IND vs ZIM: ಭಾರತ ಎರಡು ಬಾರಿ ವಿಶ್ವ ಚಾಂಪಿಯನ್ ಆದರೂ, ಒಂದೇ ಸ್ಟಾರ್ ಹೊಂದಿರುವ ಜೆರ್ಸಿ ತೊಟ್ಟಿದ್ದು ಏಕೆ?
ಭಾರತ ಯುವ ತಂಡ ಜಿಂಬಾಬ್ವೆ ವಿರುದ್ಧ ಐದು ಪಂದ್ಯಗಳ ಟಿ-20 ಸರಣಿಗೆ ಜಿಂಬಾಬ್ವೆ ಪ್ರವಾಸವನ್ನು ಮಾಡಿದೆ. ಈ ವೇಳೆ ಮೊದಲ ಪಂದ್ಯದಲ್ಲಿ ಯುವ ಪಡೆ, ಜಿಂಬಾಬ್ವೆ ವಿರುದ್ಧ ಹೀನಾಯ ಸೋಲು ಕಂಡಿದೆ. ಆದ್ರೆ ಈ ವೇಳೆ ಟೀಮ್ ಇಂಡಿಯಾ ತೊಟ್ಟಿದ್ದ ಜೆರ್ಸಿ ವಿವಾದಕ್ಕೆ ಕಾರಣವಾಗಿದೆ.
ಶನಿವಾರ ಹರಾರೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ತಾರೆಯರು ಫೀಲ್ಡಿಗಿಳಿದಿದ್ದರು.ಆದರೆ ಇಲ್ಲೊಂದು ಸಂಗತಿ ಅಭಿಮಾನಿಗಳ ಗಮನ ಸೆಳೆಯಿತು. ಟೀಮ್ ಇಂಡಿಯಾ ಆಟಗಾರರು ತೊಡುವ ಜೆರ್ಸಿಯಲ್ಲಿ ಬಿಸಿಸಿಐ ಲಾಂಚನದ ಮೇಲೆ ಒಂದೇ ಸ್ಟಾರ್‌ನ್ನು ಕಂಡಿತು. ತಂಡದ ಜೆರ್ಸಿಯ ಮೇಲೆ ಈ ಸ್ಟಾರ್ ಈಗ ಚರ್ಚೆಗೆ ಕಾರಣವಾಗಿದೆ.

ಸ್ಟಾರ್ ಹಾಕುವುದು ಏಕೆ?
ಬಿಸಿಸಿಐ ಲಾಂಚ್‌ನದ ಮೇಲೆ ಸ್ಟಾರ್‌ಗಳನ್ನು ಹಾಕಲಾಗುತ್ತದೆ. ಇದರ ಅರ್ಥ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಸಂಖ್ಯೆಯನ್ನು ಬಿಂಬಿಸುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಹೀಗಾಗಿ ಟಿ20 ಪಂದ್ಯಗಳನ್ನು ಆಡುವಾಗ ಒಂದು ಸ್ಟಾರ್ ಹೊಂದಿದ್ದ ಜೆರ್ಸಿಯನ್ನು ಹಾಕಿಕೊಂಡು ಆಡುತ್ತಿತ್ತು. ಆದರೆ ಈಗ ಟೀಮ್ ಇಂಡಿಯಾ 2024ರ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಸಹ ಅಲಂಕರಿಸಿದೆ. ಹೀಗಾಗಿ ಬಿಸಿಸಿಐ ಲಾಂಚ್ ಮೇಲೆ ಎರಡು ಸ್ಟಾರ್ ಇರಬೇಕಾಗುತ್ತದೆ.
ಆದರೆ ಜಿಂಬಾಬ್ವೆ ವಿರುದ್ಧದ ಪಂದ್ಯದ ವೇಳೆ ಟೀಮ್ ಇಂಡಿಯಾ ಎರಡು ಟಿ20 ವಿಶ್ವಕಪ್ ಗೆದ್ದರು ಟೀಂ ಇಂಡಿಯಾ ಒಂದೇ ಸ್ಟಾರ್ ಇರುವ ಜರ್ಸಿ ಧರಿಸಿ ಶುಭ್ಮನ್ ಗಿಲ್ ನಾಯಕತ್ವದಲ್ಲಿ ಬಂದಿದ್ದು ಏಕೆ ಎಂದು ಈಗ ಚರ್ಚೆಗೆ ಕಾರಣವಾಗಿದೆ.
ಜಿಂಬಾಬ್ವೆ ವಿರುದ್ಧ ಒಂದು ಸ್ಟಾರ್ ಏಕೆ?
ಒಂದು ಸ್ಟಾರ್ ಇರುವ ಜೆರ್ಸಿ ಹಾಕಿಕೊಂಡು ಕಾಣಿಸಿಕೊಂಡಿದ್ದು ಏಕೆ ಎಂಬ ಪ್ರಶ್ನೆಗಳು ಎದ್ದಿವೆ. ಟಿ20 ವಿಶ್ವಕಪ್ ಫೈನಲ್‌ಗೂ ಮುನ್ನವೇ ಭಾರತದ ಆಟಗಾರರು ಜಿಂಬಾಬ್ವೆಗೆ ತೆರಳಿದ್ದರು. ಅಂದರೆ, ಟೀಂ ಇಂಡಿಯಾ ಜಿಂಬಾಬ್ವೆಗೆ ತೆರಳಿದಾಗ ಭಾರತ ವಿಶ್ವಕಪ್ ಗೆದ್ದಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ಜರ್ಸಿಯನ್ನು ಮೊದಲೇ ವಿನ್ಯಾಸಗೊಳಿಸಲಾಗಿದೆ.
ಆಟಗಾರರು ಬಾರ್ಬಡೋಸ್‌ನಿಂದ ಭಾರತಕ್ಕೆ ಮರಳಿದಾಗ ಸಂಜು ಸ್ಯಾಮ್ಸನ್ ಅವರು ಎರಡು ಸ್ಟಾರ್ ಇರುವ ಜೆರ್ಸಿಯನ್ನು ಅನಾವರಣಗೊಳಿಸಿದರು. ಮುಂದಿನ ಸರಣಿಯಿಂದ ಜೆರ್ಸಿಯಲ್ಲಿ ಎರಡು ಸ್ಟಾರ್‌ಗಳು ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಂದರೆ ಭಾರತ ಎರಡು ಸ್ಟಾರ್‌ಗಳಿರುವ ಜೆರ್ಸಿಯೊಂದಿಗೆ ಶ್ರೀಲಂಕಾ ವಿರುದ್ಧ ಫೀಲ್ಡಿಂಗ್ ಮಾಡಬಹುದು.
ಮೊದಲ ಪಂದ್ಯದಲ್ಲಿ ಸೋಲು
ಮೊದಲ ಟಿ-20 ಪಂದ್ಯದಲ್ಲಿ ಬೌಲಿಂಗ್ ಮಾಡಿದ ಟೀಂ ಇಂಡಿಯಾ, ಜಿಂಬಾಬ್ವೆಗೆ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ನೀಡಿದರು. ಈ ಪಂದ್ಯದಲ್ಲಿ ಭಾರತದ ಪರ ರಿಯಾನ್ ಪರಾಗ್, ಅಭಿಷೇಕ್ ಶರ್ಮಾ ಮತ್ತು ಧ್ರುವ್ ಜುರೆಲ್ ಪದಾರ್ಪಣೆ ಮಾಡಿದ್ದಾರೆ. ಮೊದಲು ಬೌಲಿಂಗ್ ಮಾಡಿದ ಟೀಂ ಇಂಡಿಯಾ ಜಿಂಬಾಬ್ವೆಯನ್ನು ಕೇವಲ 115 ರನ್‌ಗಳಿಗೆ ಸೀಮಿತಗೊಳಿಸಿತು. ರವಿ ಬಿಷ್ಣೋಯ್ ಅದ್ಬುತ ಬೌಲಿಂಗ್ ಮಾಡಿ 2 ಮೇಡನ್ ಓವರು ನೀಡಿ 4 ಓವರ್ ಗಳಲ್ಲಿ 4 ವಿಕೆಟ್ ಪಡೆದರು.
ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಟೀಮ್ ಇಂಡಿಯಾ 116 ರನ್ ಗಳಿಸಲು ವಿಫಲವಾಯಿತು. ತೆಂಡೈ ಚಟಾರ ಹಾಗೂ ಸಿಕಂದರ್ ರಜಾ ತಲಾ ಮೂರು ವಿಕೆಟ್ ಪಡೆದು ಮಿಂಚಿದರು. ಟೀಮ್ ಇಂಡಿಯಾದ ಪರ ಶುಭಮನ್ ಗಿಲ್ 31, ವಾಶಿಂಗ್ಟನ್ ಸುಂದರ್ 27, ಆವೀಶ್ ಖಾನ್ 16 ರನ್ ಸಿಡಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.












Click it and Unblock the Notifications