India vs Australia: ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಮಟ್ಟ ಹಾಕಿ ಫೈನಲ್ ತಲುಪಿದ ಭಾರತ
ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2024ರ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧ ಭಾರತ ಚಾಂಪಿಯನ್ಸ್ 86 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ದು, ಫೈನಲ್ ಪ್ರವೇಶಿಸಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಚಾಂಪಿಯನ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಚಾಂಪಿಯನ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 254 ರನ್ ಕಲೆಹಾಕಿತು.

ರಾಬಿನ್ ಉತ್ತಪ್ಪ 35 ಎಸೆತಗಳಲ್ಲಿ 6 ಬೌಂಡರಿ 4 ಸಿಕ್ಸರ್ ಸಹಿತ 65 ರನ್ ಗಳಿಸುವ ಮೂಲಕ ಭಾರತಕ್ಕೆ ಸ್ಫೋಟಕ ಆರಂಭ ನೀಡಿದರು. ಅಂಬಾಟಿ ರಾಯುಡು 14 ರನ್ ಗಳಿಸಿದರೆ, ಸುರೇಶ್ ರೈನಾ 5 ರನ್ ಗಳಿಸಿ ಔಟಾದರು.
ನಾಯಕ ಯುವರಾಜ್ ಸಿಂಗ್ 28 ಎಸೆತಗಳಲ್ಲಿ 4 ಬೌಂಡರಿ 5 ಸಿಕ್ಸರ್ ಸಹಿತ 59 ರನ್ ಸಿಡಿಸಿದರು. ಯೂಸುಫ್ ಪಠಾಣ್ 23 ಎಸೆತಗಳಲ್ಲಿ 4 ಬೌಂಡರಿ 4 ಸಿಕ್ಸರ್ ಸಹಿತ 51 ರನ್ ಗಳಿಸಿದರೆ, ಇರ್ಫಾನ್ ಪಠಾಣ್ 19 ಎಸೆತಗಳಲ್ಲಿ 3 ಬೌಂಡರಿ 5 ಸಿಕ್ಸರ್ ಸಹಿತ 50 ರನ್ ಗಳಿಸಿದರು.
ರಾಬಿನ್ ಉತ್ತಪ್ಪ, ಯುವರಾಜ್ ಸಿಂಗ್, ಯೂಸುಫ್ ಪಠಾಣ್ ಮತ್ತು ಇರ್ಫಾನ್ ಪಠಾಣ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಭಾರತ ಚಾಂಪಿಯನ್ಸ್ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡಕ್ಕೆ ಬೃಹತ್ ಗುರಿ ನೀಡಿತು.
ಭಾರತದ ಮಾರಕ ಬೌಲಿಂಗ್
ಭಾರತ ನೀಡಿದ ಬೃಹತ್ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಶಾನ್ ಮಾರ್ಷ್ 2 ರನ್ ಗಳಿಸಿ ಔಟಾದರು. ಆರನ್ ಫಿಂಚ್ 16 ರನ್, ಬೆನ್ ಡಂಕ್ 10 ರನ್, ಕಾಲಮ್ ಫರ್ಗ್ಯುಸನ್ 23 ರನ್, ಡೇನಿಯಲ್ ಕ್ರಿಸ್ಟಿಯನ್ 18 ರನ್, ಬೆನ್ ಕಟಿಂಗ್ 11 ರನ್ ಗಳಿಸಿ ಔಟಾದರು.
ನಥನ್ ಕಲ್ಟರ್ ನೈಲ್ 13 ಎಸೆತಗಳಲ್ಲಿ 30 ರನ್ ಗಳಿಸಿದರೆ, ಟಿಮ್ ಪೈನೆ ಅಜೇಯ 40 ರನ್ ಗಳಿಸಿದರೆ, ಪೀಟರ್ ಸಿಡಲ್ 5 ರನ್ ಗಳಿಸಿದರು. ಧವಳ್ ಕುಲಕರ್ಣಿ ಮತ್ತು ಪವನ್ ನೇಗಿ ತಲಾ 2 ವಿಕೆಟ್ ಪಡೆದರೆ, ರಾಹುಲ್ ಶುಕ್ಲಾ, ಹರ್ಭಜನ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ತಲಾ ಒಂದು ವಿಕೆಟ್ ಪಡೆದರು.












Click it and Unblock the Notifications