RCB vs CSK: ಮೇ 18 ರಂದು ಮಳೆ ಬಂದು ಪಂದ್ಯ ಐದು ಓವರ್‌ ನಡೆದರೆ; ಆರ್‌ಸಿಬಿಗೆ ಬಿಗ್‌ ಚಾಲೆಂಜ್‌!

ಆರ್‌ಸಿಬಿ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ನಡುವಣ ಪಂದ್ಯ ಇದೇ ಮೇ 18 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಲು ಆರ್‌ಸಿಬಿ ಯೋಜನೆ ರೂಪಿಸಿಕೊಂಡಿದೆ. ಅಲ್ಲದೆ ಪ್ಲೇ ಆಫ್‌ ಕನಸನ್ನು ಕಾಣುತ್ತಿದೆ.

ಈಗಾಗಲೇ ಐಪಿಎಲ್‌ 2024ರ ಪ್ಲೇ ಆಫ್‌ಗೆ ರಾಜಸ್ಥಾನ ರಾಯಲ್ಸ್ ಹಾಗೂ ಕೆಕೆಆರ್ ತಂಡಗಳು ಅರ್ಹತೆ ಪಡೆದಿವೆ. ಇನ್ನು ಎರಡು ಸ್ಥಾನಕ್ಕಾಗಿ ಎರಡು ತಂಡಗಳ ನಡುವೆ ಫೈಟ್‌ ನಡೆಯಲಿದೆ. ಎಸ್‌ಆರ್‌ಎಚ್‌ ತನ್ನ ಎರಡೂ ಪಂದ್ಯಗಳಲ್ಲೂ ಜಯ ಸಾಧಿಸಿದರೆ ಸುಲಭವಾಗಿ ಪ್ಲೇ ಆಫ್‌ ಪ್ರವೇಶಿಸುತ್ತದೆ. ಇಲ್ಲವಾದರೆ ನೆಟ್‌ ರನ್‌ ರೇಟ್‌ ಲೆಕ್ಕಾಚಾರ ಆರಂಭವಾಗುತ್ತದೆ.

If Rain Interfere on May 18 During RCB vs CSK Match Equation for a Five-Over Thriller Emerges

ಆರ್‌ಸಿಬಿ, ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಪೂರ್ಣ ಎರಡು ಅಂಕಗಳನ್ನು ಕಲೆ ಹಾಕುವ ಪ್ಲ್ಯಾನ್ ಮಾಡಿಕೊಂಡಿದೆ. ಈಗಾಗಲೇ ಆಡಿರುವ 13 ಪಂದ್ಯಗಳಲ್ಲಿ ಆರು ಜಯ ಸಾಧಿಸಿದ್ದು, 12 ಅಂಕಗಳನ್ನು ಕಲೆ ಹಾಕಿ ಆರನೇ ಸ್ಥಾನದಲ್ಲಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್‌ ಆಡಿದ 13 ಪಂದ್ಯಗಳಲ್ಲಿ 7 ಜಯ ಸಾಧಿಸಿದ್ದು, 14 ಅಂಕಗಳನ್ನು ಕಲೆ ಹಾಕಿ ನಾಲ್ಕನೇ ಸ್ಥಾನದಲ್ಲಿದೆ. ಶನಿವಾರ ನಡೆಯುವ ಪಂದ್ಯವನ್ನು ಗೆದ್ದು ಸಿಎಸ್‌ಕೆ ಸಹ ಮುಂದಿನ ಹಂತ ಪ್ರವೇಶಿಸುವ ಕನಸು ಕಾಣುತ್ತಿದೆ.

20 ಓವರ್‌ ಪಂದ್ಯ ನಡೆದರೆ ಏನು ಲೆಕ್ಕಾಚಾರ?

ಮೇ 18 ರಂದು ನಡೆಯುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರ್‌ಸಿಬಿ ಸೋಲಿಸುವ ಅನಿವಾರ್ಯತೆ ಇದೆ. ಈ ವೇಳೆ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿದ್ದೇ ಆದಲ್ಲಿ, ಚೆನ್ನೈ ನೀಡುವ ಗುರಿಯನ್ನು 18.1 ಓವರ್‌ಗಳಲ್ಲಿ ಮುಟ್ಟಬೇಕು. ಇನ್ನು ಒಂದು ವೇಳೆ ಡಿಫೆಂಡ್ ಮಾಡಿಕೊಳ್ಳುವ ಬೇಕಾದರೆ, ಕನಿಷ್ಠ 18 ರನ್‌ಗಳಿಂದ ಪಂದ್ಯವನ್ನು ಗೆಲ್ಲಬೇಕು. ಅಂದಾಗ ಮಾತ್ರ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವ ಕನಸು ನನಸಾಗುತ್ತದೆ.

If Rain Interfere on May 18 During RCB vs CSK Match Equation for a Five-Over Thriller Emerges

ಮಳೆ ಸಾಧ್ಯತೆ

ಮೇ 18 ರಂದು ಪಂದ್ಯ ನಡೆಯುವ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಒಂದು ವೇಳೆ ಮಳೆ ಬಂದು ನಿಂತರೆ, ಮೈದಾನದಲ್ಲಿ ಇರುತ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ನೀರನ್ನು ಹೊರ ಹಾಕಬಹುದು.

ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದರೆ

ಇನ್ನು ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದೇ ಆದ್ದಲ್ಲಿ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕವನ್ನು ನೀಡಲಾಗುತ್ತದೆ. ಆಗ ಚೆನ್ನೈ ಸೂಪರ್ ಕಿಂಗ್ಸ್‌ ನೇರವಾಗಿ ಪ್ಲೇ ಆಫ್ ಪ್ರವೇಶಿಸಬಹುದು. ಆರ್‌ಸಿಬಿ ಮುಂದಿನ ಹಂತ ತಲಪುವ ಆಸೆ ಮಣ್ಣು ಪಾಲಾಗುತ್ತದೆ.

If Rain Interfere on May 18 During RCB vs CSK Match Equation for a Five-Over Thriller Emerges

ಐದು ಓವರ್ ಪಂದ್ಯ ನಡೆದರೆ

ಮಳೆ ಪಂದ್ಯಕ್ಕೆ ಕಾಟ ನೀಡುತ್ತದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಅಭಿಮಾನಿಗಳು ತಲಾ ಐದು ಓವರ್‌ ಪಂದ್ಯದ ಲೆಕ್ಕಾಚಾರವನ್ನು ಹಾಕಿಕೊಂಡು ಇಟ್ಟಿದ್ದಾರೆ. ಈ ಸನ್ನಿವೇಶದಲ್ಲೂ ಆರ್‌ಸಿಬಿ ಗೆಲ್ಲುವುದು ಕಷ್ಟ ಎಂದೇ ತೋಚುತ್ತದೆ. ಏಕೆಂದರೆ ಈ ಸನ್ನಿವೇಶದಲ್ಲಿ ಆರ್‌ಸಿಬಿ ಮೊದಲು ಬ್ಯಾಟ್ ಮಾಡಿದರೆ, 100 ರನ್‌ಗಳ ಆಸುಪಾಸಿನಲ್ಲಿ ಹೊಡೆದು, 60 ರನ್‌ಗಳಿಂದ ಗೆಲುವು ಸಾಧಿಸಬೇಕು. ಅಲ್ಲದೆ ಚೆನ್ನೈ ನೀಡಿರುವ ಗುರಿಯನ್ನು ಬೆನ್ನಟ್ಟಿದ ಪಕ್ಷದಲ್ಲಿ ಬೆಂಗಳೂರು 2 ಓವರ್‌ಗಳ ಅಂತರದಲ್ಲಿ ಆ ಮೊತ್ತವನ್ನು ಮುಟ್ಟಬೇಕು.

ಲೆಕ್ಕಾಚಾರ ಸ್ಪಷ್ಟ. 20 ಓವರ್‌ಗಳ ಲೆಕ್ಕಾಚಾರವನ್ನು ಐದು ಓವರ್‌ಗಳಿಗೆ ಇಳಿಸಿದಾಗ ರನ್‌ಗಳ ಟಾರ್ಗೆಟ್‌ ಹಿಗ್ಗುತ್ತದೆ. ಓವರ್‌ಗಳ ಟಾರ್ಗೆಟ್‌ ಕಡಿಮೆ ಆಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+