New ICC Rules... ಐಸಿಸಿಯಿಂದ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯಾವಳಿಗಳಿಗೆ ಹೊಸ ನಿಯಮಗಳ ಜಾರಿ
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಟೆಸ್ಟ್ ಕ್ರಿಕೆಟ್ ಪಂದ್ಯಾವಳಿಗಳಿಗೆ ಹೊಸ ನಿಯಮಗಳನ್ನು ಜಾರಿ ಮಾಡಿದೆ. ಇದರಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದು. ಹಾಗಾದ್ರೆ ಯಾವೆಲ್ಲಾ ನಿಯಮಗಳು ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ...
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿಸಿ) ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮವು 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಆರಂಭದಿಂದಲೂ ಅನ್ವಯ ಆಗುತ್ತಿದೆ. ಇನ್ನೂ ಕೆಲ ನಿಯಮಗಳು ಜುಲೈ 2ರಿಂದ ಜಾರಿಯಾಗಲಿವೆ.

ಟೆಸ್ಟ್ಗೆ ಸಂಬಂಧಿಸಿದ ನಿಯಮಗಳು ಇತ್ತೀಚೆಗೆ ಗಾಲೆಯಲ್ಲಿ ನಡೆದ ಶ್ರೀಲಂಕಾ-ಬಾಂಗ್ಲದೇಶ ನಡುವೆ ನಡೆದ ಟೆಸ್ಟ್ ಪಂದ್ಯದಿಂದ ಜಾರಿಯಾಗಿವೆ. ಹಾಗೂ ಇನ್ನೂ ಯಾವೆಲ್ಲಾ ಜಾರಿಯಾಗಲಿವೆ ಹಾಗೂ ಯಾಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನುವ ಇಂಚಿಂಚು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಯಾವೆಲ್ಲಾ ನಿಯಮಗಳಲ್ಲಿ ಬದಲಾವಣೆ
* ಸ್ಟಾಪ್ ಕ್ಲಾಕ್ ನಿಯಮ
* ಡಿಆರ್‌ಎಸ್ ನಿಯಮ
* ಒಂದೇ ಚೆಂಡು ಬಳಕೆ
* ಬೌಂಡರಿ ಕ್ಯಾಚ್ ನಿಯಮ
* ಲಾಲಾರಸ ನಿಯಮದಲ್ಲಿ ಬದಲಾವಣೆ
* ನೋ-ಬಾಲ್ ಚೆಕ್
* ಶಾರ್ಟ್ ರನ್
ಸ್ಟಾಪ್ ಕ್ಲಾಕ್ ನಿಯಮ: ನಿಧಾನಗತಿಯಲ್ಲಿ ಬೌಲಿಂಗ್ ಮಾಡುವ ಮೂಲಕ ಹೆಚ್ಚು ಸಮಯ ತೆಗೆದುಕೊಳ್ಳುವ ಘಟನೆಗಳು ನಡೆಯುತ್ತಲಿವೆ. ಇದಕ್ಕೆ ಬ್ರೇಕ್ ಹಾಕಲು ಐಸಿಸಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಟಾಪ್ ಕ್ಲಾಕ್ ನಿಯಮವನ್ನ ಜಾರಿಗೊಳಿಸಿದೆ.
2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನೊಂದಿಗೆ ಈ ನಿಯಮ ಜಾರಿಗೆ ಬಂದಿದೆ. ಬೌಲಿಂಗ್ ಮಾಡುವ ತಂಡ ಓವರ್ ಮುಗಿದ 60 ಸೆಕೆಂಡುಗಳೊಳಗೆ ಮುಂದಿನ ಓವರ್ ಆರಂಭಿಸಬೇಕಾಗುತ್ತದೆ. ಇದನ್ನು ಮೀರಿದರೆ ಎರಡು ಬಾರಿ ಎಚ್ಚರಿಕೆ ಕೊಡಲಾಗುತ್ತದೆ. ಮೂರನೇ ಬಾರಿಯೂ ಇದೇ ರೀತಿ ಆದ್ರೆ, ಬ್ಯಾಟಿಂಗ್ ಮಾಡುವ ಟೀಮ್‌ಗೆ ಹೆಚ್ಚುವರಿಯಾಗಿ 5 ರನ್‌ಗಳನ್ನು ನೀಡಲಾಗುತ್ತದೆ. ಪ್ರತಿ 80 ಓವರ್‌ಗಳ ನಂತರ ಈ ನಿಯಮವು ಪುನರಾರಂಭವಾಗುತ್ತದೆ. ಈ ನಿಯಮವನ್ನು ಜೂನ್ 2024ರಿಂದ ಏಕದಿನ ಮತ್ತು ಟಿ-20 ಮಾದರಿಯ ಪಂದ್ಯಗಳಲ್ಲಿ ಜಾರಿಗೊಳಿಸಲಾಯಿತು.
ಡಿಆರ್‌ಎಸ್: ಕ್ಯಾಚ್ ವಿಚಾರವಾಗಿ ಬ್ಯಾಟಿಂಗ್ ತಂಡ ಡಿಆರ್‌ಎಸ್ ಮೊರೆ ಹೋದ್ರೆ, ಅಲ್ಟ್ರಾ ಎಡ್ಜ್ ಮೂಲಕ ಪರಿಶೀಲನೆ ನಡೆಯಲಿದೆ. ಒಂದು ವೇಳೆ ಬಾಲ್ ಬ್ಯಾಟ್ಗೆ ತಾಗದಿದ್ರೆ, ಎಲ್‌ಬಿಡಬ್ಲ್ಯೂ ಚೆಕ್ ಮಾಡಿ ಮುಂದಿನ ನಿರ್ಧಾರ ಬರುತ್ತಾರೆ.
ಬಾಲ್‌ಗಳ ಬಳಕೆ: ಸದ್ಯ ಏಕದಿನ ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭದಿಂದ 50ನೇ ಓವರ್‌ವರೆಗೆ ಎರಡು ಬಾಲ್‌ಗಳನ್ನು ಬಳಸಲಾಗುತ್ತದೆ. ಈಗ ಈ ನಿಯಮ ಬದಲಾಗಲಿದ್ದು, 35 ಓವರ್‌ಗಳವರೆಗೆ ಎರಡು ಬಾಲ್‌ಗಳನ್ನು ಬಳೆಕೆ ಮಾಡಬಹುದಾಗಿದೆ. ಮಳೆ ಅಥವಾ ಇತರ ಕಾರಣಗಳಿಂದ ಪಂದ್ಯವನ್ನ 35 ಓವರ್‌ಗಳಿಗೆ ಇಳಿಕೆ ಮಾಡಿದ್ರೆ, ಎರಡೂ ತಂಡಗಳು ಬೌಲಿಂಗ್ ಮಾಡುವಾಗ ಕೇವಲ ಒಂದು ಬಾಲ್ ಅನ್ನು ಮಾತ್ರ ಬಳಸಬೇಕಾಗುತ್ತದೆ. ಜುಲೈ 2ರಂದು ನಡೆಯಲಿರುವ ಶ್ರೀಲಂಕಾ-ಬಾಂಗ್ಲಾದೇಶ ಏಕದಿನ ಪಂದ್ಯದಿಂದ ಈ ನಿಯಮ ಜಾರಿಯಾಗಲಿದೆ ಎಂದಿ ತಿಳಿದುಬಂದಿದೆ.
ಬೌಂಡರಿ ಕ್ಯಾಚ್ ಚೆಕ್: ಫೀಲ್ಡರ್‌ಗಳು ಬೌಂಡರಿ ಲೈನ್ ದಾಟಿ ಗಾಳಿಯಲ್ಲಿ ಹಾರಿ ಚೆಂಡನ್ನು ಹಿಡಿಯುವುದು ಇತ್ತೀಚೆಗೆ ಸಾಮಾನ್ಯ ಆಗಿಬಿಟ್ಟಿದೆ. ಆದರೆ ಇನ್ಮುಂದೆ ಈ ನಿಯಮದಲ್ಲಿ ಬದಲಾವಣೆ ಆಗಲಿದ್ದು, ಬೌಂಡರಿ ಲೈನ್ ಆಚೆಯಿಂದ ಚೆಂಡನ್ನು ಗಾಳಿಯಲ್ಲಿ ಹಾರಿ ಕ್ಯಾಚ್ ಹಿಡಿದರೆ, ಒಂದೇ ಪ್ರಯತ್ನದಲ್ಲಿ ಚೆಂಡನ್ನು ಬೌಂಡರಿ ಒಳಗೆ ಎಸೆದು ಕ್ಯಾಚ್ ಪಡೆದರೇ ಮಾತ್ರ ಅದನ್ನು ಔಟ್ ಎಂದು ಪರಿಗಣೆಗೆ ತೆಗೆದುಕೊಳ್ಳಲಾಗುತ್ತದೆ.
ಒಂದು ವೇಳೆ ಬೌಂಡರಿ ಲೈನ್ ದಾಟಿ ಚೆಂಡನ್ನು ಎರಡು-ಮೂರು ಬಾರಿ ಗಾಳಿಯಲ್ಲಿ ತೂರಿ ಬಳಿಕ ಚೆಂಡನ್ನು ಕ್ಯಾಚ್ ಹಿಡಿದರೆ, ಅದನ್ನು ಸಿಕ್ಸ್ ಎಂದು ಪರಿಗಣಿಸಲಾಗುತ್ತದೆ. ಒಟ್ಟಿನಲ್ಲಿ ನಿಯಮ್ ಫೀಲ್ಡರ್‌ಗಳು ಬೌಂಡರಿ ಲೈನ್ ದಾಟಿ ಒಂದೇ ಪ್ರಯತ್ನದಲ್ಲಿ ಕ್ಯಾಚ್ ಹಿಡಿಯಬೇಕಾಗುತ್ತದೆ.
ಬಾಲ್‌ಗೆ ಉಗುಳು ಹಚ್ಚುವ ನಿಯಮಲ್ಲಿ ಬದಲಾವಣೆ: ಸಮಾನ್ಯವಾಗಿ ಬೌಲರ್‌ಗಳು ಚೆಂಡು ಗ್ರಿಫ್‌ಗೆ ಸಿಗದಿದ್ದರೆ ಅದಕ್ಕೆ ಉಗುಳು ಹಚ್ಚುತ್ತಿದ್ದರು. ಇದಕ್ಕೆ ಕಡಿವಾಣ ಹಾಕಲಾಗಿತ್ತು. ಆದರೆ ಈ ನಿಯಮವನ್ನು ರದ್ದುಗೊಳಿಸಲಾಗಿತ್ತು. ಆದರೂ ಮತ್ತೆ ಮತ್ತೆ ಬಾಲ್‌ಗೆ ಲಾಲಾರಸ ಹಚ್ಚಿ ಚೆಂಡನ್ನು ಬದಲಾವಣೆ ಮಡಲು ತಂಡಗಳು ಪ್ರಯತ್ನಿಸುತ್ತವೆ. ಇನ್ಮುಂದೆ ಬಾಲ್ ಅನ್ನು ಬದಲಾವಣೆ ಮಾಡುವ ನಿರ್ಧಾರ ಅಂಪೈರ್‌ಗಳ ಕೈಯಲ್ಲಿರಲಿದ್ದು, ಬಾಲ್ ಹಾಳಾದರೆ ಮಾತ್ರ ಬದಲಾವಣೆ ಮಾಡಲಾಗುತ್ತದೆ.
ನೋ-ಬಾಲ್ ಚೆಕ್: ಫೀಲ್ಡರ್‌ಗಳು ನೋಬಾಲ್ ವೇಳೆ ಸರಿಯಾದ ಕ್ಯಾಚ್ ಹಿಡಿದಿದ್ದರೆ, ಬ್ಯಾಟಿಂಗ್ ತಂಡಕ್ಕೆ ನೋ-ಬಾಲ್ ಅಡಿಯಲ್ಲಿ ಕೇವಲ ಒಂದು ರನ್ ಮಾತ್ರ ನೀಡಲಾಗುತ್ತದೆ. ಕ್ಯಾಚ್ ಹಿಡಿಯದಿದ್ದರೆ, ಬ್ಯಾಟಿಂಗ್ ತಂಡ ಗಳಿಸಿದಷ್ಟು ರನ್‌ಗಳನ್ನು ನೀಡಲಾಗುತ್ತದೆ.
ಬ್ಯಾಟರ್‌ಗಳಿಗೆ ಆತಂಕ ಸೃಷ್ಟಿಸಿದ ನಿಯಮ: ಬ್ಯಾಟರ್ ಉದ್ದೇಶಪೂರ್ವಕವಾಗಿ ಶಾರ್ಟ್ ರನ್ ತೆಗೆದುಕೊಂಡರೆ, ಬ್ಯಾಟಿಂಗ್ ತಂಡಕ್ಕೆ 5 ರನ್ ದಂಡ ವಿಧಿಸಲಾಗುತ್ತದೆ. ಜೊತೆಗೆ ಮುಂದಿನ ಎಸೆತದಲ್ಲಿ ಯಾರು ಸ್ಟ್ರೈಕ್‌ನಲ್ಲಿರಬೇಕು ಎಂದು ಫೀಲ್ಡಿಂಗ್ ತಂಡ ಹಾಗೂ ಅಂಪೈರ್‌ಗಳು ನಿರ್ಧಾರ ಮಾಡಲಿದ್ದಾರೆ. ಈ ನಿಯಮದಿಂದ ಬ್ಯಾಟರ್‌ಗಳಿಗೆ ಹೊಸ ಆತಂಕ ಎದುರಾಗಿದೆ. ಒಟ್ಟಿನಲ್ಲಿ ಇವೆಲ್ಲಾ ನಿಯಮಗಳಿಂದಲೂ ಒಂದು ಕಡೆ ಬೌಲಿಂಗ್ ತಂಡಕ್ಕೆ ಅನುಕೂಲವಾದ್ರೆ, ಮತ್ತೊಂದೆಡೆ ಕೆಲ ನಿಯಮಗಳಿಂದ ಬ್ಯಾಟಿಂಗ್ ತಂಡಕ್ಕೆ ಅನುಕೂಲವಾಗಲಿದೆ. ಮತ್ತೊಂದೆಡೆ ನೋಡೋದಾದ್ರೆ, ಮತ್ತೆ ಮತ್ತೆ ತಪ್ಪುಗಳು ಮರುಕಳಿಸದಂತೆ ಆಗಲಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications