ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ಜಿಲ್ಲೆಯಲ್ಲಿ ಸ್ಫೋರ್ಟ್ಸ್ ಹಾಸ್ಟೆಲ್ ನಿರ್ಮಿಸಲಿದೆ ಹೆಚ್‌ಎಎಲ್

|
Google Oneindia Kannada News

ಬೆಂಗಳೂರು,ಆ.10: ಸಿಎಸ್‌ಆರ್‌ ನಿಧಿಯಿಂದ ಎರಡು ಸ್ಪೋರ್ಟ್ಸ್ ಹಾಸ್ಟೆಲ್ ನಿರ್ಮಿಸಿಕೊಡಲು ಹೆಚ್‌ಎಎಲ್‌ಗೆ ಕ್ರೀಡಾ ಇಲಾಖೆ ಮನವಿ ಮಾಡಲಾಗಿತ್ತು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಹೆಚ್‌ಎಎಲ್ ತಮ್ಮ ಸಿಎಸ್‌ಆರ್ ನಿಧಿಯಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಕ್ರೀಡಾ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ.

ಕಾಮನ್ ವೆಲ್ತ್ , ಒಲಂಪಿಕ್ ಸೇರಿದಂತೆ ಇತರೆ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಕರ್ನಾಟಕದ ಕ್ರೀಡಾಪಟುಗಳು ಪದಕಗಳನ್ನು ಪಡೆಯಬೇಕಾದರೇ ಕ್ರೀಡಾಪಟುಗಳಿಗೆ ತರಬೇತಿಯ ಅಗತ್ಯವಿದೆ. ಕ್ರೀಡಾ ವಿದ್ಯಾರ್ಥಿಗಳಿಗೆ ಸ್ಪೋರ್ಟ್ಸ್ ಹಾಸ್ಟೆಲ್ ನಿರ್ಮಾಣ ಮಾಡುವುದರಿಂದಾಗಿ ಬಹಳ ಅನುಕೂಲವಾಗಲಿದೆ. ಇದಕ್ಕಾಗಿ ಕ್ರೀಡಾ ವಿದ್ಯಾರ್ಥಿಗಳಿಗೆ ಸ್ಪೋರ್ಟ್ಸ್ ಹಾಸ್ಟೆಲ್ ನಿರ್ಮಾಣ ಮಾಡಲು ಕ್ರಮವನ್ನು ಕೈಗೊಳ್ಳಲಾಗುತ್ತಿದೆ.

ಕಾಮನ್ ವೆಲ್ತ್ ಗೇಮ್ಸ್ : ಕಂಚು ಗೆದ್ದಉಡುಪಿಯ ಗುರುರಾಜ ಮನೆಯಲ್ಲಿ ಸಂಭ್ರಮ ಕಾಮನ್ ವೆಲ್ತ್ ಗೇಮ್ಸ್ : ಕಂಚು ಗೆದ್ದಉಡುಪಿಯ ಗುರುರಾಜ ಮನೆಯಲ್ಲಿ ಸಂಭ್ರಮ

ಕ್ರೀಡಾ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಸಲುವಾಗಿ ಸಿಎಸ್‌ಆರ್ ನಿಧಿಯಲ್ಲಿ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣ ಗೌಡ ತಿಳಿಸಿದರು.

HAL agrees for construction of sports hostel on CSR fund in Kolar and Chikkaballapur

ಸಿಎಸ್‌ಆರ್ ನಿಧಿಯಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಕ್ರೀಡಾ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಹೆಚ್‌ಎಎಲ್ ಒಪ್ಪಿದೆ. ಕೋಲಾರದಲ್ಲಿ 2.07 ಕೋಟಿ ಹಾಗೂ ಚಿಕ್ಕಬಳ್ಳಾಪುರದಲ್ಲಿ 3.36 ಕೋಟಿ ವೆಚ್ಚದಲ್ಲಿ ಸ್ಪೋರ್ಟ್ಸ್ ಹಾಸ್ಟೆಲ್ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿದ್ದು, ಎರಡು ತಿಂಗಳಲ್ಲಿ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವರು ಹೇಳಿದರು.

HAL agrees for construction of sports hostel on CSR fund in Kolar and Chikkaballapur

ಸಚಿವ ನಾರಾಯಣ ಗೌಡ ಹೇಳಿದ್ದೇನು?; "ಸಿಎಸ್‌ಆರ್‌ ನಿಧಿಯಿಂದ ಎರಡು ಸ್ಪೋರ್ಟ್ಸ್ ಹಾಸ್ಟೆಲ್ ನಿರ್ಮಿಸಿಕೊಡಲು ಹೆಚ್‌ಎಎಲ್‌ಗೆ ಮನವಿ ಮಾಡಲಾಗಿತ್ತು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಹೆಚ್‌ಎಎಲ್ ತಮ್ಮ ಸಿಎಸ್‌ಆರ್ ನಿಧಿಯಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಕ್ರೀಡಾ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ಇದಕ್ಕಾಗಿ ಹೆಚ್‌ಎಎಲ್ ಆಡಳಿತ ಮಂಡಳಿಗೆ ಧನ್ಯವಾದ ಸಲ್ಲಿಸುತ್ತೇನೆ" ಎಂದು ಡಾ. ನಾರಾಯಣ ಗೌಡ ಹೇಳಿದರು.

English summary
The sports department had requested HAL to build two sports hostels with CSR funds. Responding positively to the request, HAL has agreed to construct sports hostels in Kolar and Chikkaballapur through its CSR fund,Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X