಟಗಾರರ ಕಾರು

ಇತರ ಆಟಗಾರರ ಕಾರು

ರೋಹಿತ್ ಶರ್ಮಾ: ಬಿಎಂಡಬ್ಲ್ಯೂ ಎಂ5 - 1.5 ಕೋಟಿ ರೂ
ಸುರೇಶ್ ರೈನಾ: ಪೋರ್ಷೆ ಬಾಕ್ಸ್‌ಟರ್ ಎಸ್- 94 ಲಕ್ಷ ರೂ
ದಿನೇಶ್ ಕಾರ್ತಿಕ್: ಪೋರ್ಷೆ ಕೇಮ್ಯಾನ್ ಎಸ್- 81 ಲಕ್ಷ ರೂ
ಶಿಖರ್ ಧವನ್: ಮರ್ಸಿಡೆಸ್ ಜಿಎಲ್ 350 ಸಿಡಿಐ- 80 ಲಕ್ಷ ರೂ

(ಒನ್ಇಂಡಿಯಾ ಸುದ್ದಿ)

English summary
Surya Kumar Yadav has purchased Mercedes-Benz car of 2 crore Rs. Few other Indian cricketers have owned cars costlier than this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X