IND vs ENG: ಆಂಗ್ಲರ ಹಳೆ ಲೆಕ್ಕ ಚುಕ್ತಾ! ಸೆಮೀಸ್‌ನಲ್ಲಿ "ಅಕ್ಷರ"ಶಃ ಅಬ್ಬರಿಸಿದ ಟೀಮ್ ಇಂಡಿಯಾ ಫೈನಲ್‌ಗೆ

ಆಂಗ್ಲರ ಹಳೆಯ ಲೆಕ್ಕವೊಂದು ಚುಕ್ತಾ ಆಗಿದೆ. ಟಿ20 ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು 68 ರನ್‌ಗಳಿಂದ ಸದೆ ಬಡಿದ ಟೀಂ ಇಂಡಿಯಾ ಫೈನಲ್‌ಗೆ ಪ್ರವೇಶಿಸಿದೆ. 10 ವರ್ಷಗಳ ಬಳಿಕ ಭಾರತ ಟಿ20 ವಿಶ್ವಕಪ್ ಫೈನಲ್‌ಗೆ ಪ್ರವೇಶ ಪಡೆದಿದೆ.

ಮಳೆಯಿಂದ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು.

India Defeats England by 65 Runs to Sail to the Final in T20 World Cup

ವಿರಾಟ್ ಕೊಹ್ಲಿ ಮತ್ತೆ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾದರು. ಕೇವಲ 9 ರನ್ ಗಳಿಸಿ ಅವರು ಔಟ್ ಆದರು. ರಿಷಬ್ ಪಂತ್ ಕೂಡ 4 ರನ್ ಗಳಿಸಿ ಔಟಾದರು. ಆದರೆ ನಾಯಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಇಂಗ್ಲೆಂಡ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದರು.

ರೋಹಿತ್ ಶರ್ಮಾ 39 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 57 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 47 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲಿ 23 ರನ್ ಗಳಿಸಿದರು. ರವೀಂದ್ರ ಜಡೇಜಾ 9 ಎಸೆತಗಳಲ್ಲಿ ಅಜೇಯ 17 ರನ್ ಗಳಿಸಿದರು.

ಕ್ರಿಸ್ ಜೋರ್ಡಾನ್ 3 ಓವರ್ ಗಳಲ್ಲಿ 37 ರನ್ ನೀಡಿ 3 ವಿಕೆಟ್ ಪಡೆದರು. ಆದಿಲ್ ರಶೀದ್, ಸ್ಯಾಮ್ ಕರನ್, ಜೋಫ್ರಾ ಆರ್ಚರ್, ರೀಸ್ ಟೋಪ್ಲೆ ತಲಾ ಒಂದು ವಿಕೆಟ್ ಪಡೆದರು.

ಆಂಗ್ಲರನ್ನು ಕಾಡಿದ ಬೌಲರ್ ಗಳು

172 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಭಾರತದ ಬೌಲಿಂಗ್ ಪಡೆ ಮಾರಕವಾಯಿತು. ಅಕ್ಷರ್ ಪಟೇಲ್ ತಮ್ಮ ಮೊದಲನೇ ಓವರ್ ನ ಮೊದಲ ಎಸೆತದಲ್ಲೇ ಜೋಸ್ ಬಟ್ಲರ್ ಅವರ ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ಸೋಲಿಗೆ ಮುನ್ನುಡಿ ಬರೆದರು.

ಬಳಿಕ ಬುಮ್ರಾ 5 ರನ್ ಗಳಿಸಿದ್ದ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಮತ್ತೆ ದಾಳಿಗೆ ಇಳಿದ ಅಕ್ಷರ್ ಪಟೇಲ್ ಜಾನಿ ಬೈರ್ ಸ್ಟೋ ಮತ್ತು ಮೊಯೀನ್ ಅಲಿ ಅವರ ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್‌ ಆಘಾತದ ಮೇಲೆ ಆಘಾತ ಕೊಟ್ಟರು.

ಮತ್ತೊಂದು ಕಡೆಯಿಂದ ದಾಳಿ ಆರಂಭಿಸಿದ ಕುಲದೀಪ್ ಯಾದವ್ ಕೂಡ ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್ ವಿಕೆಟ್ ಪಡೆದು, ಇಂಗ್ಲೆಂಡ್ ಸೋಲನ್ನು ಖಚಿತಪಡಿಸಿದರು.

ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಅಕ್ಷರ್ ಪಟೇಲ್ 4 ಓವರ್ ಗಳಲ್ಲಿ 23 ರನ್ ನೀಡಿ ಪ್ರಮುಖ ಮೂರು ವಿಕೆಟ್ ಪಡೆದರು. ಕುಲದೀಪ್ ಯಾದವ್ 4 ಓವರ್ ಗಳಲ್ಲಿ 19 ರನ್ ನೀಡಿ 3 ವಿಕೆಟ್ ಪಡೆದರು. ಜಸ್ಪ್ರೀತ್ ಬುಮ್ರಾ 2.4 ಓವರ್ ಗಳಲ್ಲಿ 12 ರನ್ ನೀಡಿ 2 ವಿಕೆಟ್ ಪಡೆದುಕೊಂಡರು.

ಜೂನ್ 29ರಂದು ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ. ಭಾರತ ಎರಡನೇ ಬಾರಿ ಕಪ್ ಗೆಲ್ಲುವ ಉತ್ಸಾಹದಲ್ಲಿದ್ದು, ದಕ್ಷಿಣ ಆಫ್ರಿಕಾ ಚೊಚ್ಚಲ ವಿಶ್ವಕಪ್‌ ಗೆಲ್ಲಲು ಸಜ್ಜಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+