India vs Sri lanka: ಹೊಸ ಅಧ್ಯಾಯ ಆರಂಭಿಸಲು ಗಂಭೀರ್-ಸೂರ್ಯ ಸಜ್ಜು; ಹೇಗಿರಲಿದೆ ಪ್ಲೇಯಿಂಗ್ ಇಲೆವೆನ್

ಭಾರತ ಕ್ರಿಕೆಟ್‌ ತಂಡದಲ್ಲಿ ಹೊಸ ಅಧ್ಯಾಯಕ್ಕೆ ಇಂದು ನಾಂದಿ ಹಾಡಲು ಸೂರ್ಯಕುಮಾರ್ ಯಾದವ್ ಮತ್ತು ಗೌತಮ್ ಗಂಭೀರ್ ಸಜ್ಜಾಗಿದ್ದಾರೆ. ಭಾರತ ಇಂದು ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯವನ್ನಾಡಲಿದ್ದು, ಗೆಲುವಿನ ನಿರೀಕ್ಷೆಯಲ್ಲಿದೆ.

ನಾಯಕನಾಗಿ ಸೂರ್ಯಕುಮಾರ್ ಯಾದವ್ ಮತ್ತು ಕೋಚ್ ಆಗಿ ಗೌತಮ್ ಗಂಭೀರ್ ಅವರಿಗೆ ಇದು ಮೊದಲ ಪಂದ್ಯವಾಗಿದ್ದು, ಗೆಲುವಿನ ಮೂಲಕ ಹೊಸ ಅಧ್ಯಾಯ ಆರಂಭಿಸಲು ರಣತಂತ್ರ ರೂಪಿಸಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಮಾದರಿಗೆ ವಿದಾಯ ಹೇಳಿದ್ದಲ್ಲದೆ, ರಾಹುಲ್ ದ್ರಾವಿಡ್ ಕೂಡ ಕೋಚ್ ಸ್ಥಾನದಿಂದ ಕೆಳಗಿಳಿದರು. ಮುಂದಿನ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡವನ್ನು ಕಟ್ಟುವ ಗುರಿಯೊಂದಿಗೆ ಗಂಭೀರ್ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

India vs Srilanka 1st t20 Weather and Pitch report Probable XI

ಭಾರತ ಶ್ರೀಲಂಕಾ ಟಿ20 ದಾಖಲೆ

ಟಿ20 ಕ್ರಿಕೆಟ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗುತ್ತಿರುವುದು ಇದು 30ನೇ ಬಾರಿ. ಆಡಿದ 29 ಪಂದ್ಯಗಳಲ್ಲಿ 19 ರಲ್ಲಿ ಭಾರತ ಗೆದ್ದಿದ್ದು, ಗೆಲುವಿನ 65.51 ಆಗಿದೆ. ಇದೇ ವಿಶ್ವಾಸದಲ್ಲಿ ಇಂದು ಭಾರತ ತಂಡ ಮೈದಾನಕ್ಕಿಳಿಯಲಿದೆ.

ಶ್ರೀಲಂಕಾಗೆ ಆಘಾತ!

16 ಆಟಗಾರರನ್ನು ಆಯ್ಕೆ ಮಾಡಿದ ಬಳಿಕ ಶ್ರೀಲಂಕಾ ತಂಡಕ್ಕೆ ಆಟಗಾರರ ಗಾಯದ ಸಮಸ್ಯೆ ಕಾಡುತ್ತಿದೆ. ನುವಾನ್ ತುಷಾರ ಮತ್ತು ದುಷ್ಮಂತ ಚಮೀರಾ ಇಬ್ಬರೂ ಗಾಯದ ಸಮಸ್ಯೆಯಿಂದ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನವನ್ನು ದಿಲ್ಶಾನ್ ಮಧುಶಂಕ ಮತ್ತು ಅಸಿತಾ ಫೆರ್ನಾಂಡೋ ತುಂಬಲಿದ್ದಾರೆ. ಶುಕ್ರವಾರ ಅಭ್ಯಾಸದ ಸಮಯದಲ್ಲಿ ಮೊಹಮ್ಮದ್ ಸಿರಾಜ್ ಅವರ ಬಲಗಾಲಿಗೆ ಪೆಟ್ಟಾಗಿದ್ದು ಅವರು ಗಾಯಗೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ.

ಪಿಚ್ ಹೇಗಿರಲಿದೆ

ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಇತ್ತೀಚೆಗೆ ಮುಕ್ತಾಯವಾದ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಈ ಮೈದಾನದಲ್ಲಿ ಸರಾಸರಿ ಸ್ಕೋರ್ 185 ಆಗಿದೆ. ಚೇಸಿಂಗ್ ಮಾಡುವವರಿಗೆ ಪಿಚ್ ಅನುಕೂಲಕರವಾಗಿದೆ ಎನ್ನುವುದನ್ನು ಇಲ್ಲಿ ನಡೆದಿರುವ ಪಂದ್ಯಗಳು ಸಾಬೀತುಪಡಿಸಿವೆ. ಶನಿವಾರ ರಾತ್ರಿ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಪಲ್ಲೆಕೆಲೆಯಲ್ಲಿ ಮಳೆ ಬೀಳುವ ಸಾಧ್ಯತೆ ಶೇ. 10 ರಷ್ಟಿದ್ದು, ಮಳೆಯ ಆತಂಕವನ್ನು ದೂರಾಗಿಸಿದೆ.

ಸಂಭಾವ್ಯ ಆಡುವ ಬಳಗ

ಭಾರತ: ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ (ಉಪನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕ (ನಾಯಕ), ಕಮಿಂದು ಮೆಂಡಿಸ್, ದಸುನ್ ಶನಕ, ವನಿಂದು ಹಸರಂಗ, ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಮತೀಶ ಪತಿರಣ, ದಿಲ್ಶಾನ್ ಮಧುಶಂಕ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+