IND vs PAK Match: ಪಾಕಿಸ್ತಾನ ವಿರುದ್ಧ ಭಾರತ ತಂಡ ಇತಿಹಾಸ ನಿರ್ಮಿಸಲು ಕ್ಷಣಗಣನೆ ಶುರು!

ಭಾರತ ಮತ್ತು ಪಾಕಿಸ್ತಾನ ಪಂದ್ಯ ಶುರುವಾಗಿದ್ದು ಗುಜರಾತ್‌ನ ಅಹಮದಾಬಾದ್ ಕ್ರೀಡಾಂಗಣ ಭಾರತದ ಅಭಿಮಾನಿಗಳಿಂದ ತುಂಬಿ ಹೋಗಿದೆ. ನಮ್ಮ ಹೆಮ್ಮೆ, ಭಾರತ ತಂಡದ ಗೆಲುವಿಗಾಗಿ ಶತಕೋಟಿ ಭಾರತೀಯರು ಪ್ರಾರ್ಥನೆ ಮಾಡುತ್ತಿದ್ದಾರೆ. ಈ ಸಮಯಕ್ಕೇ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಳ್ಳಲು ಭಾರತ ಕ್ರಿಕೆಟ್ ತಂಡದ ಆಟಗಾರರು ಸಜ್ಜಾಗಿದ್ದಾರೆ. ಹಾಗಾದ್ರೆ ವಿಶ್ವಕಪ್ ಅಖಾಡದಲ್ಲಿ ಭಾರತದ ಗೆಲುವಿನ ಅಬ್ಬರ ಹೇಗಿದೆ?

ಇದುವರೆಗೆ ಭಾರತ & ಪಾಕಿಸ್ತಾನ ಆಡಿರುವ ಏಕದಿನ ಪಂದ್ಯಗಳ ಸಂಖ್ಯೆ 134 ಆಗಿದ್ದರೆ, ಈ ಪೈಕಿ 56 ಪಂದ್ಯಗಳಲ್ಲಿ ಭಾರತ ಗೆದ್ದು ಬೀಗಿದೆ. ಹಾಗೇ ಪಾಕಿಸ್ತಾನ 73 ಪಂದ್ಯಗಳಲ್ಲಿ ಗೆದ್ದಿದೆ. ಇನ್ನು 5 ಪಂದ್ಯಗಳ ಫಲಿತಾಂಶ ಬಂದೇ ಇಲ್ಲ. ಹಾಗಾದರೆ ಕ್ರಿಕೆಟ್ ಹಬ್ಬ ಅಂತಲೇ ಕರೆಯಲ್ಪಡುವ ಐಸಿಸಿ ಏಕದಿನ ವಿಶ್ವಕಪ್ ಅಖಾಡದಲ್ಲಿ, ಭಾರತವು ಎಷ್ಟು ಬಾರಿ ಪಾಕಿಸ್ತಾನ ವಿರುದ್ಧ ಗೆದ್ದಿದೆ? ಪಾಕಿಸ್ತಾನ ಎಷ್ಟು ಪಂದ್ಯಗಳಲ್ಲಿ ಸೋಲು ಕಂಡಿದೆ? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದ್ದು, ಮುಂದೆ ಓದಿ.

Pakistan Match: Team India Gears Up to Create History and Break Records Against Pakistan

ವಿಶ್ವಕಪ್ ಅಖಾಡದಲ್ಲಿ ಭಾರತವೇ ಕಿಂಗ್!

ಹೌದು, ಒಟ್ಟಾರೆ ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಹೆಚ್ಚು ಪಂದ್ಯ ಗೆದ್ದಿದ್ರೂ ವಿಶ್ವಕಪ್ ಅಖಾಡದಲ್ಲಿ ಭಾರತವೇ ಕಿಂಗ್ ಆಗಿದೆ. ಹೇಗೆಂದರೆ ಭಾರತ ಮತ್ತು ಪಾಕ್ ನಡುವೆ ಈವರೆಗೂ ಒಟ್ಟಾರೆ 7 ವಿಶ್ವಕಪ್ ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ ತಂಡವೇ ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಆದ್ರೆ ಪಾಕಿಸ್ತಾನ ತಂಡ ಮಾತ್ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ. ಹೀಗಾಗಿ ಈಗ ನಡೆಯಲಿರುವ 8ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ಗೆಲ್ಲುವ ಪ್ರಯತ್ನ ಮಾಡಲಿದೆ. ಆದರೆ ಭಾರತ ಕ್ರಿಕೆಟ್ ತಂಡವು ಮಾತ್ರ, ಮತ್ತೊಮ್ಮೆ ಪಾಕಿಸ್ತಾನ ತಂಡಕ್ಕೆ ಸೋಲಿನ ರುಚಿ ತೋರಿಸಲು ಸನ್ನದ್ಧವಾಗಿದೆ.

ಹೇಗಿದೆ ಭಾರತ & ಪಾಕಿಸ್ತಾನ ಪಿಚ್?

ಇದೀಗ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯುತ್ತಿರುವ ಪಿಚ್‌ನಲ್ಲಿ ಯಾರಿಗೆ ಅನುಕೂಲಕರ ವಾತಾವರಣ ಇದೆ? ಬ್ಯಾಟಿಂಗ್ ಅಥವಾ ಬೌಲಿಂಗ್? ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಿದೆ. ಇನ್ನು ಈ ಹಿನ್ನೆಲೆಯಲ್ಲಿ ನೋಡುವುದಾದರೆ ಏಕದಿನ ವಿಶ್ವಕಪ್‌ನಲ್ಲಿ ಈವರೆಗೆ ಅಹಮದಾಬಾದ್‌ ಕ್ರೀಡಾಂಗಣದಲ್ಲಿ ಕೇವಲ ಒಂದು ಪಂದ್ಯ ನಡೆದಿದೆ. ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಇದೇ ಕ್ರೀಡಾಂಗಣದಲ್ಲಿ ಎದುರಾಗಿದ್ದವು. ಆ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ಭರ್ಜರಿ ಜಯ ಸಾಧಿಸಿತ್ತು. ಆದ್ರೆ ನ್ಯೂಜಿಲೆಂಡ್ & ಇಂಗ್ಲೆಂಡ್ ಪಂದ್ಯದ ಫಲಿತಾಂಶ ನೋಡಿ ಭಾರತ & ಪಾಕಿಸ್ತಾನ ಪಂದ್ಯದ ಕುರಿತು ಹೇಳೋಕೆ ಆಗಲ್ಲ.

Pakistan Match: Team India Gears Up to Create History and Break Records Against Pakistan

ಈಗಿನ ಮಾಹಿತಿ ಪ್ರಕಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ, ಪಿಚ್ ಬ್ಯಾಟಿಂಗ್ ಸ್ನೇಹಿ ಅಂತಾ ಹೇಳಲಾಗ್ತಿದೆ. ಬೌಲರ್ಸ್ ಹೊಸ ಚೆಂಡಿನೊಂದಿಗೆ ಸ್ವಿಂಗ್ ಪಡೆಯುವ ಸಾಧ್ಯತೆ ಇದ್ದರೂ, ಹಳೇ ಚೆಂಡಿನ ನಂತರ ದಾಂಡಿಗರ ಅಬ್ಬರ ಬಲು ಜೋರಾಗುವ ನಿರೀಕ್ಷೆ ಇದೆ. ಇದೇ ಕಾರಣಕ್ಕೆ ಭಾರತ & ಪಾಕ್ ಪಂದ್ಯ ಏನಾಗಲಿದೆ? ಅಂತ ಶತಕೋಟಿ ಭಾರತೀಯರು ಕಾಯುತ್ತಾ ಇದ್ದಾರೆ. ಭಾರತೀಯರು ಮಾತ್ರವಲ್ಲ ಇಡೀ ಜಗತ್ತು ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ ಕಾದು ಕುಳಿತಿದೆ.

ಭಾರತ VS ಪಾಕ್ ಆಡುವ ಬಳಗ ಇಲ್ಲಿದೆ:

ಭಾರತ‌ ತಂಡದ ಪರ: ರೋಹಿತ್ ಶರ್ಮಾ (ಕ್ಯಾಪ್ಟನ್), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಿಶ್ವಕಪ್ ಪಂದ್ಯದಲ್ಲಿ ಪಾಕ್ ವಿರುದ್ಧ ಅಖಾಡ ಪ್ರವೇಶ ಮಾಡಲಿದ್ದಾರೆ.

ಹಾಗೇ, ಪಾಕಿಸ್ತಾನ ತಂಡದ ಪರ: ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಬಾಬರ್ ಅಜಮ್ (ಕ್ಯಾಪ್ಟನ್), ಮೊಹಮ್ಮದ್ ರಿಜ್ವಾನ್ (ವಿಕೆಟ್‌ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಆಟವಾಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+