ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

India squad for SA ODI series: ಶಿಖರ್ ಧವನ್ ಟೀಮ್ ಇಂಡಿಯಾ ನಾಯಕ; ಓಡಿಐ ತಂಡಕ್ಕೆ ಮುಕೇಶ್, ಪಾಟಿದಾರ್ ಆಯ್ಕೆ

|
Google Oneindia Kannada News

ನವದೆಹಲಿ, ಅ. 2: ಸೌತ್ ಆಫ್ರಿಕಾ ವಿರುದ್ಧ ಮುಂಬರಲಿರುವ ಏಕದಿನ ಕ್ರಿಕೆಟ್ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಮೂರು ಪಂದ್ಯಗಳ ಈ ಸರಣಿಯಲ್ಲಿ ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ. ಶ್ರೇಯಸ್ ಅಯ್ಯರ್ ವೈಸ್ ಕ್ಯಾಪ್ಟನ್ ಆಗಿದ್ದಾರೆ.

ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿ ಭಾನುವಾರ ತಂಡವನ್ನು ಪ್ರಕಟಿಸಿತು. ರಜತ್ ಪಾಟೀದಾರ್ ಮತ್ತು ಮುಕೇಶ್ ಕುಮಾರ್ ಅವರಿಗೆ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಬಾಗಿಲು ತೆರೆದಿದೆ. ದೇಶೀಯ ಮತ್ತು ಲಿಸ್ಟ್ ಎ ಕ್ರಿಕೆಟ್ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಫಲವಾಗಿ ಇವರಿಬ್ಬರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿದೆ.

ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಹಾಸನ ಹುಡುಗ ಮನು ಈಗ ಹೊಸ ಸ್ಪೋರ್ಟ್ಸ್ ಸ್ಟಾರ್ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಹಾಸನ ಹುಡುಗ ಮನು ಈಗ ಹೊಸ ಸ್ಪೋರ್ಟ್ಸ್ ಸ್ಟಾರ್

ಕರ್ನಾಟಕದ ಯಾವೊಬ್ಬ ಆಟಗಾರನೂ ಓಡಿಐ ತಂಡದಲ್ಲಿಲ್ಲ ಎಂಬುದು ಗಮನಾರ್ಹ. ಬಹಳ ದಿನಗಳ ಬಳಿಕ ಇಂಥ ಪರಿಸ್ಥಿತಿ ಬಂದಿದೆ. ಕೆಎಲ್ ರಾಹುಲ್ ಅವರಿಗೆ ವಿಶ್ರಾಂತಿ ಕೊಡಲಾಗಿದೆ. ಕೆಎಲ್ ರಾಹುಲ್ ಮಾತ್ರವಲ್ಲ, ಟಿ20 ವಿಶ್ವಕಪ್‌ನಲ್ಲಿ ಆಡಲಿರುವ ಬಹುತೇಕ ಆಟಗಾರರು ಓಡಿಐ ಸರಣಿಯಲ್ಲಿ ಆಡುತ್ತಿಲ್ಲ.

India ODI Squad for South Africa Series Announced, Shikhar Dhawan Made Captain

ರಜತ್, ಮುಕೇಶ್ ಉತ್ತಮ ಪ್ರದರ್ಶನ
ಮಧ್ಯಪ್ರದೇಶದ ರಜತ್ ಪಾಟೀದಾರ್ ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ಎ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಮೊದಲ ಮತ್ತು ಕೊನೆಯ ಪಂದ್ಯಗಳಲ್ಲಿ ಶತಕ ಭಾರಿಸಿದ್ದರು. ಅದಕ್ಕೆ ಮುನ್ನ ಅವರು ರಣಜಿ ಫೈನಲ್‌ನಲ್ಲಿ ಮಧ್ಯಪ್ರದೇಶದ ಪರವಾಗಿ 122 ರನ್ ಗಳಿಸಿದ್ದರು. ಅವರ ಈ ಭರ್ಜರಿ ಶತಕದ ಸಹಾಯದಿಂದ ಮಧ್ಯಪ್ರೇಶ ಮೊದಲ ಬಾರಿಗೆ ರಣಜಿ ಮುಕುಟ ಧರಿಸಿತು.

ಇನ್ನು, ಭಾರತ ಎ ಮತ್ತು ನ್ಯೂಜಿಲೆಂಡ್ ಎ ಸರಣಿಯಲ್ಲಿ ಬೌಲರ್ ಮುಕೇಶ್ ಕುಮಾರ್ 9 ವಿಕೆಟ್ ಪಡೆದು ಗಮನ ಸೆಳೆದರು. ರಣಜಿ ಟ್ರೋಫಿಯಲ್ಲೂ ಅವರು ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದರು.

ಇದೇ ವೇಳೆ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಶುಬ್ಮನ್ ಗಿಲ್, ರಾಹುಲ್ ತ್ರಿಪಾಟಿ, ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್ ಮೊದಲಾದವರೂ ಕಂಬ್ಯಾಕ್ ಮಾಡಿದ್ದಾರೆ.

India ODI Squad for South Africa Series Announced, Shikhar Dhawan Made Captain

ಸೌತ್ ಆಫ್ರಿಕಾ ವಿರುದ್ಧ ಟಿ20 ಸರಣಿ ಮುಗಿದ ಬಳಿಕ ಅಕ್ಟೋಬರ್ 6, 9 ಮತ್ತು 11 ರಂದು ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ ಅದಾದ ಬಳಿಕ ಭಾರತ ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಗೆ ಪ್ರಯಾಣಿಸಲಿದೆ.

ಓಡಿಐ ಟೀಮ್ ಇಂಡಿಯಾ:
ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಡ್, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್ (ಉಪನಾಯಕ), ರಜತ್ ಪಾಟೀದಾರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮುಕೇಶ್ ಕುಮಾರ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್.

(ಒನ್ಇಂಡಿಯಾ ಸುದ್ದಿ)

English summary
Gabbar Singh aka Shikhar Dhawan will be leading Indian cricket team in ODI series against South Africa in 3 matches starting from October 6th. Shreyas Iyer is made vice-captain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X