ಯುದ್ಧದಲ್ಲೂ ಹೀನಾಯ ಸೋಲು, ಕ್ರಿಕೆಟ್ ಅಖಾಡದಲ್ಲೂ ಪಾಕಿಸ್ತಾನದ ಹೀನಾಯ ಸ್ಥಿತಿ!India VS Pakistan
ಸೋಲು.. ಸೋಲು.. ಸೋಲು... ಹೀಗೆ ಪಾಪಿ ಪಾಕಿಸ್ತಾನದ ಪರಿಸ್ಥಿತಿ ಅತ್ಯಂತ ಹೀನಾಯ ಆಗಿದೆ. ಒಂದು ಕಡೆ ಭಾರತದ ಕೈಯಲ್ಲಿ ಪದೇ ಪದೇ ಸೋಲು ಕಾಣುತ್ತಿದ್ದರೂ ಏನೂ ಮಾಡಲಾಗದ ಸ್ಥಿತಿಗೆ ಸಿಲುಕಿ ಒದ್ದಾಡುತ್ತಿದೆ. ಹೀಗಿದ್ದಾಗ ಮತ್ತೊಂದು ಏಟು ಇವತ್ತು ಸಿಕ್ಕಿದೆ! ಈ ಏಟಿನ ಮೂಲಕ ಮತ್ತೆ ಪಾಕಿಸ್ತಾನ ತಂಡದ ಎದೆ ಹೊಡೆದು ಹೋಗಿದ್ದು, ಭಾರತದ ಎದುರು ತಾನು ಯಾವಾಗಲೂ ಕ್ರಿಕೆಟ್ ಶಿಶು ಅನ್ನೋದು ಮತ್ತೊಮ್ಮೆ ಇದೇ ಪಾಪಿ ಪಾಕಿಸ್ತಾನದ ಆಟಗಾರರಿಗೆ ಮನವರಿಕೆ ಕೂಡ ಆಗಿದೆ...
ಕ್ರಿಕೆಟ್ ಆಟ ಫುಟ್‌ಬಾಲ್ ಬಿಟ್ಟರೆ ಅತ್ಯಂತ ಹೆಚ್ಚು ಜನರು ಇಷ್ಟಪಡುವ ಕ್ರೀಡೆ ಆಗಿ ಗಮನ ಸೆಳೆದಿದೆ. ಅದರಲ್ಲೂ ಭಾರತ ಅಂದ್ರೆ ಕ್ರಿಕೆಟ್, ಕ್ರಿಕೆಟ್ ಅಂದ್ರೆ ಭಾರತ... ಆದರೆ ಪಾಕಿಸ್ತಾನ & ಭಾರತದ ನಡುವೆ ಕ್ರಿಕೆಟ್ ಮ್ಯಾಚ್ ಶುರುವಾದರೆ ಅದು ಯುದ್ಧ ಅಂದ್ರೆ ವಾರ್ ರೀತಿಯೇ ಭಾಸವಾಗುತ್ತದೆ. ಅದೇ ರೀತಿ ಈಗ ಮತ್ತೊಂದು ಮಹಾಯುದ್ಧ ನಡೆದಿದ್ದು, ಭಾರತ ಕ್ರಿಕೆಟ್ ತಂಡವು ಪಾಪಿ ಪಾಕಿಸ್ತಾನದ ಹೆಡೆಮುರಿ ಕಟ್ಟಿ ಬಿಸಾಡಿದೆ. ಪಾಕಿಸ್ತಾನ ತಂಡ ಮಾನ ಉಳಿಸಿಕೊಳ್ಳಲು ಆಡಿದ ಆಟದಲ್ಲೂ ಭಾರಿ ಹೀನಾಯವಾಗಿಯೇ ಸೋತು ಹೋಗಿದೆ!

ಭಾರತಕ್ಕೆ ಆರಂಭದಲ್ಲೇ ಗೆಲುವು ಸಿಕ್ಕಿತ್ತು!
ಹೌದು, ಭಾರತ ಕ್ರಿಕೆಟ್ ತಂಡಕ್ಕೆ ಆರಂಭದಲ್ಲೇ ಗೆಲುವು ಸಿಕ್ಕಿತ್ತು. ಟಾಸ್ ಗೆದ್ದು ಭಾರತ ತಂಡ ಭಾರಿ ಹುಮ್ಮಸ್ಸಿನಲ್ಲೇ ಆಟಕ್ಕೆ ಹೆಜ್ಜೆ ಹಾಕಿತ್ತು. ಹೀಗೆ ಭಾರತ ತಂಡದ ಆಟಗಾರರು ಎಂಟ್ರಿ ಕೊಟ್ಟ ವೇಳೆ, ಪಾಪಿ ಪಾಕಿಸ್ತಾನದ ಆಟಗಾರರ ಎದೆಯಲ್ಲಿ ಭಯ ಶುರುವಾಗಿತ್ತು. ಯಾಕಂದ್ರೆ ಕೆಲ ದಿನಗಳ ಹಿಂದಷ್ಟೇ ಹೀನಾಯವಾಗಿ ಸೋತು ಹೋಗಿದ್ದ ಪಾಕ್ ಆಟಗಾರರಿಗೆ ಈ ಬಾರಿ ಮಾನ ಉಳಿಸಿಕೊಳ್ಳಲು ಕೊನೆಯ ಅವಕಾಶ ಸಿಕ್ಕಿತ್ತು...
ಪಾಪಿ ಪಾಕಿಸ್ತಾನ ಪಡೆಗೆ ಮತ್ತೆ ಸೋಲು!
ಹೌದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ಭರ್ಜರಿ ಬೌಲಿಂಗ್ ಪ್ರದರ್ಶನ ಮಾಡುವ ನಿರೀಕ್ಷೆಯಲ್ಲಿ ಇತ್ತು. ಆದರೆ ಪಾಕಿಸ್ತಾನ ಆಟಗಾರರು ಕಳೆದ ಪಂದ್ಯದಲ್ಲಿ ಭಾರಿ ಹೀನಾಯವಾಗಿ ಸೋಲು ಕಂಡಿದ್ದ ಕಾರಣಕ್ಕೆ ಅಲರ್ಟ್ ಆಗಿ ಆಟವಾಡಿದರು. ಸೋತರೂ ಪರವಾಗಿಲ್ಲ ಮಾನ ಉಳಿಸಿಕೊಳ್ಳಬೇಕು ಎಂಬ ಒನ್‌ಲೈನ್ ಅಜೆಂಡಾ ಮೂಲಕ ಆಟ ಶುರು ಮಾಡಿದ್ದ ಪಾಕಿಸ್ತಾನ ತಂಡ ಹಂಗೋ ಹಿಂಗೋ ಒದ್ದಾಡಿ ಕೊನೆಗೆ 20 ಓವರ್ ಆಟವಾಡಿ 171 ರನ್ ಗಳಿಸಿತ್ತು. ಕೊನೆಗೆ ಈ ಸ್ಕೋರ್ ಬೆನ್ನುಹತ್ತಿದ್ದ ನಮ್ಮ ಭಾರತ ತಂಡ 18.5 ಓವರ್‌ಗಳಲ್ಲಿ ಚಚ್ಚಿ ಬಿಸಾಡಿದೆ. ಭಾರತ ತಂಡ 4 ವಿಕೆಟ್ ಕಳೆದುಕೊಂಡು 18.5 ಓವರ್‌ಗಳಲ್ಲಿ 174 ರನ್ ಬಾರಿಸಿತ್ತು.












Click it and Unblock the Notifications