ಹೆಸರು, ಕೀರ್ತಿ ಗಳಿಸಿದ್ರೂ ಹುಟ್ಟೂರು ಬಿಡದ ಹರ್ಮನ್‌ಪ್ರೀತ್ ಕೌರ್: ಪಂಜಾಬಿನಲ್ಲಿರುವ ಮನೆ, ಆಸ್ತಿ ಮೌಲ್ಯ ಎಷ್ಟಿದೆ?

ಹರ್ಮನ್‌ಪ್ರೀತ್ ಕೌರ್ (Harmanpreet Kaur) ಭಾರತೀಯ ಮಹಿಳಾ ಕ್ರಿಕೆಟ್‌ ಟೀಂನ ಮಾಜಿ ಕ್ಯಾಪ್ಟನ್.‌ ನಿನ್ನೆಯಷ್ಟೇ ನಾಯಕತ್ವ ಬಿಟ್ಟು ಕೊಟ್ಟು ಸುದ್ದಿಯಲ್ಲಿದ್ದಾರೆ. ಪಂಜಾಬಿನವರಾದ ಇವರು ಹುಟ್ಟಿ ಬೆಳೆದದ್ದು ಇಲ್ಲಿನ ಮೋಗಾ ಎನ್ನುವ ಪಟ್ಟಣದಲ್ಲಿ. ಅಕ್ಕಪಕ್ಕ ಮನೆಯ ಹುಡುಗ ಜೊತೆ ಬೀದಿಲಿ ಕ್ರಿಕೆಟ್ ಆಡಿಯೇ ತಮ್ಮ ಕ್ರೀಡಾ ಪಯಣ ಆರಂಭಿಸಿದವರು ಕೌರ್. ತಮ್ಮ ಹೂಟ್ಟೂರಲ್ಲಿಯೇ ಮನೆ ಕಟ್ಟಿದ್ದು, ಅಂದಾಜು ಸುಮಾರು 1.5 ಕೋಟಿ ರೂ. ಮೌಲ್ಯದ್ದು ಎನ್ನಲಾಗಿದೆ.

Harmanpreet Kaur Family Home in Hometown Punjab Maga Specious Room Open OutDoor Space Worth 1 5 Crore

ಹುಟ್ಟೂರಿನ ಆಸ್ತಿ :

ತಾನು ಹುಟ್ಟಿ ಬೇಳೆದ ಊರು ಅಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ತುಂಬಾ ಕ್ರೀಡಾಪಟುಗಳು ತಮ್ಮ ವೃತ್ತಿಜೀವನ ಪ್ರಾರಂಭವಾದ ನಂತರ ಮೆಟ್ರೋ ಸಿಟಿಗಳಿಗೆ ಶಿಫ್ಟ್‌ ಆಗಿ ಬಿಡುತ್ತಾರೆ. ಆದರೆ ಕೌರ್ ಇದಕ್ಕೆ ಅಪವಾದ. ಇವತ್ತಿಗೂ ಇವರ ಕುಟುಂಬ ಹುಟ್ಟೂರಲ್ಲೇ ಇದೆ. ಇಲ್ಲಿನ ಜನರು ಚಿಕ್ಕಂದಿನಿಂದ ತನ್ನ ಜರ್ನಿಯನ್ನು ನೋಡಿದ್ದಾರೆ. ಇವತ್ತು ತನಗೆ ಹೆಸರು, ಕೀರ್ತಿ ಇದೆ ಎನ್ನುವ ಕಾರಣಕ್ಕೆ ತನ್ನೂರನ್ನು ಬಿಟ್ಟು ಬರುವ ಮನಸ್ಸು ಹರ್ಮನ್‌ಪ್ರೀತ್‌ಗಿಲ್ಲ. ಹಾಗಾಗಿ ಇದೇ ಊರಲ್ಲಿ ತಮ್ಮ ಮನೆಯನ್ನು ಕಟ್ಟಿ ಕೊಂಡಿದ್ದಾರೆ.

Harmanpreet Kaur ಸಿಂಪಲ್‌ ಸುಂದರ ಮನೆ :

ವರದಿಗಳ ಪ್ರಕಾರ ಈ ಮನೆ ಬಹಳ ದೊಡ್ಡದಾಗಿದೆ. ಫ್ಯಾಮಿಲಿ ಗೆಟ್‌ ಟುಗೆದರ್‌, ಪಾರ್ಟಿಗಳನ್ನು ಆರಾಮಾಗಿ ಮಾಡುವಷ್ಟು ದೊಡ್ಡ ದೊಡ್ಡ ಹಾಲ್‌ಗಳಿವೆ. ಇಂಟಿರಿಯರ್‌ನಲ್ಲಿ ಅನಗತ್ಯ ಎನ್ನಿಸುವಂತ ಡಿಸೈನ್‌ಗಳಿಲ್ಲ. ಆದರೆ, ಎಲ್ಲದಕ್ಕೂ ಮಾರ್ಡನ್‌ ಟಚ್‌ ಕೊಡಲಾಗಿದೆ. ಇಲ್ಲಿ ಓಪನ್‌ ಸ್ಪೇಸ್‌ ಕೂಡಾ ಬೇಕಾದಷ್ಟಿದೆ. ಸಿಂಪಲ್‌ ಆದರೆ ಸುಂದರ ಫರ್ನೀಚರ್‌ಗಳಿವೆ. ನಿತ್ಯದ ಕುಟುಂಬ ಜೀವನಕ್ಕೆ ಹೇಳಿ ಮಾಡಿಸಿದ ಹಾಗಿದೆ ಈ ಮನೆ.

80 ಲಕ್ಷದಿಂದ 1.5 ಕೋಟಿ ವ್ಯಾಲ್ಯೂ :

ಈ ಪ್ರದೇಶದ ಮಾರ್ಕೆಟ್‌ ವಾಲ್ಯೂ ಆಧಾರದ ಮೇಲೆ ಹೇಳುವುದಾದರೆ ಮನೆಯ ಮೌಲ್ಯವು 80 ಲಕ್ಷದಿಂದ 1.5 ಕೋಟಿ ರೂ.ವರೆಗೆ ಹೋಗಬಹುದು. ಇದು ಒಂದು ಅಂದಾಜು ಅಷ್ಟೇ. ನಿಖರವಾಗಿ ಈ ಆಸ್ತಿ ಇಷ್ಟೇ ಬಾಳುತ್ತದೆ ಎನ್ನುವುದಕ್ಕೆ ಯಾವ ಆಧಾರವೂ ಇಲ್ಲ. ಕೌರ್ ಹೆಸರು, ಕೀರ್ತಿ ಅವರ ಬಳಿ ಇರುವ ಹಣಕ್ಕೆ ಹೋಲಿಸಿದರೆ ಈ ಆಸ್ತಿ ಅಂಥ ವಿಶೇಷ ಏನಲ್ಲ.

ಮೂಲ ಮರೆಯದ ಕೌರ್‌ :

ಸಕ್ಸಸ್‌ ಸಿಗುತ್ತಿದ್ದ ಹಾಗೆ ದೂರದ ಊರುಗಳಿಗೆ ಹೋಗಿ ನೆಲೆಸುವವರ ಮಧ್ಯೆ ಕೌರ್‌ ಭಿನ್ನವಾಗಿ ಕಾಣುವುದಂತೂ ನಿಜ. ಇಲ್ಲಿಯ ಓಪನ್‌ ಸ್ಪೇಸ್‌ನಲ್ಲಿ ಫ್ಯಾಮಿಲಿ (family) ಫಂಕ್ಷನ್‌ಗಳನ್ನು ನಡೆಸುತ್ತಾರೆ. ಈ ಮನೆ ಮತ್ತು ಜಾಗವನ್ನು ಇವರು ಇನ್ವೆಸ್ಟ್‌ಮೆಂಟ್‌ ಉದೇಶಕ್ಕಾಗಿ ಇಟ್ಟುಕೊಂಡಿಲ್ಲ. ಇದು ಅವರ ಜೀವನದ ಒಂದು ಭಾಗ. ವೃತ್ತಿ ಬದುಕು ಅವರನ್ನು ಎಷ್ಟೇ ಎತ್ತರಕ್ಕೆ ತೆಗೆದುಕೊಂಡು ಹೋದರೂ ಈ ಮನೆ ಅವರಿಗೆ ಅವರ ಮೂಲವನ್ನು ನೆನಪಿಸುತ್ತದೆಯಂತೆ.

ಮುಂಬಯಿನಲ್ಲೂ ಇದೆ ಅಪಾರ್ಟ್‌ಮೆಂಟ್‌ :

ಮೋಗಾ ಮನೆಯ ಜೊತೆಗೆ, ಇವರಿಗೆ ಮುಂಬೈನಲ್ಲಿ ಒಂದು ಅಪಾರ್ಟ್ಮೆಂಟ್ ಇದೆ. ಈ ಆಸ್ತಿ 2 ರಿಂದ 4 ಕೋಟಿ ಮೌಲ್ಯದ್ದು ಎನ್ನಲಾಗಿದೆ. ಇದು ಪಂಜಾಬ್‌ ಮನೆಗಿಂತ ತುಂಬಾ ದೊಡ್ಡದಾಗಿದೆ. ಮುಂಬೈ ಫ್ಲಾಟ್ ಎಲ್ಲಾ ಆಧುನಿಕ ಸೌಕರ್ಯ ಹೊಂದಿದೆ. ಕ್ರಿಕೆಟ್ ತರಬೇತಿ ಮತ್ತು ಆಡಳಿತಾತ್ಮಕ ಕೇಂದ್ರಗಳಿಗೆ ಸುಲಭ ಆ್ಯಕ್ಸೆಸ್ ಇದೆ. ಆದರೆ ಮೋಗಾ ಮನೆ ಕುಟುಂಬದೊಂದಿಗೆ ಸಮಯ ಕಳೆಯಲು ಇರುವ ಪ್ರಶಾಂತವಾದ ಜಾಗ.

ಕ್ರಿಕೆಟ್‌ ಬದುಕು :

ಕೌರ್ 2017 ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 171 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಈ ಇನ್ನಿಂಗ್ಸ್ ಅವರ ಜೀವನವನ್ನೇ (life) ಬದಲಾಯಿಸಿತು. ಅವರು T20Iನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಮಹಿಳೆ. 200 T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಮಹೀಳಾ ಕ್ರಿಕೆಟರ್. 356 ಅಂತರರಾಷ್ಟ್ರೀಯ ಮ್ಯಾಚ್‌ ಆಡಿದ್ದಾರೆ. ಈ ಮೂಲಕ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಮಹಿಳೆ ಎಂಬ ಎಂಬ ಹೆಗ್ಗಳಿಕೆ ಇವರದ್ದು. ಅವರ ನಾಯಕತ್ವದಲ್ಲಿ, ಭಾರತವು 2025 ರಲ್ಲಿ ಮೊದಲ ಹಿರಿಯ ಮಹಿಳಾ ವಿಶ್ವಕಪ್ ಪ್ರಶಸ್ತಿ ಗೆದ್ದಿದೆ. 2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದೆ. ಕೌರ್ ಇತ್ತೀಚೆಗೆ ಎಲ್ಲಾ ಸ್ವರೂಪಗಳ ಕ್ರಿಕೆಟ್‌ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ನಾಯಕಿ ಪಟ್ಟದಿಂದ ಕೆಳಗಿಳಿದಿದ್ದರೂ ಅವರು ತಂಡದಲ್ಲಿ ಮುಂದುವರೆಯಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+