IND VS PAK T20 World Cup: ಆಲ್‌ರೌಂಡರ್ ಬದಲಿಗೆ ಸ್ಪಿನ್ನರ್‌ಗೆ ಸಿಗುತ್ತೆ ಚಾನ್ಸ್?
ಭಾರತ ಹಾಗೂ ಪಾಕಿಸ್ತಾನ ನಡುವಣ ಟಿ20 ಪಂದ್ಯ ಭಾನುವಾರ ಅಮೆರಿಕದಲ್ಲಿ ನಡೆಯಲಿದೆ. ಈಗಾಗಲೇ ಭಾರತ ಟಿ20 ವಿಶ್ವಕಪ್‌ನಲ್ಲಿ ಗೆಲುವಿನ ಅಭಿಯಾನವನ್ನು ಆರಂಭಿಸಿದೆ. ಈಗ ರೋಹಿತ್ ಪಡೆ ಬಿಗ್ ಮ್ಯಾಚ್ ಮೇಲೆ ಕಣ್ಣು ನೆಟ್ಟಿದೆ. ಈ ಪಂದ್ಯದಲ್ಲಿ ಶತಾಯ ಗತಾಯ ಗೆಲುವು ಸಾಧಿಸಲೇ ಬೇಕು ಎಂದು ರೋಹಿತ್ ಬಾಯ್ಸ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಐರ್ಲೆಂಡ್ ವಿರುದ್ದದ ಪಂದ್ಯದಲ್ಲಿ ಟೀಮ್ ಇಂಡಿಯಾದ ಸಂಘಟಿತ ಬೌಲಿಂಗ್ ತಂಡಕ್ಕೆ ನೆರವಾಯಿತು. ಈ ವೇಳೆ ತಂಡದ ಸ್ಟಾರ್ ಬೌಲರ್‌ಗಳು ವಿಕೆಟ್ ಬೇಟೆ ನಡೆಸಿದ್ದಾರೆ. ಆದರೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಭಿನ್ನ ಗೇಮ್‌ಪ್ಲ್ಯಾನ್‌ನೊಂದಿಗೆ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಯಾವ ಬದಲಾವಣೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅಮೋಘ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈ ಬಿಡುವ ಚಾನ್ಸ್ ಇಲ್ಲ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಆಟಗಾರ. ಆದರೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಒಬ್ಬ ಆಲ್‌ರೌಂಡರ್‌ಗೆ ರೆಸ್ಟ್ ನೀಡುವುದು ಕನ್ ಫರ್ಮ್ ಎಂದು ಅನಿಸುತ್ತಿದೆ.
ಹಾಗಿದ್ದರೆ ಯಾವ ಆಲ್‌ರೌಂಡರ್‌ಗೆ ಕೋಕ್ ನಿಡಲಾಗುತ್ತದೆ ಎಂಬ ಬಗ್ಗೆ ನಿಮ್ಮ ತಲೆಯಲ್ಲಿ ಪ್ರಶ್ನೆಗಳು ಏಳಬಹುದು. ಐಪಿಎಲ್‌ನಲ್ಲಿ ಚೆನ್ನೈ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಟಿ20 ವಿಶ್ವಕಪ್ ತಂಡದಲ್ಲಿ ಆಡುವ ಅವಕಾಶ ಪಡೆದ ಶಿವಂ ದುಬೆ, ಪಾಕ್ ವಿರುದ್ಧದ ಪಂದ್ಯದಲ್ಲಿ ಡ್ರಾಪ್ ಆಗುವ ಸಾಧ್ಯತೆ ದಟ್ಟವಾಗಿದೆ.

ಶಿವಂ ದುಬೆ ಬದಲಿಗೆ ಪಾಕ್ ವಿರುದ್ಧ ರಿಸ್ಟ್ ಸ್ಪಿನ್ ಬೌಲರ್ ಕುಲದೀಪ್ ಯಾದವ್ ಅಖಾಡ ಪ್ರವೇಶಿಸಬಹುದು. ಕುಲದೀಪ್ ಯಾದವ್ ಅವರ ಆ ಮ್ಯಾಜಿಕ್ ಬಾಲ್ ಅನ್ನು ಎದುರಿಸಲು ಪಾಕ್ ನಾಯಕ ಬಾಬರ್ ಅಜಮ್ ಅವರನ್ನು ವಿಫಲರಾಗಿ ಕ್ಲೀನ್ ಬೌಲ್ಡ್ ಆಗಿದ್ದರು. ಕುಲದೀಪ್ ಯಾದವ್ ಈ ಪಂದ್ಯದಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಅಂಕಿ ಅಂಶಗಳು ಹೇಳುತ್ತವೆ. ಕುಲದೀಪ್ 6 ODI ಪಂದ್ಯಗಳ 5 ಇನ್ನಿಂಗ್ಸ್‌ಗಳನ್ನು 12 ವಿಕೆಟ್ ಪಡೆದಿದ್ದಾರೆ. ಹೀಗಾಗಿ ಇವರಿಗೆ ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚು.












Click it and Unblock the Notifications