Ind vs Aus T20: ಭಾರತ ತಂಡಕ್ಕೆ ಪ್ರಮುಖ ಆಟಗಾರ ಸೇರ್ಪಡೆ: ಪ್ಲೇಯಿಂಗ್ 11 ನಲ್ಲಿ ಬದಲಾವಣೆ

ಡಿಸೆಂಬರ್ 1ರಂದು ರಾಯ್ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಆಸ್ಟ್ರೇಲಿಯಾ ನಡುವಿನ 4ನೇ ಟಿ20 ಪಂದ್ಯ ನಡೆಯಲಿದೆ. 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಭಾರತ ಇನ್ನೊಂದು ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವ ಉತ್ಸಾಹದಲ್ಲಿದೆ.

ಮೊದಲ ಮೂರು ಪಂದ್ಯಗಳಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದ ಶ್ರೇಯಸ್ ಅಯ್ಯರ್ ನಾಲ್ಕನೇ ಪಂದ್ಯಕ್ಕೆ ಮುನ್ನ ತಂಡವನ್ನು ಸೇರಿಕೊಂಡಿದ್ದಾರೆ. ಮುಂದಿನ ಎರಡು ಪಂದ್ಯಗಳಿಗೆ ಅವರು ತಂಡದ ಉಪನಾಯಕನಾಗಲಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶ್ರೇಯಸ್ ತಂಡಕ್ಕೆ ಬಂದಿರುವುದು ಬಲವನ್ನು ಹೆಚ್ಚಿಸಿದೆ.

 IND vs AUS T20: Shreyas Iyer Poised for Comeback in 4th T20I: Who Will Make Way?

ಶ್ರೇಯಸ್ ಅಯ್ಯರ್ ಒಂದು ವರ್ಷದ ನಂತರ ಟಿ20 ಕ್ರಿಕೆಟ್‌ಗೆ ಮರಳಿದ್ದಾರೆ. ಆದರೂ ನಾಲ್ಕನೇ ಪಂದ್ಯದಲ್ಲಿ ಯಾರ ಬದಲಿಗೆ ಅವರು ತಂಡದಲ್ಲಿ ಅವಕಾಶ ಪಡೆಯುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ.

ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಪಡೆ

ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಈಗಾಗಲೇ ಶತಕ ಬಾರಿಸುವ ಮೂಲಕ ಭರವಸೆ ಮೂಡಿಸಿದ್ದಾರೆ. ಜೈಸ್ವಾಲ್ 205.13 ಸ್ಟ್ರೈಕ್ ರೇಟ್‌ನೊಂದಿಗೆ ಆರಂಭಿಕರಾಗಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. 3ನೇ ಸ್ಥಾನದಲ್ಲಿ ಇಶಾನ್ ಕಿಶನ್ ವಿಕೆಟ್ ಕೀಪರ್ ಕೂಡ ಆಗಿರುವುದರಿಂದ ನಿರ್ಣಾಯಕರಾಗಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್ 4ನೇ ಸ್ಥಾನದಲ್ಲಿ ಫಿಕ್ಸ್ ಆಗಿದ್ದಾರೆ.

5ನೇ ಕ್ರಮಾಂಕದಲ್ಲಿ ಆಡುವ ತಿಲಕ್ ವರ್ಮಾ ಮಾತ್ರ ಸದ್ಯ ಶ್ರೇಯಸ್ ಅಯ್ಯರ್ ಅವರಿಗೆ ಜಾಗ ಬಿಟ್ಟುಕೊಡಬಲ್ಲ ಆಟಗಾರನಾಗಿದ್ದಾರೆ. ತಿಲಕ್ ವರ್ಮಾ ಇನ್ನೂ "ಆಲ್-ರೌಂಡ್" ಆಯ್ಕೆಯಾಗಿದ್ದಾರೆ, ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಹಂಗಾಮಿ ಮುಖ್ಯ ಕೋಚ್ ವಿವಿಎಸ್ ಲಕ್ಷ್ಮಣ್ ತಿಲಕ್ ವರ್ಮಾರನ್ನು ಬೌಲರ್ ಆಗಿ ಬಳಸಿಕೊಂಡಿಲ್ಲ.

ರಿಂಕು ಸಿಂಗ್ ಈಗಾಗಲೇ "ಫಿನಿಶರ್" ಆಗಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ, ಅವರು ತಂಡದಲ್ಲಿ ಅವಕಾಶ ಪಡೆದುಕೊಳ್ಳಲಿದ್ದಾರೆ.

ತಿಲಕ್ ವರ್ಮಾ ಅವರಿಗೆ ಕೆಲಸ ಮಾಡುವುದು ಅವರ ಆಲ್‌ರೌಂಡ್ ಸಾಮರ್ಥ್ಯ ಅಥವಾ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮಾತ್ರವಲ್ಲ ಆದರೆ ಅವರು ಎಡಗೈ ಆಟಗಾರ ಕೂಡ. ಆದಾಗ್ಯೂ, ಪ್ಲೇಯಿಂಗ್ XI ನಲ್ಲಿ ಈಗಾಗಲೇ ಮೂವರು ಎಡಗೈ ಆಟಗಾರರನ್ನು ಹೊಂದಿದ್ದು, ಬಲಗೈ ಬ್ಯಾಟರ್ ಇದು ಶ್ರೇಯಸ್ ಅಯ್ಯರ್‌ಗೆ ಟಿ20ಐ ತಂಡಕ್ಕೆ ಮರಳಲು ಅವಕಾಶವಾಗಿದೆ. ಗಾಯದ ಕಾರಣ ಐಪಿಎಲ್ ಕೂಡ ಆಡದ ಅಯ್ಯರ್ ಮತ್ತೆ ಮರಳಲಿದ್ದಾರೆ.

ಟಿ20 ವಿಶ್ವಕಪ್ 2024 ರ ಮೊದಲು ತಂಡವನ್ನು ಅಂತಿಮಗೊಳಿಸಲು ಭಾರತ ಕ್ರಿಕೆಟ್ ತಂಡವು ಕೇವಲ ಎಂಟು ಪಂದ್ಯಗಳನ್ನು ಮಾತ್ರ ಹೊಂದಿದೆ. ಐಪಿಎಲ್ 2024 ಖಂಡಿತವಾಗಿಯೂ ಆಯ್ಕೆಯ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆಯಾದರೂ, ಮುಂದಿನ ಎಂಟು ಪಂದ್ಯಗಳು ನಿರ್ಣಾಯಕವಾಗಿರುತ್ತವೆ. ಅವಕಾಶ ಖಚಿತಪಡಿಸಿಕೊಳ್ಳಲು ಶ್ರೇಯಸ್ ಅಯ್ಯರ್ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಒಮ್ಮೆ ಹಾರ್ದಿಕ್ ಪಾಂಡ್ಯ ಮರಳಿದರೆ ಅಯ್ಯರ್ ಸ್ಥಾನ ಪಡೆಯುವುದು ಕಷ್ಟವಾಗಲಿದೆ.

ಆಸ್ಟ್ರೇಲಿಯಾ ಟಿ20 ಸರಣಿಗೆ ಭಾರತ ತಂಡ

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಸಿದ್ ಕೃಷ್ಣ, ಅವೇಶ್ ಖಾನ್ , ದೀಪಕ್ ಚಹಾರ್, ಮುಖೇಶ್ ಕುಮಾರ್, ಶ್ರೇಯಸ್ ಅಯ್ಯರ್ (ಉಪ ನಾಯಕ).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+