Hardik Pandya: ನತಾಶಾ ಜೊತೆ ಡಿವೋರ್ಸ್ ವದಂತಿ ಬೆನ್ನಲ್ಲೇ ಈಕೆ ಜೊತೆ ಹಾರ್ದಿಕ್ ಪಾಂಡ್ಯ ಡೇಟಿಂಗ್?
ಹಾರ್ದಿಕ್ ಪಾಂಡ್ಯ ಸದ್ಯ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳ ಪಾಲಿನ ಹೀರೋ ಆಗಿದ್ದಾರೆ. ಐಪಿಎಲ್ ವೇಳೆ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದ ಪಾಂಡ್ಯ, ವಿಶ್ವಕಪ್‌ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪತ್ನಿ ಜೊತೆ ವಿಚ್ಛೇದನ ವದಂತಿ, ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳ ಆಕ್ರೋಶದಿಂದ ಕುಗ್ಗಿದ್ದ ಪಾಂಡ್ಯ ಈಗ ಮತ್ತೆ ಮೊದಲಿನಂತಾಗಿದ್ದಾರೆ. ಪತ್ನಿ ನತಾಶಾ ಜೊತೆ ವಿಚ್ಛೇದನದ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲವಾದರೂ ಅನಂತ್ ಅಂಬಾನಿ-ರಾಧಿಕಾ ಮದುವೆಯಲ್ಲಿ ಒಂಟಿಯಾಗಿ ಕಾಣಿಸಿಕೊಂಡಿದ್ದು ವಿಚ್ಛೇದನ ವದಂತಿಗಳಿಗೆ ಮತ್ತಷ್ಟು ಬಲ ಕೊಟ್ಟಂತಾಗಿದೆ.

ಎಲ್ಲಾ ವದಂತಿಗಳ ನಡುವೆಯೇ ಹಾರ್ದಿಕ್ ಪಾಂಡ್ಯ ಬೇರೊಬ್ಬ ಮಹಿಳೆ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಬಂದಿದೆ. ಹಾರ್ದಿಕ್ ಪಾಂಡ್ಯ ಹುಡುಗಿಯೊಬ್ಬಳ ಜೊತೆ ಫೋಟೊಗೆ ಖುಷಿಯಿಂದ ಫೋಸ್ ಕೊಡುತ್ತಿರುವ ವಿಡಿಯೋ ಸದ್ಯ ವ್ಯಾಪಕವಾಗಿ ವೈರಲ್ ಆಗಿದೆ.
ಡೇಟಿಂಗ್ ಮಾಡುತ್ತಿದ್ದಾರಾ?
ಪಾಂಡ್ಯ ಜೊತೆ ಕಾಣಿಸಿಕೊಂಡಿರುವ ಹುಡುಗಿಯ ಹೆಸರು ಪ್ರಾಚಿ ಸೋಲಂಕಿ. ಅವರು ಪ್ರಸಿದ್ಧ ಮೇಕಪ್ ಕಲಾವಿದೆಯಾಗಿದ್ದು, ಇನ್‌ಸ್ಟಾಗ್ರಾಂನಲ್ಲಿ 5.46 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಡಿಜಿಟಲ್ ಕ್ರಿಕೆಟರ್ ಆಗಿರುವ ಪ್ರಾಚಿ ದೇಸಾಯಿ, ಒಂದೇ ಒಂದು ಪೋಸ್ಟ್ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದಾರೆ.
ಆದರೆ ಹಾರ್ದಿಕ್ ಪಾಂಡ್ಯ ಜೊತೆ ಅವರು ಡೇಟಿಂಗ್ ಮಾಡುತ್ತಿಲ್ಲ, ಬದಲಾಗಿ ಆಕೆ ಪಾಂಡ್ಯರ ಅಪ್ಪಟ ಅಭಿಮನಿಯಾಗಿದ್ದು, ನೆಚ್ಚಿನ ಕ್ರಿಕೆಟಿಗನನ್ನು ಭೇಟಿಯಾಗಿದ್ದಾರೆ. ಈ ಖುಷಿಯನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪ್ರಾಚಿ ಸೋಲಂಕಿ ಅವರು ಹಾರ್ದಿಕ್ ಅವರ ಸಹೋದರ ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಂಖುರಿ ಅವರೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಪಾಂಡ್ಯ ಕುಟುಂಬ ಪ್ರಾಚಿಗೆ ತುಂಬಾ ಆತ್ಮೀಯವಾಗಿದೆ ಎನ್ನಲಾಗಿದೆ. ಇದು ಡೇಟಿಂಗ್ ವದಂತಿಗಳಿಗೆ ಉತ್ತೇಜನ ನೀಡಿದೆ.
ವಿಚ್ಛೇದನ ವದಂತಿ ಬೆನ್ನಲ್ಲೇ ಹಾರ್ದಿಕ್ ಅವರ ಪತ್ನಿ ನತಾಶಾ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ, ಅಲ್ಲಿ ಅವರು ತಮ್ಮ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನತಾಶಾ ಏನು ಹೇಳಿದ್ದಾರೆಂದು ಕಂಡುಹಿಡಿಯೋಣ.
ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, "ನಾನು ಇಲ್ಲಿ ಕುಳಿತು ನನ್ನ ಕಾಫಿ ಕುಡಿಯುತ್ತಿದ್ದೇನೆ ಮತ್ತು ನಾವು ಜನರನ್ನು ಎಷ್ಟು ಬೇಗನೆ ನಿರ್ಣಯಿಸುತ್ತೇವೆ ಎಂದು ಅರಿತುಕೊಂಡೆ. ಹಿಂದಿನ ಪರಿಸ್ಥಿತಿಯನ್ನು ತಿಳಿಯದೆ ನಾವು ತಕ್ಷಣವೇ ನಿರ್ಣಯಗಳನ್ನು ಮಾಡುತ್ತೇವೆ, ಬೇರೆಯವರ ಬಗ್ಗೆ ನಾವು ತೀರ್ಮಾನ ಮಾಡುವುದನ್ನು ಕಡಿಮೆ ಮಾಡೋಣ, ಸಹಾನುಭೂತಿ ತೋರಿಸೋಣ ಮತ್ತು ಜನರ ಜೊತೆ ತಾಳ್ಮೆಯಿಂದ ಇರಿ" ಎಂದು ಮನವಿ ಮಾಡಿದ್ದಾರೆ.












Click it and Unblock the Notifications