ಡಿವೋರ್ಸ್ ವಿವಾದಗಳ ನಡುವೆ ಹಾರ್ದಿಕ್ ಮಗನೊಂದಿಗೆ ಫೋಟೋ ವೈರಲ್
ಬಾರ್ಬಡೋಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಬಳಿಕ ಟೀಮ್ ಇಂಡಿಯಾ ಗುರುವಾರ ನವದೆಹಲಿಗೆ ಬಂದಿಳಿದಿತು. ಬಳಿಕ ಮುಂಬೈನಲ್ಲಿ ಭರ್ಜರಿ ರೋಡ್ ಶೋನಲ್ಲಿ ಭಾಗವಹಿಸಿದ ಆಟಗಾರರು, ಶುಕ್ರವಾರ ಕುಟುಂಬಸ್ಥರನ್ನು ಭೇಟಿ ಮಾಡಿದರು. ಈ ವೇಳೆ ಟೀಮ್ ಇಂಡಿಯಾದ ಉಪನಾಯಕ ಹಾರ್ದಿಕ್ ಪಾಂಡ್ಯ ಸಾಮಾಜಿಕ ತಾಣದಲ್ಲಿ ಹಾಕಿಕೊಂಡ ಒಂದು ಪೋಟೋ ಸಖತ್ ವೈರಲ್ ಆಗುತ್ತಿದೆ.
ಶುಕ್ರವಾರ ಕುಟುಂಬಸ್ಥರನ್ನು ಭೇಟಿ ಮಾಡಿದ ಹಾರ್ದಿಕ್ ಪಾಂಡ್ಯ, ಮನೆಗೆ ಹಿಂದಿರುಗಿದ ನಂತರ, ಅವರು ತಮ್ಮ ಮಗನೊಂದಿಗೆ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅವರ ಈ ಫೋಟೋ ಇದೀಗ ವೈರಲ್ ಆಗಿದೆ. ಈ ಫೋಟೋವನ್ನು ಹಂಚಿಕೊಳ್ಳುವಾಗ, ಹಾರ್ದಿಕ್ ಪಾಂಡ್ಯ, 'ನನ್ನ #1! ನಾನು ಏನೇ ಮಾಡಿದರೂ ನಿನಗಾಗಿ ಮಾತ್ರ ಮಾಡುತ್ತೇನೆ. ಎಂದು ಬರೆದುಕೊಂಡಿದ್ದಾರೆ.

ಟೀಂ ಇಂಡಿಯಾ ಆಟಗಾರರು ತವರಿಗೆ ಮರಳಿದ್ದಾರೆ. ಈ ವೇಳೆ ಆಟಗಾರರ ಕುಟುಂಬಸ್ಥರು ಅವರೊಂದಿಗೆ ಸಂಭ್ರಮಿಸಿದರು. ಇದಾದ ಬಳಿಕವೂ ಹಾರ್ದಿಕ್ ಪತ್ನಿ ನತಾಶಾ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಅದರ ನಂತರ ಅವರ ಸಂಬಂಧದಲ್ಲಿ ಬಿರುಕು ಬಿಟ್ಟ ಲಕ್ಷಣಗಳು ಕಂಡುಬಂದವು. ಇದರಿಂದಾಗಿ ಮತ್ತೊಮ್ಮೆ ಅವರ ವಿಚ್ಛೇದನದ ವದಂತಿಗಳು ಮುನ್ನೆಲೆಗೆ ಬಂದವು.
ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ
ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ಟೂರ್ನಿಯಲ್ಲಿ 144 ರನ್ ಗಳಿಸಿ 11 ವಿಕೆಟ್ ಪಡೆದರು. ಅವರು 150 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ರನ್‌ಗಳನ್ನು ಗಳಿಸಿದ್ದಾರೆ. ಫೈನಲ್ ಪಂದ್ಯದಲ್ಲೂ ತಮ್ಮ ಅಮೋಘ ಬೌಲಿಂಗ್ ಮೂಲಕ ಸಂಚಲನ ಮೂಡಿಸಿದ್ದ ಹಾರ್ದಿಕ್. ಮೂರು ಓವರ್ ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರು. ಇದಲ್ಲದೇ ಕೊನೆಯ ಓವರ್ ನಲ್ಲಿ 16 ರನ್ ಡಿಫೆಂಡ್ ಮಾಡಿ, ತಂಡ ಚಾಂಪಿಯನ್ ಪಟ್ಟಕ್ಕೇರಲು ನೆರವಾದರು.
ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ನೀಡಿದ ಭರ್ಜರಿ ಪ್ರದರ್ಶನದ ಲಾಭ ಅವರಿಗೆ ಐಸಿಸಿ ನೂತನವಾಗಿ ಬಿಡುಗಡೆ ಮಾಡಿದ ಶ್ರೇಯಾಂಕದಲ್ಲಿ ಲಭಿಸಿತು. ಅವರು ಟಿ20 ಆಲ್‌ರೌಂಡರ್‌ಗಳ ಅಗ್ರ ಶ್ರೇಯಾಂಕವನ್ನು ಪಡೆದಿದ್ದಾರೆ.

ಮೋದಿ ಭೇಟಿ ಮಾಡಿದ ಟೀಮ್ ಇಂಡಿಯಾ
ಟೀಮ್ ಇಂಡಿಯಾ ಆಟಗಾರರು ಗುರುವಾರ ಭಾರತಕ್ಕೆ ಬಂದಿಳಿದ ಬಳಿಕ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಹಾರ್ದಿಕ್ ಪಾಂಡ್ಯ ಸಹ ತನ್ನ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದರು. ಸರ್, ನಮಗೆ ಕರೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಆರು ತಿಂಗಳು ಬಹಳ ಮನರಂಜಿತವಾಗಿತ್ತು. ಸಾಕಷ್ಟು ಏರಿಳಿತಗಳಿಂದ ಕೂಡಿದ್ದವು ಎಂದರು.
ಮೈದಾನಕ್ಕೆ ಹೋದಾಗಲೆಲ್ಲ ಅಭಿಮಾನಿಗಳ ಟೀಕೆ ಕೇಳಿಸುತ್ತಿತ್ತು. ನಾನು ಉತ್ತರವನ್ನ ಆಟದಿಂದ ಕೊಡುತ್ತೇನೆ ಎಂದುಭಾವಿಸಿದೆ. ಕೊನೆಯ ಓವರ್‌ನಲ್ಲಿ ನನ್ನ ಆಟ ಪ್ರದರ್ಶಿಸುವ ಅವಕಾಶ ಸಿಕ್ಕಿತು. ಸೂರ್ಯ ಆಟ ಬದಲಾಯಿಸುವ ಕ್ಯಾಚ್ ತೆಗೆದುಕೊಂಡರು. ಅದರ ನಂತರ ನಾವು ತುಂಬಾ ಸಂತೋಷಪಟ್ಟೆವು. ನಾಯಕ ಮತ್ತು ಕೋಚ್‌ನಿಂದ ನನಗೆ ಸಾಕಷ್ಟು ಬೆಂಬಲ ಸಿಕ್ಕಿತು ಎಂದು ಹೇಳಿಕೊಂಡಿದ್ದರು.












Click it and Unblock the Notifications