ಕನ್ನಡಿಗರ ಮನಸ್ಸು ಗೆದ್ದ ಕಿಂಗ್ ಕೊಹ್ಲಿ ಕನ್ನಡದಲ್ಲಿ ಹೇಳಿದ್ದೇನು?
ಆರ್‌ಸಿಬಿ ಅಭಿಮಾನಿಗಳಿಗೆ ನಿನ್ನೆ ಹಬ್ಬವೋ ಹಬ್ಬ. ಒಂದು ಕಡೆ 'ಬ್ಯಾಂಗಲೋರ್' ಹೋಗಿ ನಮ್ಮ ಬೆಂಗಳೂರು ಆಗಿದೆ. ಇನ್ನೊಂದು ಕಡೆ ಆರ್‌ಸಿಬಿ ಮಹಿಳಾ ತಂಡ ಕಪ್ ಗೆದ್ದು ನಿನ್ನೆ ಬೆಂಗಳೂರಿಗೆ ಬಂದಿದೆ. ಈ ಸಂಭ್ರಮದ ನಡುವೆ ನಮ್ಮ ಕಿಂಗ್ ಕೊಹ್ಲಿ ಕೂಡ, ಅಭಿಮಾನಿ ದೇವರುಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಅದ್ರಲ್ಲೂ ಕನ್ನಡದಲ್ಲೇ ಮಾತನಾಡಿರುವ ವಿರಾಟ್, ಇದೀಗ ಕೋಟಿ ಕೋಟಿ ಕನ್ನಡಿಗರ ಹೃದಯಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ. ಕೊಹ್ಲಿ ಈಗ, ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ನೋಡಲು ಮುಂದೆ ಓದಿ.
ಇನ್ನೇನು ಎರಡು ದಿನ ಬಾಕಿ ಅಷ್ಟೇ, ಆರ್‌ಸಿಬಿ ಬೆಂಗಳೂರು ತಂಡ ಹಾಗೂ ಚೆನ್ನೈ ತಂಡ ಐಪಿಎಲ್ (IPL) 2024ರ ಅಖಾಡದ ಮೊಟ್ಟ ಮೊದಲ ಪಂದ್ಯದಲ್ಲಿ ಸೆಣೆಸಾಟ ನಡೆಸಲಿವೆ. ಹೀಗೆ ಆರ್‌ಸಿಬಿ ತಂಡದ ಅಭಿಮಾನಿಗಳು ಮೈಮರೆತು ಕುಣಿದು ಕುಪ್ಪಳಿಸುವಾಗಲೇ ಅದೊಂದು ಧ್ವನಿ ಕನ್ನಡಿಗರ ಶ್ರೀಮಂತಿಕೆ ಹೆಚ್ಚಿಸುವ ಹಿಂಟ್ ಕೊಟ್ಟಿದೆ. ಹಾಗೇ ಕನ್ನಡಿಗ ಅಲ್ಲದೇ ಇದ್ದರು ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿರುವ ಕೊಹ್ಲಿ ಅವರ ಕನ್ನಡ ಪ್ರೀತಿ ಕಂಡು ಅಭಿಮಾನಿಗಳು ಮತ್ತಷ್ಟು ಖುಷಿಯಾಗಿದ್ದಾರೆ. ಹಾಗಾದ್ರೆ ವಿರಾಟ್ ಕೊಹ್ಲಿ ಇದೀಗ ಕನ್ನಡ ಭಾಷೆ ಮಾತನಾಡಿ ಹೇಳಿದ್ದೇನು ಗೊತ್ತೆ? ಆ ವಿಡಿಯೋ ಇಲ್ಲಿದೆ, ಮುಂದೆ ಓದಿ.

ಬೆಂಗಳೂರು ಕ್ರೀಡಾಂಗಣ ಫುಲ್ ಶೈನಿಂಗ್!
ಹೌದು ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ನಳನಳಿಸುತ್ತಾ ಇತ್ತು. ಹಾಗಂತಾ ಇಲ್ಲಿ ನಿನ್ನೆ ಯಾವುದೇ ಮ್ಯಾಚ್ ನಡೆಯುತ್ತಾ ಇರಲಿಲ್ಲ. ಆದರೆ ಆರ್‌ಸಿಬಿ ತಂಡ ತನ್ನ ಐಪಿಎಲ್ ರಣಬೇಟೆ ಆರಂಭಿಸುವ ಮೊದಲು ತನ್ನ ಹೆಸರನ್ನ ಬೆಂಗಳೂರು ಅಂತಾ ಬದಲಾಯಿಸಿಕೊಳ್ಳಲು ವೇದಿಕೆ ಸಿದ್ಧವಾಗಿತ್ತು. ಇದರ ಜೊತೆಗೆ ಇನ್ನೂ ಹಲವು ಸಂಭ್ರಮಗಳು ಮೇಳೈಸಿದವು. ಇದೇ ಸಮಯದಲ್ಲಿ ವಿರಾಟ್ ಕೊಹ್ಲಿ ಅವರು ಭಾವುಕರಾದರು, ಸುಮಾರು 30 ಸಾವಿರಕ್ಕೂ ಹೆಚ್ಚು ಜನರ ಎದುರು ಕನ್ನಡದಲ್ಲೇ ಮಾತನಾಡಿ ಹೆಮ್ಮೆಯಿಂದ ಮಾತೊಂದನ್ನ ಕೊಟ್ಟರು ಕೊಹ್ಲಿ!
ಮೊದಲೇ ಹೇಳಿದಂತೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ಸುಮಾರು 30 ಸಾವಿರಕ್ಕೂ ಹೆಚ್ಚು ಅಭಿಮಾನಿಗಳ ಬಾಯಲ್ಲಿ ಕೇಳಿಬಂದ ಎರಡೇ ಎರಡು ಪದಗಳು ಅಂದ್ರೆ 'ಆರ್‌ಸಿಬಿ.. ಆರ್‌ಸಿಬಿ..' ಮತ್ತು 'ಕೊಹ್ಲಿ.. ಕೊಹ್ಲಿ..' ಶಬ್ದ ಮಾತ್ರ. ಹೀಗೆ, 'ಆರ್‌ಸಿಬಿ ಅನ್‌ಬಾಕ್ಸ್' ಕಾರ್ಯಕ್ರಮದಲ್ಲಿ ಕನ್ನಡ ಅಭಿಮಾನ ಮೇಳೈಸುವ ಸಮಯದಲ್ಲೇ. ವಿರಾಟ್ ಕೊಹ್ಲಿ ಅವರು 'ಇದು ಆರ್‌ಸಿಬಿಯ ಹೊಸ ಅಧ್ಯಾಯ' ಎಂದು ಕನ್ನಡದಲ್ಲಿಯೇ ಉದ್ಘರಿಸಿದ ನಂತರ ಇಡೀ ಕ್ರೀಡಾಂಗಣ ಮತ್ತೆ ಕೊಹ್ಲಿ ಮಯವಾಗಿ ಹೋಗಿತ್ತು.
King Kohli speaking in Kannada 😭😭❤❤
— Pranooth Gowda (@pranooth_mp) March 19, 2024
The crowd loved it #RCBUnbox#Viratkohli pic.twitter.com/4nowBMXXlf
ಕೊಹ್ಲಿ ಕನ್ನಡ ಪ್ರೀತಿ ಹೊಸದಲ್ಲ!
ವಿರಾಟ್ ಕೊಹ್ಲಿ ಅವರಿಗೆ ಕನ್ನಡಿಗರ ಮೇಲೆ & ಬೆಂಗಳೂರಿನ ಮೇಲೆ ಎಷ್ಟು ಲವ್ ಇದೆಯಪ್ಪ ಅಂದ್ರೆ, ಪದೇ ಪದೇ ಈ ಪ್ರೀತಿಯನ್ನ ಜಗತ್ತಿನ ಎದುರು ಕೊಹ್ಲಿ ತೆರೆದಿಡುತ್ತಾರೆ. ಹೀಗಾಗಿ, ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ತಂಡವನ್ನು ಕಳೆದ 16 ವರ್ಷದಿಂದ ಬಿಟ್ಟು ಹೋಗಿಲ್ಲ. ಹಾಗೇ ತಮ್ಮ ಮತ್ತೊಂದು ತವರು ಮನೆ ಅಂತಾ ಕೂಡ ಬೆಂಗಳೂರು ನಗರವನ್ನು ವಿರಾಟ್ ಕೊಹ್ಲಿ ಅವರು ಕೊಂಡಾಡುತ್ತಾರೆ. ಇದೀಗ ಮತ್ತೊಮ್ಮೆ ಕನ್ನಡದಲ್ಲಿ ಮಾತನಾಡಿದ ಅವರು ಆರ್‌ಸಿಬಿ ಅಭಿಮಾನಿ ಬಳಗಕ್ಕೆ ಹೊಸ ಭರವಸೆ ಕೊಟ್ಟಿದ್ದಾರೆ.
ಒಟ್ನಲ್ಲಿ ಇನ್ನೇನು ಆರ್‌ಸಿಬಿ ತಂಡ ಚೆನ್ನೈ ವಿರುದ್ಧ ಮ್ಯಾಚ್ ಆಡಲಿದೆ. ಹೀಗಾಗಿ ಕುತೂಹಲ ಡಬಲ್ ಆಗಿದ್ದು, ಕೊಹ್ಲಿ ಬೇರೆ ಕನ್ನಡದಲ್ಲೇ ಪ್ರಮಾಣ ಮಾಡಿದ್ದಾರೆ. 'ಇದು ಆರ್‌ಸಿಬಿಯ ಹೊಸ ಅಧ್ಯಾಯ' ಎಂದಿರುವ ಕೊಹ್ಲಿ ಅವರ ಮಾತುಗಳು ನಿಜವಾಗುತ್ತಾ? ಆರ್‌ಸಿಬಿ ತಂಡ ಈ ಬಾರಿ ಕಪ್ ಗೆಲ್ಲುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ. ಅದೆಲ್ಲವನ್ನ ಮೀರಿ ಈಗ ಆರ್‌ಸಿಬಿ ಮಹಿಳಾ ತಂಡ ಕಪ್ ಗೆದ್ದಿರುವುದು ಖುಷಿಯನ್ನ ಡಬಲ್ ಮಾಡಿದೆ. ಇಷ್ಟೇ ಅಲ್ಲ ಈ ಬಾರಿ ಆರ್‌ಸಿಬಿ ಹುಡುಗರ ತಂಡ ಕೂಡ ಕಪ್ ಗೆಲ್ಲುವ ವಿಶ್ವಾಸ ಡಬಲ್ ಆಗಿದೆ.












Click it and Unblock the Notifications