T20 WOrld Cup IND vs PAK: ಹೈವೋಲ್ಟೇಜ್‌ ಪಂದ್ಯದಲ್ಲಿ ಹೇಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್‌ XI? ಯಾರಿಗೆ ಸಿಗುತ್ತೆ ಚಾನ್ಸ್

ಟಿ20 ವಿಶ್ವಕಪ್‌ ಆರಂಭವಾಗಿದೆ. ಮೊದಲ ಲೀಗ್‌ ಹಂತದ ಪಂದ್ಯದಲ್ಲಿ ಟೀಮ್ ಇಂಡಿಯಾ ಐರ್ಲೆಂಡ್ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ. ಭಾನುವಾರ ಲೀಗ್‌ ಹಂತದ ಎರಡನೇ ಪಂದ್ಯದಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ಬಲಿಷ್ಠವಾಗಿದ್ದು, ಈ ಪಂದ್ಯದಲ್ಲಿ ಗೆಲುವಿನ ಟಾರ್ಗೆಟ್‌ ಹಾಕಿಕೊಂಡಿದೆ.

ಲೀಗ್‌ ಹಂತದ ಗೆಲುವು ನಿಶ್ಚಿತವಾಗಿ ರೋಹಿತ್ ಶರ್ಮಾ ಪಡೆಗೆ ಬೂಸ್ಟ್‌ ನೀಡಲಿದೆ. ಇನ್ನು ಪಾಕಿಸ್ತಾನ ಮೊದಲ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಸೋತು ಮುಖಭಂಗ ಅನುಭವಿಸಿದೆ. ಲೀಗ್‌ ಹಂತದಿಂದ ಮುಂದಿನ ಹಂತಕ್ಕೆ ಪಾಕ್‌ ಅರ್ಹತೆ ಪಡೆಯಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಟೀಮ್ ಇಂಡಿಯಾ, ಪಾಕ್‌ಗೆ ಸುಲಭದ ತುತ್ತು ಆಗಲಾರದು.

India vs Pakistan T20 World Cup 2024 Playing XI and Pitch Report

ವಿಶ್ವಕಪ್ ಎಂದು ಬಂದಾಗ ಟೀಮ್ ಇಂಡಿಯಾ ಮೈಚಳಿ ಬಿಟ್ಟು ಆಡುತ್ತದೆ. 2021ರಲ್ಲಿ ದುಬೈನಲ್ಲಿ ನಡೆದ ಪಂದ್ಯದಲ್ಲಿ ಸೋಲು ಕಂಡಿದ್ದು ಬಿಟ್ಟರೆ ಟೀಮ್ ಇಂಡಿಯಾ ಪ್ರದರ್ಶನ ಸ್ಥಿರವಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿ ಆತ್ಮವಿಶ್ವಾಸವನ್ನು ಇಮ್ಮಡಿ ಗೊಳಿಸಿಕೊಳ್ಳಲಿದೆ. ಹಾಗಿದ್ದರೆ ಟೀಮ್ ಇಂಡಿಯಾದ ಪ್ಲೇಯಿಂಗ್‌ ಇಲೆವೆನ್ ಹೇಗಿರಲಿದೆ ಇಲ್ಲಿದೆ ಮಾಹಿತಿ.

ಟಾಪ್‌ ಆರ್ಡರ್‌ನಲ್ಲಿ ಸ್ಟಾರ್ ಬ್ಯಾಟರ್ಸ್‌

ಟೀಮ್ ಇಂಡಿಯಾದ ಟಾಪ್‌ ಆರ್ಡರ್‌ ನೋಡಿದರೆ ಪಾಕ್‌ಗೆ ಭಯವಾಗುತ್ತದೆ. ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ವಿಶ್ವದ ಕ್ಲಾಸ್‌ ಬ್ಯಾಟರ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರೂ ಪವರ್‌ ಪ್ಲೇನಲ್ಲಿ ಪಾಕ್‌ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಂತು ರನ್‌ ಗಳಿಸುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಗೆಲುವು ಸುಲಭವಾಗುತ್ತದೆ. ಅಲ್ಲದೆ ಇಬ್ಬರಲ್ಲಿ ಒಬ್ಬರು ಬಿಗ್ ಇನ್ನಿಂಗ್ಸ್ ಕಟ್ಟಬೇಕು.

India vs Pakistan T20 World Cup 2024 Playing XI and Pitch Report

ಮಿಡ್ಲ್‌ ಆರ್ಡರ್‌ ಸಖರ್ ಸ್ಟ್ರಾಂಗ್‌

ಟೀಮ್ ಇಂಡಿಯಾದ ಬ್ಯಾಟಿಂಗ್‌ ವಿಭಾಗದಲ್ಲಿ ಮೂರನೇ ಕ್ರಮಾಂಕದಲ್ಲಿ ರಿಷಭ್ ಪಂಥ್‌ ಆಡುವುದು ಫಿಕ್ಸ್‌. ಸಿಕ್ಕ ಅವಕಾಶವನ್ನು ರಿಷಭ್ ಬಳಸಿಕೊಂಡಿರುವ ರೀತಿಯನ್ನು ನೋಡಿದರೆ, ಪಾಕ್‌ ಬೌಲರ್‌ಗಳಿಗೆ ಇವರು ಕಾಡಬಲ್ಲರು. ನಾಲ್ಕನೇ ಕ್ರಮಾಂಕದಲ್ಲಿ ವಿಶ್ವದ ಸ್ಟಾರ್‌ ಟಿ20 ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಅಂಗಳಕ್ಕೆ ಪ್ರವೇಶಿಸುತ್ತಾರೆ. ಇವರು ಬರುತ್ತಿದ್ದಂತೆ ರನ್‌ವೇಗಕ್ಕೆ ಚುರುಕು ಮುಟ್ಟುವುದರಲ್ಲಿ ಎರಡು ಮಾತಿಲ್ಲ.

ಕೆಳ ಕ್ರಮಾಂಕದಲ್ಲಿ ಕೊಂಚ ಸಮಸ್ಯೆ

ಐದನೇ ಕ್ರಮಾಂಕದಲ್ಲಿ ಆಲ್‌ರೌಂಡರ್ ಹಾಗೂ ಟೀಮ್ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ. ಇವರು ಬ್ಯಾಟಿಂಗ್‌ನಲ್ಲಿ ಪಾಕ್‌ ತಂಡಕ್ಕೆ ಬಹುವಾಗಿ ಕಾಡಬಲ್ಲರು. ಅಲ್ಲದೆ ಇವರ ಆಟವನ್ನು ಪಾಕ್‌ ಮರೆಯಲು ಸಾಧ್ಯವೆ ಇಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಇವರ ಸಿಕ್ಸರ್‌ಗಳಿಗೆ ಪಾಕ್‌ ಕಂಗಾಲಾಗಿತ್ತು. ಇವರ ಬಳಿಕ ರವೀಂದ್ರ ಜಡೇಜಾ ಬ್ಯಾಟ್ ಮಾಡಲಿದ್ದು, ಇವರು ಸಹ ಸ್ಥಿರವಾಗಿ ರನ್ ಕಲೆ ಹಾಕಬಲ್ಲರು.

India vs Pakistan T20 World Cup 2024 Playing XI and Pitch Report

ಒಂದು ಸ್ಥಾನದಲ್ಲಿ ಬದಲಾವಣೆ ಸಾಧ್ಯತೆ

ಇನ್ನು ಟೀಮ್ ಇಂಡಿಯಾ ಪಾಕ್‌ ವಿರುದ್ಧ ಯಾವ ಸಂಯೋಜನೆಯಲ್ಲಿ ಅಂಗಳಕ್ಕೆ ಇಳಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಪಿಚ್‌ ಮರ್ಮ ಅರಿತು ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡುವ ಸಾಧ್ಯತೆ ಇದೆ. ಆಲ್‌ರೌಂಡರ್‌ ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್‌ ಇಬ್ಬರೂ ಮೊದಲ ಪಂದ್ಯದಲ್ಲಿ ಆಡಿದ್ದರು. ಇವರಿಬ್ಬರಲ್ಲಿ ಒಬ್ಬರಿಗೆ ಕೊಕ್ ಸಿಗುವ ಸಾಧ್ಯತೆ ಇದೆ. ಇವರ ಬದಲಿಗೆ ಕುಲ್‌ದೀಪ್ ಯಾದವ್ ಕಾಣಿಸಿಕೊಳ್ಳಬಹುದು. ಇವರ ಎಂಟ್ರಿ ಇಂದ ಟೀಮ್ ಇಂಡಿಯಾದ ಸ್ಪಿನ್ ವಿಭಾಗ ಇನ್ನು ಬಲಾಢ್ಯವಾಗುತ್ತದೆ.

ಮೂವರು ಪೇಸರ್ಸ್‌

ಅಮೆರಿಕದಲ್ಲಿನ ಪಿಚ್‌ಗಳು ವೇಗದ ಬೌಲರ್‌ಗಳಿಗೆ ಸಹಾಯ ನೀಡುತ್ತಿದ್ದು, ಟೀಮ್ ಇಂಡಿಯಾ ಮೂವರು ವೇಗಿಗಳಿಂದ ಕಣಕ್ಕೆ ಇಳಿಯಲಿದೆ. ಯಾರ್ಕರ್ ಸ್ಪೇಷಲಿಸ್ಟ್‌ ಜಸ್ಪ್ರಿತ್ ಬುಮ್ರಾ, ಅರ್ಷದೀಪ್‌ ಸಿಂಗ್, ಮೊಹಮ್ಮದ್‌ ಸಿರಾಜ್‌ ತಂಡದಲ್ಲಿ ಕಾಣಿಸಿಕೊಳ್ಳುವ ವೇಗಿಗಳಾಗಿದ್ದಾರೆ. ಇವರು ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸ ಬೇಕಿದೆ.

ಟೀಮ್ ಇಂಡಿಯಾ ಸಂಭಾವ್ಯ ತಂಡ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಿವಂ ದುಬೆ/ ಅಕ್ಸರ್‌ ಪಟೇಲ್, ಬುಮ್ರಾ, ಅರ್ಷದೀಪ್‌ ಸಿಂಗ್‌, ಸಿರಾಜ್‌, ಕುಲ್‌ದೀಪ್‌ ಯಾದವ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+