ಐಸಿಸಿ ವಿಶ್ವಕಪ್: ಭಾರತ ಕ್ರಿಕೆಟ್ ತಂಡಕ್ಕೆ ಭಾರತೀಯನಿಂದಲೇ ಸವಾಲು! ಈ ಆಟಗಾರನ ಕಟ್ಟಿಹಾಕಿದರೆ ಎಲ್ಲವೂ ಸಲೀಸು!
ಭಾರತ ಮತ್ತೊಮ್ಮೆ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲಲು ಈಗ ಕೌಂಟ್‌ಡೌನ್ ಶುರುವಾಗಿದೆ, ನವೆಂಬರ್ 15 ಕ್ಕೆ ಭಾರತ & ನ್ಯೂಜಿಲೆಂಡ್ ನಡುವೆ ಮೊದಲ ಸೆಮಿಫೈನಲ್ ನಡೆಯಲಿದೆ. ಹಾಗಾದರೆ ಕಿವೀಸ್ ತಂಡದ ವಿರುದ್ಧ ಭಾರತದ ಗೆಲುವು ಸುಲಭವಾಗಿ ಇರುತ್ತಾ? ಸುಲಭ ಆಗಲು ಏನೇನು ಮಾಡಬೇಕಿದೆ? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.
ಇನ್ನೇನು 4 ದಿನ ಅಷ್ಟೇ, ಭಾರತ ಕ್ರಿಕೆಟ್ ತಂಡದ ಭವ್ಯ ಕನಸು ನನಸಾಗಲಿದೆ. ಜೊತೆಗೆ, ಶತಕೋಟಿ ಭಾರತೀಯರ ಕನಸು ಕೂಡ ನನಸಾಗುತ್ತದೆ. ಹೀಗಿದ್ದಾಗಲೇ ಭಾರತ ಫೈನಲ್‌ಗೆ ಸುಲಭವಾಗಿ ಲಗ್ಗೆ ಇಡುವುದು ಹೇಗೆ ಸಾಧ್ಯ.? ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಯಾಕೆ ಅಂದರೆ, ಪಾಶ್ಚಿಮಾತ್ಯ ಕ್ರಿಕೆಟ್ ತಂಡಗಳ ಪೈಕಿ ಸ್ಪಿನ್ ಬೌಲಿಂಗ್ ಎದುರಿಸುವ ತಾಕತ್ತನ್ನು ಹೊಂದಿರುವ ಏಕೈಕ ತಂಡ ನ್ಯೂಜಿಲೆಂಡ್. ಹೀಗಾಗಿ ಭಾರತದ ಸ್ಪಿನ್ ಪಿಚ್‌ನಲ್ಲಿ ಭಾರತ ತಂಡಕ್ಕೆ ಕಠಿಣ ಪೈಪೋಟಿಯನ್ನ ನ್ಯೂಜಿಲೆಂಡ್ ಕೊಡುವ ನಿರೀಕ್ಷೆ ಇದೆ. ಹೀಗಿದ್ದಾಗ ಆತ ಒಬ್ಬನೇ ಭಾರತ ಕ್ರಿಕೆಟ್ ತಂಡಕ್ಕೆ ವಿಲನ್ ಆಗಬಲ್ಲ! ಯಾರು ಗೊತ್ತಾ ಆ ನ್ಯೂಜಿಲೆಂಡ್‌ನ ಕ್ರಿಕೆಟ್ ಆಟಗಾರ?

ಭಾರತೀಯನಿಂದಲೇ ಭಾರತಕ್ಕೆ ಸವಾಲು!
ರಚಿನ್ ರವೀಂದ್ರ ಬಗ್ಗೆ ನಿಮಗೆಲ್ಲ ಗೊತ್ತಿರಬಹುದು, ರಚಿನ್ ಅವರ ತಂದೆ ಭಾರತದವರು. ಆದರೆ ನ್ಯೂಜಿಲೆಂಡ್ ನೆಲದಲ್ಲಿ ಉದ್ಯೋಗದ ಕಾರಣಕ್ಕೆ ಹೋಗಿ ನೆಲೆಸಿದ್ದ ಅವರಿಗೆ ರಚಿನ್ ಜನಿಸಿದ್ದರು. ಹೀಗೆ ಭಾರತ ಮೂಲದ ನಂಟು ಹೊಂದಿರುವ ರಚಿನ್ ರವೀಂದ್ರ, ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸುತ್ತಿದ್ದಾರೆ. ಹಾಗೇ ಭಾರತದ ವಿರುದ್ದ ಕೂಡ ಉತ್ತಮ ರನ್‌ರೇಟ್ ಹೊಂದಿದ್ದಾರೆ. ಇದೇ ಕಾರಣಕ್ಕೆ ಭಾರತ ತನ್ನ ಗೆಲುವನ್ನು ಸುಲಭ ಮಾಡಿಕೊಳ್ಳಲು ಇದೇ ಆಟಗಾರನನ್ನ ಮೊದಲು ಪೆವಿಲಿಯನ್‌ಗೆ ಕಳುಹಿಸಬೇಕು ಅಂತಿದ್ದಾರೆ ಅಭಿಮಾನಿಗಳು.
ಬೆಂಗಳೂರಿನಲ್ಲಿ ನಾಳೆ ಭಾರತದ ಮ್ಯಾಚ್
ಭಾರತ ತಂಡ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್-2023 ಟೂರ್ನಿಯಲ್ಲಿ, ಅಬ್ಬರಿಸುತ್ತಿದೆ. ಅದು ಯಾವ ಮಟ್ಟಿಗೆ ಅಂದ್ರೆ ಈವರೆಗೂ 8 ಮ್ಯಾಚ್ ಆಡಿರುವ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಒಂದೇ ಒಂದು ಪಂದ್ಯ ಸೋತಿಲ್ಲ. ಹೀಗಿದ್ದಾಗ ಭಾರತ ತಂಡ ಲೀಗ್ ಹಂತದಲ್ಲಿನ ಕೊನೇ ಪಂದ್ಯ ನೆದರ್ಲ್ಯಾಂಡ್ಸ್ ವಿರುದ್ಧ ಆಡಲಿದೆ. ನೆದರ್ಲ್ಯಾಂಡ್ಸ್ ಟೀಂ ವಿರುದ್ಧ ಭಾರತಕ್ಕೆ ಗೆಲುವು ಸುಲಭವೇ ಆಗಿದ್ದರೂ, ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಹಾಗೇ ಈ ಪಂದ್ಯ ಮುಗಿಸಿ, ನ್ಯೂಜಿಲೆಂಡ್ ತಂಡದ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಸಜ್ಜಾಗಬೇಕಿದೆ.

ಭಾರತ ಎಚ್ಚರಿಕೆಯ ಹೆಜ್ಜೆ ಇಡಬೇಕು
ಈ ಎಲ್ಲಾ ಲೆಕ್ಕಾಚಾರವನ್ನು ತಾಳೆಹಾಕಿ ನೋಡುವುದಾದರೆ ಭಾರತ ತಂಡ ಈ ಬಾರಿಯೂ ಫೈನಲ್ ಪ್ರವೇಶ ಮಾಡುವುದು ಬಹುತೇಕ ಪಕ್ಕಾ. ಆದರೆ ನ್ಯೂಜಿಲೆಂಡ್ ತಂಡದ ವಿರುದ್ಧ ಎಚ್ಚರಿಕೆಯ ಹೆಜ್ಜೆ ಇಟ್ಟು, ಕಿವೀಸ್ ಪಡೆಗೆ ಸೋಲು ಕರುಣಿಸಬೇಕಿದೆ. ಈ ಮೂಲಕ ತನ್ನ ಫೈನಲ್ ಹಾದಿಯನ್ನ ಭಾರತ ಸುಲಭ ಮಾಡಿಕೊಳ್ಳಬೇಕಿದೆ. ಇಲ್ಲವಾದರೆ, ಮತ್ತಷ್ಟು ಕಷ್ಟ ಎದುರಾಗುವ ಸಾಧ್ಯತೆ ಹೆಚ್ಚು. ಆದರೆ ಭಾರತ ಎಚ್ಚರಿಕೆಯ ಹೆಜ್ಜೆಯ ಇಟ್ಟರೆ, ದಾರಿಯೂ ಸುಲಭ. ಫೈನಲ್ ಪಂದ್ಯಕ್ಕೆ ಈಸಿ ಎಂಟ್ರಿ ಪಡೆಯಬಹುದು ಅಂತಿದ್ದಾರೆ ಅಭಿಮಾನಿಗಳು.
ಮನೆಗೆ ಹೋದ ಪಾಕಿಸ್ತಾನ ತಂಡ
ವಿಶ್ವಕಪ್ ಆರಂಭದಲ್ಲಿ ನೆದರ್ಲ್ಯಾಂಡ್ಸ್ & ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ್ದ ಪಾಕ್, ನಂತರ ಭಾರತದ ವಿರುದ್ಧ ಹೀನಾಯ ಸೋಲನ್ನ ಕಂಡಿತ್ತು. ಅಲ್ಲಿಂದ ಶುರುವಾದ ಪಾಕ್‌ನ ಹೀನಾಯ ಪ್ರದರ್ಶನ ಸರಿ ಹೋಗಲೇ ಇಲ್ಲ. ಅದ್ರಲ್ಲೂ ಅಫ್ಘಾನಿಸ್ತಾ ವಿರುದ್ಧ ಕೂಡ ಹೀನಾಯ ಸೋಲು ಕಂಡಿತ್ತು. ಹೀಗಾಗಿ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲೇ ಪಾಕಿಸ್ತಾನ ನಿರ್ಗಮಿಸುವುದು ಪಕ್ಕಾ ಆಗಿತ್ತು. ಆದರೂ ಬೆಂಗಳೂರಲ್ಲಿ ನಡೆದ ಪಂದ್ಯದಲ್ಲಿ, ನ್ಯೂಜಿಲೆಂಡ್ ವಿರುದ್ಧ ಗೆದ್ದು ಬೀಗಿದ್ದ ಹಿನ್ನೆಲೆ, ಪಾಕ್‌ನ ಆಸೆ ಜೀವಂತವಾಗಿತ್ತು. ಇಂದು ಆಂಗ್ಲರ ವಿರುದ್ಧ ಸೋತು ಮನೆಗೆ ಹೊರಟಿದೆ ಪಾಕಿಸ್ತಾನ. 338 ರನ್‌ಗಳ ಗುರಿ ನೀಡಿದ್ದ ಇಂಗ್ಲೆಂಡ್ ತಂಡವು, ಪಾಕಿಸ್ತಾನದ ಹೆಡೆಮುರಿ ಕಟ್ಟಿದೆ.












Click it and Unblock the Notifications