India Pakistan Match: ಭಾರತದ 3 ವಿಕೆಟ್ ಪತನ, ಏನಾಗುತ್ತೆ ಪಾಕಿಸ್ತಾನ ವಿರುದ್ಧದ ಮ್ಯಾಚ್?

India Pakistan Match: ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಮ್ಯಾಚ್ ದೊಡ್ಡ ತಿರುವು ಪಡೆದಿದೆ. ಒಂದು ಕಡೆ ಮಳೆ ಕಾಟ ಕೊಡುತ್ತಿದ್ರೆ, ಮತ್ತೊಂದು ಕಡೆ ಪಾಕಿಸ್ತಾನಿ ಬೌಲರ್‌ಗಳಿಗೆ ಟೀಂ ಇಂಡಿಯಾ ಆಟಗಾರರು ವಿಕೆಟ್ ಒಪ್ಪಿಸುತ್ತಿದ್ದಾರೆ. ಹಾಗಾದರೆ ಈಗ ಎಷ್ಟಾಗಿದೆ ಭಾರತದ ಸ್ಕೋರ್? ಪಾಕಿಸ್ತಾನದ ವಿರುದ್ಧದ ಪಂದ್ಯ ಏನಾಗಬಹುದು? ಮಳೆ ಕಾಟದ ಜೊತೆಗೆ ಈಗ ಟೀಂ ಇಂಡಿಯಾ ಎದುರು ಇರುವ ಸವಾಲು ಎಂತಹದ್ದು? ಮುಂದೆ ಓದಿ.

ಶ್ರೀಲಂಕಾದ ಕ್ಯಾಂಡಿಯಲ್ಲಿನ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯುತ್ತಿದೆ. 2023ರ ಏಷ್ಯಾ ಕಪ್ ಸರಣಿಯಲ್ಲೇ ಈ ಮ್ಯಾಚ್ ಹೈವೋಲ್ಟೇಜ್ ಆಗಿದ್ದರೂ, ಮಳೆ ಕಾಟಕ್ಕೆ ಫ್ಯಾನ್ಸ್ ಬೇಸರಗೊಂಡು ಕೂತಿದ್ದರು. ಆದರೆ ಹೇಗೋ ಪಂದ್ಯ ನಡೆಯುತ್ತಿದೆ, ಆದರೆ ಆರಂಭದಲ್ಲಿ ಅಬ್ಬರಿಸುತ್ತಿದ್ದ ಭಾರತೀಯ ಬ್ಯಾಟ್ಸ್‌ಮನ್ಸ್ ಇದೀಗ ಒಬ್ಬರಾದ ನಂತರ ಒಬ್ಬರು ಪೆವಿಲಿಯನ್ ಪರೇಡ್ ನಡೆಸುತ್ತಿದ್ದಾರೆ. ಇತ್ತೀಚಿನ ವರದಿ ಬಂದಾಗ ಭಾರತದ ಸ್ಕೋರ್ 51 ಆಗಿದ್ದು, ಆದರೆ ಭಾರತವು 3 ವಿಕೆಟ್ ಕಳೆದುಕೊಂಡಿದೆ.

rain-disturbing-india-vs-pakistan-high-voltage-match

ಘಟಾನುಘಟಿ ಆಟಗಾರರು ಔಟ್ ಔಟ್!

ಹೌದು ಭಾರತ & ಪಾಕಿಸ್ತಾನ ಪಂದ್ಯ ಅಂದ್ರೆ ಭಾರತೀಯರು ಅಥವಾ ಪಾಕಿಸ್ತಾನಿ ಪ್ರಜೆಗಳು ಮಾತ್ರವಲ್ಲ ಇಡೀ ಜಗತ್ತೇ ಕಾದು ನೋಡುತ್ತದೆ. ಅದರಲ್ಲೂ ಎರಡೂ ತಂಡಗಳ ನಡುವೆ ನಡೆಯುವ ಜಿದ್ದಾಜಿದ್ದಿನ ಆಟ ನೋಡಿದವನೆ ಧನ್ಯ. ಇಂತಿಪ್ಪ ಭಾರತ & ಪಾಕ್ ಪಂದ್ಯಕ್ಕೆ ಈಗ ಮಳೆರಾಯ ಅಡ್ಡಿ ಮಾಡುವ ಆತಂಕ ಎದುರಾಗಿದೆ. ನೆರೆ ದ್ವೀಪರಾಷ್ಟ್ರ ಶ್ರೀಲಂಕಾದ ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಈ ಮಧ್ಯೆ ಅಂದುಕೊಂಡ ರೀತಿ ಭಾರತದ ಆಟಗಾರರಿಂದ ರನ್ ಮಳೆ ಹರಿಯುತ್ತಿಲ್ಲ.

ಭಾರತ & ಪಾಕ್ ತಂಡಗಳು ಈ ಹೈ-ವೋಲ್ಟೇಜ್ ಘರ್ಷಣೆಯಲ್ಲಿ ಗೆದ್ದು ಬೀಗಲು ಪೈಪೋಟಿ ನಡೆಸುತ್ತಿವೆ. ಆದರೆ ದಿಢೀರನೆ ಭಾರತ 3 ವಿಕೆಟ್ ಕಳೆದುಕೊಂಡಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಐಯ್ಯರ್ ಪೆವಿಲಿಯನ್ ಸೇರಿದ್ದಾರೆ. ಇದು ಸಹಜವಾಗಿಯೇ ಭಾರತದ ಅಭಿಮಾನಿಗಳಿಗೆ ಬೇಸರ ತರಿಸಿದೆ. ಇದು ಸಾಲದು ಅಂತಾ ಮತ್ತೊಂದು ಶಾಕ್ ಕೂಡ ಎದುರಾಗಿದೆ. ಹಾಗಾದರೆ ಏನದು ಆಘಾತ? ಮುಂದೆ ಓದಿ.

rain-disturbing-india-vs-pakistan-high-voltage-match

ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ

ಪಾಕಿಸ್ತಾನ ವಿರುದ್ಧದ ಪಂದ್ಯದ ಆರಂಭದಲ್ಲೇ ಭಾರತಕ್ಕೆ ಸಿಹಿಸುದ್ದಿ ಸಿಕ್ಕಿದ್ದು, ಮಳೆ ಭೀತಿ ನಡುವೆ ಟಾಸ್ ಗೆದ್ದು ಬೀಗಿತ್ತು. ಹಾಗೇ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭಿಕರಾಗಿ ಶುಭ್‌ಮನ್‌ ಗಿಲ್‌ ಮತ್ತು ರೋಹಿತ್‌ ಶರ್ಮಾ ಅಖಾಡಕ್ಕೆ ಪ್ರವೇಶ ಮಾಡಿದ್ದರು. ಆದರೆ ಆರಂಭದಲ್ಲಿ ಎಲ್ಲಾ ಚೆನ್ನಾಗಿದ್ದ ಪಂದ್ಯ ಇದೀಗ ಭಾರತಕ್ಕೆ ಶಾಕ್ ಕೊಡುತ್ತಿದೆ. ಒಬ್ಬರಾದ ನಂತರ ಒಬ್ಬರು ಎಂಬಂತೆ 3 ವಿಕೆಟ್ ಬಿದ್ದಿವೆ. ಹೀಗಾಗಿ ಭಾರತದ ತಂಡದ ಎದುರು ಈಗ ದೊಡ್ಡ ಸವಾಲು ಇದೆ.

ಮತ್ತೆ ಮತ್ತೆ ಮಳೆ ಅಡ್ಡಿ!

ಇನ್ನು ಭಾರತ ತಂಡವು ಟಾಸ್ ಗೆದ್ದು ಮೊದಲ ಓವರ್‌ನಲ್ಲಿ ಒಂದು ಬೌಂಡರಿ ಗಳಿಸಿತ್ತು. ಹಾಗೇ ಮೊದಲ ಓವರ್‌ನಲ್ಲಿ ಶಾಹೀನ್ ಅಫ್ರಿದಿ 6 ರನ್ ನೀಡಿ, 2ನೇ ಓವರ್‌ನಲ್ಲಿ ನಸೀಮ್ ಶಾ 3 ರನ್ ನೀಡಿದರು. ಮತ್ತೆ 3ನೇ ಓವರ್ ಓವರ್‌ ಮಾಡಿದ ಶಾಹೀನ್‌ ಅಫ್ರಿದಿ ಒಂದು ವೈಡ್ ಸೇರಿ 5 ರನ್‌ ನೀಡಿದರು. ಹಿಟ್‌ಮ್ಯಾನ್‌ ರೋಹಿತ್ ಶರ್ಮಾ 2 ಬೌಂಡರಿ ಬಾರಿಸಿದರು. 4 ಓವರ್‌‌ಗೆ ಟೀ ಇಂಡಿಯಾ 15 ರನ್‌ ಗಳಿಸಿತ್ತು. ಆದರೆ 5ನೇ ಓವರ್ ಶುರುವಾಗಿ 4.2 ಓವರ್ ಆಗಿದ್ದಾಗ ಮಳೆರಾಯನ ಅಬ್ಬರ ಶುರುವಾಗಿ ಪಂದ್ಯ ನಿಂತು ಹೋಗಿತ್ತು.

ಮತ್ತೆ ಮ್ಯಾಚ್ ಶುರುವಾದ ನಂತರ ವಿಕೆಟ್‌ಗಳು ಪಟ ಪಟನೆ ಬಿದ್ದು ಹೋಗಿವೆ. ಭಾರತದ ಸ್ಕೋರ್ 51 ಆಗಿದ್ದು, ಭಾರತ 3 ವಿಕೆಟ್ ಕಳೆದುಕೊಂಡಿದೆ. ಈಗ ನೋಡಿದರೆ ಮತ್ತೊಮ್ಮೆ ಮಳೆಯು ಶುರುವಾಗಿದ್ದು, ಮ್ಯಾಚ್ ನಿಂತಿದೆ. ಹೀಗಾಗಿ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಮಳೆ ನಿಲ್ಲಲಿ ಅಂತಾ ಪ್ರಾರ್ಥಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+