Ind Vs Aus T20: ಈ ಮೂವರಿಗೆ ಇನ್ನು ಭಾರತ ತಂಡದಲ್ಲಿ ಜಾಗ ಇಲ್ವಾ?

ಏಕದಿನ ವಿಶ್ವಕಪ್ ಸೋಲಿನ ಬಳಿಕ ಭಾರತ ತಂಡ ಟಿ20 ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಲಿದೆ. ಭಾರತ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಯುವ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಈ ಯುವ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಬಿಸಿಸಿಐ ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್ ಮತ್ತು ಸಂಜು ಸ್ಯಾಮ್ಸನ್‌ರನ್ನು ಕೈಬಿಟ್ಟಿದೆ. ಇದು ಕ್ರಿಕೆಟ್ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ಸಂಜು ಸ್ಯಾಮ್ಸನ್‌ರನ್ನು ಕೈಬಿಟ್ಟಿದ್ದು ಅವರ ಅಂತರಾಷ್ಟ್ರೀಯ ಕ್ರಿಕೆಟ್ ಬದುಕು ಮುಗಿದಂತೆ ಎಂದೇ ಹೇಳಲಾಗುತ್ತಿದೆ.

Ind vs Aus: BCCI Selectors Omit KULCHA in T20 World Cup After Duo Snubbed for T20 Series

ವಿಶ್ವಕಪ್‌ನಲ್ಲಿ ಉತ್ತಮ ಬೌಲಿಂಗ್ ಮಾಡಿದ್ದ ಕುಲದೀಪ್ ಯಾದವ್ ಅವರನ್ನು ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ. ರವೀಂದ್ರ ಜಡೇಜಾ ಅವರೊಂದಿಗೆ ಮಾರಕ ಬೌಲಿಂಗ್ ಮಾಡಿದ್ದ ಕುಲದೀಪ್ ಯಾದವ್ ಎದುರಾಳಿ ತಂಡಗಳ ರನ್ ಗಳಿಕೆಗೆ ಕರಿವಾಣ ಹಾಕಿದ್ದರು.

ಈಗ ಟಿ20 ಸರಣಿಗೆ ಅವರನ್ನು ಕೈಬಿಡಲಾಗಿದ್ದು ಅಕ್ಷರ್ ಪಟೇಲ್ ಮತ್ತು ರವಿ ಬಿಷ್ಣೋಯ್ ಅವರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇವರಿಬ್ಬರು ಟಿ20 ತಂಡದಲ್ಲಿ ಹೆಚ್ಚಿನ ಅವಕಾಶವನ್ನು ಪಡೆಯಲಿದ್ದಾರೆ.

ಯುಜ್ವೇಂದ್ರ ಚಾಹಲ್ ಮುಗಿದ ಅಧ್ಯಾಯ?

ಇನ್ನು ಭಾರತ ತಂಡದ ಪ್ರಮುಖ ಬೌಲರ್ ಆಗಿದ್ದ ಯುಜ್ವೇಂದ್ರ ಚಾಹಲ್ ಕೂಡ ತಂಡದಲ್ಲಿ ಅವಕಾಶ ಪಡೆದಿಲ್ಲ. ಈ ಮೂಲಕ ಕುಲ್‌ಚಾ ಜೋಡಿ ಇನ್ನು ಭಾರತ ತಂಡದಲ್ಲಿ ಆಡುವುದು ಅನುಮಾನವಾಗಿದೆ.

ಕುಲದೀಪ್ ಮತ್ತು ಚಾಹಲ್ ಕೊನೆಯ ಬಾರಿಗೆ 2021 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಜೊತೆಯಾಗಿ ತಂಡದಲ್ಲಿ ಕಾಣಿಸಿಕೊಂಡರು. ಅಂದಿನಿಂದ, ಟೀ ಸಂಯೋಜನೆಯ ಕಾರಣದಿಂದ ಭಾರತ ತಂಡದಲ್ಲಿ ಇಬ್ಬರಲ್ಲಿ ಒಬ್ಬರು ಮಾತ್ರ ಆಡಿದರು. ಇವರಿಬ್ಬರು ಬ್ಯಾಟಿಂಗ್ ಮಾಡಲು ಸಾಧ್ಯವಾಗದ ಕಾರಣ, ಭಾರತವು ಆಡುವ ಹನ್ನೊಂದರನಲ್ಲಿ ಕುಲ್ದೀಪ್ ಅಥವಾ ಚಹಾಲ್ ಅವರನ್ನು ಮಾತ್ರ ಆಡುವಂತೆ ಮಾಡಲಾಗುತ್ತಿದೆ. ಈಗ ಇಬ್ಬರನ್ನೂ ಕೂಡ ತಂಡದಿಂದ ಕೈಬಿಡಲಾಗಿದೆ.

ಬಿಸಿಸಿಐ ಆಯ್ಕೆಗಾರರು ರವಿ ಬಿಷ್ಣೋಯ್, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮೂವರು ಸ್ಪಿನ್ನರ್‌ಗಳನ್ನಾಗಿ ಆಯ್ಕೆ ಮಾಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅಭಿಮಾನಿಗಳು ಪ್ರಸಿದ್ಧ 'ಕುಲಚಾ'ವನ್ನು ನೋಡುವುದಿಲ್ಲ ಎಂಬುದರ ಸಂಕೇತವೇ? ಟಿ20 ಸರಣಿಯಲ್ಲಿ ಕುಲದೀಪ್ ಮತ್ತು ಚಹಾಲ್‌ಗೆ ವಿಶ್ರಾಂತಿ ನೀಡಲಾಗಿದೆಯೇ? ಅಥವಾ ಟಿ20 ಕ್ರಿಕೆಟ್‌ನಿಂದ 'ಕುಲಚಾ' ಜೋಡಿಯನ್ನು ಸಂಪೂರ್ಣವಾಗಿ ಕೈಬಿಡಲಾಗಿದೆಯೇ? ಸದ್ಯಕ್ಕೆ, ನಿಜವಾದ ಉತ್ತರ ಆಯ್ಕೆದಾರರಿಗೆ ಮಾತ್ರ ತಿಳಿದಿದೆ. ಜೂನ್ 04, 2024 ರಿಂದ ಟಿ20 ವಿಶ್ವಕಪ್ ಪ್ರಾರಂಭವಾಗಲಿದ್ದು, ಆಯ್ಕೆದಾರರು ತಂಡಕ್ಕೆ ಪ್ರಮುಖ ಆಟಗಾರರನ್ನು ಗುರುತಿಸುವ ಜವಾಬ್ದಾರಿ ಹೊಂದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+