Ind vs Aus: 240 ರನ್‌ಗಳಿಗೆ ಆಲೌಟ್ ಆದ ಭಾರತ: ಬೌಲರ್‌ಗಳೇ ಕಾಪಾಡಬೇಕು!
ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ 240 ರನ್‌ಗಳಿಗೆ ಆಲೌಟ್ ಆಗಿದೆ. ವಿಶ್ವಕಪ್ ಗೆಲ್ಲಲು ಆಸ್ಟ್ರೇಲಿಯಾ 241 ರನ್ ಗಳಿಸಬೇಕಾಗಿದೆ. ಇದೇ ಮೊದಲ ಬಾರಿಗೆ ಭಾರತ ಈ ವಿಶ್ವಕಪ್‌ನಲ್ಲಿ ಆಲೌಟ್ ಆಗಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆಸ್ಟ್ರೇಲಿಯಾ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ನಡುವೆ ಕೂಡ ರೋಹಿತ್ ಶರ್ಮಾ ಸ್ಫೋಟಕ ಇನ್ನಿಂಗ್ಸ್ ಆಡಿದರು. ಶುಭಮನ್ ಗಿಲ್ ಕೇವಲ 4 ರನ್ ಗಳಿಸಿ ಔಟಾದರು, ರೋಹಿತ್ 31 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ಸಹಿತ 47 ರನ್ ಗಳಿಸಿದರು.

ನಂತರ ಬಂದ ಶ್ರೇಯಸ್ ಅಯ್ಯರ್ ಕೂಡ 4 ರನ್ ಗಳಿಸಿ ಔಟಾದರು. ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುವ ಮೂಲಕ ಭಾರತದ ಕುಸಿತವನ್ನು ತಡೆದರು. 67 ರನ್‌ಗಳ ಜೊತೆಯಾಡಿದಾಗ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರು.
63 ಎಸೆತಗಳಲ್ಲಿ 4 ಬೌಂಡರಿ ಸಹಿತ ಜವಾಬ್ದಾರಿಯುತ 54 ರನ್ ಗಳಿಸಿದ ಕೊಹ್ಲಿ ಔಟಾದರು. ನಂತರ ಬಂದ ರವೀಂದ್ರ ಜಡೇಜಾ 9 ರನ್ ಗಳಿಸಿ ಔಟಾದರೆ, ಕೆಎಲ್ ರಾಹುಲ್ 66 ರನ್ ಗಳಿಸಿದ್ದಾಗ ಔಟಾದರು. ಮೊಹಮ್ಮದ್ ಶಮಿ 6, ಬುಮ್ರಾ 1 ರನ್ ಗಳಿಸಿ ಔಟಾದರು. ಸೂರ್ಯಕುಮಾರ್ ಯಾದವ್ ಕೂಡ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕುಲದೀಪ್ ಯಾದವ್ 18 ರನ್ ಗಳಿಸಿದರೆ, ಮೊಹಮ್ಮದ್ ಸಿರಾಜ್ 9 ರನ್ ಗಳಿಸಿದರು.
ಬೌಲಿಂಗ್‌ಗೆ ನೆರವಾಗುತ್ತಿರುವ ಪಿಚ್
ಅಹಮದಾಬಾದ್‌ನಲ್ಲಿ ಪಿಚ್ ಬೌಲರ್ ಗಳಿಗೆ ನೆರವಾಗುತ್ತಿದ್ದು, ಬ್ಯಾಟರ್ ಗಳು ರನ್ ಗಳಿಸಲು ಕಷ್ಟಪಡುತ್ತಿದ್ದಾರೆ. ಬೌನ್ಸ್ ಕಡಿಮೆ ಇರುವ ಕಾರಣ ಬೌಂಡರಿ ಗಳಿಸುವುದು ಕಷ್ಟವಾಗುತ್ತದೆ. ಭಾರತದ ಬೌಲಿಂಗ್ ಉತ್ತಮವಾಗಿರುವ ಕಾರಣ ಈ ಮೊತ್ತವನ್ನು ರಕ್ಷಣೆ ಮಾಡುವ ಅವಕಾಶ ಕೂಡ ಇದೆ.
ಉಭಯ ತಂಡಗಳ ಆಡುವ ಬಳಗ
ಭಾರತ : ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ : ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್.












Click it and Unblock the Notifications