Ind Vs WI T20: ಮೂರನೇ ಟಿ20 ಪಂದ್ಯಕ್ಕೆ ಮುನ್ನ ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಮಾಜಿ ಕ್ರಿಕೆಟಿಗ
ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಗೆದ್ದ ಭಾರತ ತಂಡ ಟಿ20 ಸರಣಿಯಲ್ಲಿ ಮಂಕಾಗಿದೆ. 5 ಪಂದ್ಯಗಳ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭಾರತ ಸೋಲನುಭಿಸಿದ್ದು, ಸರಣಿಯ ಮೂರನೇ ಮತ್ತು ನಿರ್ಣಾಯಕ ಪಂದ್ಯ ಆಗಸ್ಟ್ 8ರಂದು ನಡೆಯಲಿದೆ.
ಸರಣಿಯ ಮೊದಲ ಪಂದ್ಯದಲ್ಲಿ 150 ರನ್‌ಗಳನ್ನು ಚೇಸ್ ಮಾಡುವಲ್ಲಿ ಭಾರತ ವಿಫಲವಾಗಿದೆ. ಒಂದು ಹಂತದಲ್ಲಿ ಸುಲಭವಾಗಿ ಗೆಲ್ಲುವ ಹಂತದಲ್ಲಿ ಭಾರತದ ತಂಡ ಜೇಸನ್ ಹೋಲ್ಡರ್ ಮತ್ತು ರೊಮಾರಿಯೊ ಶೆಫರ್ಡ್ ಅವರ ಕೆಲವು ಉತ್ತಮ ಬೌಲಿಂಗ್ ಪ್ರದರ್ಶನದ ಪರಿಣಾಮ 4 ರನ್‌ಗಳ ರೋಚಕ ಸೋಲನುಭವಿಸಿತು. ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ತಿಲಕ್ ವರ್ಮಾ ಮಿಂಚಿದರೆ ಉಳಿದ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದರು.

2ನೇ ಟ್ವೆಂಟಿ-20 ಐ ಪ್ರಕರಣವೂ ಭಿನ್ನವಾಗಿರಲಿಲ್ಲ. ಸೋಲಿನ ನಂತರ, ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಆಟದ ತಂತ್ರಗಳಿಗೆ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಎರಡನೇ ಪಂದ್ಯದಲ್ಲಿ ಕೂಡ ತಿಲಕ್ ವರ್ಮಾ ಅರ್ಧಶತಕ ಗಳಿಸುವ ಮೂಲಕ ಭರವಸೆ ಮೂಡಿಸಿದ್ದಾರೆ. ಉಳಿದ ಬ್ಯಾಟರ್ ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಪಂದ್ಯದ ಬಳಿಕ ಮಾತನಾಡಿದ ನಾಯಕ ಪಾಂದ್ಯ, ತಂಡವು ತಪ್ಪುಗಳಿಂದ ಕಲಿಯುತ್ತದೆ ಎಂದು ಯುವ ಆಟಗಾರರನ್ನು ಬೆಂಬಲಿಸಿದ್ದರು.
ಎಚ್ಚರಿಕೆ ಕೊಟ್ಟ ಆಕಾಶ್ ಚೋಪ್ರಾ
ಎರಡು ಟಿ20 ಪಂದ್ಯಗಳನ್ನು ಸೋತ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಭಾರತ ಈ ಸರಣಿಯನ್ನು ಗೆಲ್ಲಲೇಬೇಕು ಎಂದು ಹೇಳಿದ್ದಾರೆ. ಈ ತಂಡದಲ್ಲಿ ಭವಿಷ್ಯದ ಆಟಗಾರರಿದ್ದು, ಉಳಿದ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡ ಸರಣಿ ಗೆಲ್ಲಬೇಕು ಎಂದು ಹೇಳಿದ್ದಾರೆ.
"ಇದು ಯುವ ತಂಡವಾಗಿದೆ ಆದರೆ ಇದು ಶೀಘ್ರದಲ್ಲೇ ಟಿ20 ಕ್ರಿಕೆಟ್ ಆಡುವ ಆಟಗಾರರ ಪ್ರಮುಖ ಗುಂಪು, ಕೆಲವು ಬದಲಾವಣೆಗಳನ್ನು ಹೊರತುಪಡಿಸಿ ಇದೇ ತಂಡ ಆಡಿದೆ. ಆದ್ದರಿಂದ, ಈ ರೀತಿಯ ಸರಣಿಗಳನ್ನು ಗೆಲ್ಲುವುದು ಸಂಪೂರ್ಣವಾಗಿ ಮುಖ್ಯವಾಗಿದೆ" ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಹೊಸಬರಾದ ತಿಲಕ್ ಮೊದಲ ಪಂದ್ಯದಲ್ಲಿ 22 ಎಸೆತಗಳಲ್ಲಿ 39 ರನ್ ಮತ್ತು ಎರಡನೇ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಮೆಚ್ಚುಗೆ ಪಡೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ತಂಡ ಯೋಜನೆಗೆ ತಕ್ಕಂತೆ ಆಡಿದರೆ, ಭಾರತ ತಂಡದ ಯೋಜನೆಗಳು ವಿಫಲವಾಗಿವೆ ಎಂದು ಅವರು ಹೇಳಿದರು.
ಸರಣಿಯಲ್ಲಿ ಇನ್ನೂ ಮೂರು ಪಂದ್ಯಗಳು ಬಾಕಿಯಿದ್ದು, ಟೀಂ ಇಂಡಿಯಾ ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ನಿರೀಕ್ಷೆಯಿದೆ.












Click it and Unblock the Notifications