IND Vs NZ: ಚಾಂಪಿಯನ್ಸ್ ಟ್ರೋಫಿ 2025 ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ? ಯಾರಿಗೆ ಹೆಚ್ಚು ಅನುಕೂಲ?
IND Vs NZ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಫೈನಲ್ ಪಂದ್ಯ ಇಂದು (ಮಾರ್ಚ್ 09) ಇನ್ನೂ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಈ ರಣರೋಚಕ ಪಂದ್ಯ ವೀಕ್ಷಣ ಮಾಡಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಹಾಗಾದ್ರೆ ಇಂದಿನ ಪಂದ್ಯಕ್ಕೆ ಮಳೆಯಡ್ಡಿಯಾಗಲಿದ್ಯಾ? ಹಾಗೂ ಈ ಪಿಚ್ ಯಾರಿಗೆ ಹೆಚ್ಚು ಅನುಕೂಲ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಭಾರತ ಮತ್ತು ನ್ಯೂಜಿಲೆಂಟ್ ನಡುವೆ ಚಾಂಫಿಯನಸ್ ಟ್ರೋಫಿ 2025 ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಭಾರತ ತಂಡದ ಸ್ಪಿನ್ ಬೌಲರ್‌ಗಳು ಈ ಪಿಚ್‌ನಲ್ಲಿ ಲಯ ಕಂಡುಕೊಂಡಿದ್ದಾರೆ. ಅಲ್ಲದೆ ಎದುರಾಳಿಗಳ ವಿಕೆಟ್‌ಗಳನ್ನು ಅತೀ ಬೇಗ ತೆಗೆದು ಕಡಿಮೆ ರನ್‌ಗಳಿಗೂ ಕಟ್ಟಿಹಾಕಿ ತಂಡದ ಗೆಲುವುಗೆ ಪ್ರಮುಖ ಪಾತ್ರ ವಹಿಸಿರುವ ಉದಾಹರಣೆಗಳಿವೆ.

ಅದ್ದರಿಂದ ಈ ಪಿಚ್ ಸ್ಪನ್ನರ್‌ಗಳಿಗ ಹೇಳಿ ಮಾಡಿಸಿದ್ದಾಗಿದೆ. ಅದರಲ್ಲೂ ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ ಇದೀಗ ಉತ್ತಮ ಲಯದಲ್ಲಿದ್ದು, ನ್ಯೂಜಿಲೆಂಡ್ ಬ್ಯಾಟರ್‌ಗಳಿಗೆ ಇವರದ್ದೆ ಭಯ ಕಾಡುತಿದೆಯಂತೆ. ಇನ್ನು ಕುಲ್‌ದೀಪ್ ಯಾದವ್ ಅವರು ಹೇಳಿಕೊಳ್ಳಿವಷ್ಟೇನು ಕೈಚಳಕ ತೋರಿಸಿಲ್ಲ. ಆದರೂ ಕಡಿಮೆ ರನ್‌ಗಳಿಗೆ ಕಟ್ಟಿಹಾಕುವ ಕೆಲಸವನ್ನಂತೂ ಮಾಡಿದ್ದಾರೆ.
ಮಳೆ ಅಡ್ಡಿಯಾದ್ರೆ ನಿರ್ಧಾರವೇನು?: ಒಂದು ವೇಳೆ ಈ ಹೈವೋಲ್ಟೇಜ್ ಪಂದ್ಯಕ್ಕೆ ಮಳೆಯಡ್ಡಿಯಾದರೆ, ಓವರ್‌ಗಳನ್ನು ಕಡಿತಗೊಳಿಸಲಾಗುತ್ತದೆ. ಕನಿಷ್ಠ 25 ಓವರ್‌ಗಳವರೆಗೆ ಕಡಿತ ಮಾಡುವ ಅವಕಾಶ ಇದೆ. ಆಗ ಮೀಸಲು ದಿನದ ಆಟ ಪುನರಾರಂಭ ಆಗಲಿದೆ. ಇದು ಆಗದಿದ್ದರೆ, ಸೂಪರ್ ಓವರ್ ಮಾಡಿಸುವ ಸಾಧ್ಯತೆಯಿರುತ್ತದೆ.
ಮೊದಲ ಸೂಪರ್ ಓವರ್ ಟೈ ಆದರೆ, ಫಲಿತಾಂಶಕ್ಕಾಗಿ ಮತ್ತೊಂದು ಸೂಪರ್ ಓವರ್ ಆಡಿಸಲಾಗುತ್ತದೆ. ಇದು ಕೂಡ ಸಾಧ್ಯ ಆಗದಿದ್ದರೆ, ಉಭಯ ತಂಡಗಳನ್ನು ಜಂಟಿ ವಿಜೇತರೆಂದು ಘೋಷಣೆ ಮಾಡಲಾಗುತ್ತದೆ. ಯಾಕಂದ್ರೆ 2002ರಲ್ಲಿಯೂ ಕೂಡ ಭಾರತ ಮತ್ತು ಶ್ರೀಲಂಕಾ ತಂಡಗಳನ್ನು ಇದೇ ರೀತಿ ಜಂಟಿ ವಿಜೇತರಾಗಿದ್ದವು. ಆದ್ದಾರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳುಬ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇದುವರೆಗೂ ನಡೆದಿರುವ ಪಂದ್ಯಗಳ ರನ್‌ಗಳಿಗೆ ಹೋಲಿಕೆ ಮಾಡಿದರೆ, ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಹೆಚ್ಚು ರನ್ ಗಳಿಸುವುದು ಸುಲಭದ ಮಾತಲ್ಲ.ಗುಂಪು ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಆಡಿದ್ದ ಪಿಚ್ ಅನ್ನೇ ಇಂದು ನಡೆಯುವ ಫೈನಲ್ ಪಂದ್ಯಕ್ಕೂ ಬಳಕೆ ಮಾಡಲಾಗುತ್ತಿದೆ. ಇದು ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗಲಿದೆ. ಈ ಪಿಚ್‌ನಲ್ಲಿ 270ರಿಂದ 280 ಗಳಿಸುವ ರನ್‌ಗಳೇ ಅತೀ ಹೆಚ್ಚು. ಈ ರನ್‌ಗಳ ಗಡಿ ದಾಟಿಸುವ ಪಂದ್ಯಕ್ಕೆ ಗೆಲುವಿನ ಸಾಧ್ಯತೆ ಹೆಚ್ಚಿರುತ್ತದೆ.
ತಂಡಗಳ ವಿವರ
ಭಾರತದ ತಂಡ: ರೋಹಿತ್ ಶರ್ಮ(ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣ.
ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್(ನಾಯಕ), ಮೈಕೆಲ್ ಬ್ರಾಸ್‌ವೇಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ, ಲೂಕಿ ಫಗ್ರ್ಯೂಸನ್, ಮ್ಯಾಟ್ ಹೆನ್ರಿ, ಟಾಮ್ ಲೇಥಮ್, ಡೇರಿಲ್ ಮಿಚೆಲ್, ವಿಲ್ ಒ ರೂರ್ಕ್, ಗ್ಲೆನ್ ಫಿಲಿಫ್ಸ್, ರಚಿನ್ ರವೀಂದ್ರ, ನಥಾನ್ ಸ್ಮಿತ್, ಕೇನ್ ವಿಲಿಯಮ್ಸನ್, ವಿಲ್ ಯಂಗ್, ಜಾಕೋಬ್ ಡಫಿ.












Click it and Unblock the Notifications