ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಕ್ರಿಕೆಟ್ ತಂಡದ ಜೊತೆ ಟೀಂ ಇಂಡಿಯಾ ಪಂದ್ಯ: ಬಿಸಿಸಿಐಗೆ ಪ್ರಸ್ತಾವನೆ ಸಲ್ಲಿಸಿರುವ ಸರ್ಕಾರ

|
Google Oneindia Kannada News

ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಆಚರಿಸಲು ಆಜಾದಿ ಕಾ ಅಮೃತ್ ಮಹೋತ್ಸವ ಅಭಿಯಾನದ ಭಾಗವಾಗಿ ಭಾರತ ಮತ್ತು ಪ್ರಪಂಚದ ಉಳಿದ ದೇಶಗಳ ಅಗ್ರ ಕ್ರಿಕೆಟ್ ಆಟಗಾರರನ್ನೊಳಗೊಂಡ ತಂಡದ ಜೊತೆ ಪಂದ್ಯವನ್ನು ಆಯೋಜಿಸಲು ಸಂಸ್ಕೃತಿ ಸಚಿವಾಲಯವು ಬಿಸಿಸಿಐಗೆ ಪ್ರಸ್ತಾವನೆ ಕಳುಹಿಸಿದೆ.

ಜುಲೈ 22ರಿಂದ 26ರವರೆಗೆ ವಾರ್ಷಿಕ ಐಸಿಸಿ ಸಮ್ಮೇಳನ ಇಂಗ್ಲೆಂಡ್‌ನಲ್ಲಿ ನಡೆಯಲಿದ್ದು, ಜುಲೈ 24ರಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಭಾಗವಹಿಸಲಿದ್ದಾರೆ. ಅಲ್ಲಿ ಅವರು ತಮ್ಮ ಆಟಗಾರರ ಲಭ್ಯತೆಯ ಬಗ್ಗೆ ಇತರ ಮಂಡಳಿಗಳೊಂದಿಗೆ ಪ್ರಸ್ತಾಪವನ್ನು ಚರ್ಚಿಸುತ್ತಾರೆ.

ಸುಮ್ಮನೆ ವಿರಾಟ್ ಕೊಹ್ಲಿಯನ್ನು ಟೀಕಿಸಬೇಡಿ: ರೋಹಿತ್ ಶರ್ಮಾ ಎಚ್ಚರಿಕೆಸುಮ್ಮನೆ ವಿರಾಟ್ ಕೊಹ್ಲಿಯನ್ನು ಟೀಕಿಸಬೇಡಿ: ರೋಹಿತ್ ಶರ್ಮಾ ಎಚ್ಚರಿಕೆ

ಪ್ರಸ್ತಾವನೆಯನ್ನು ಕಳುಹಿಸಿದ ಸಂಸ್ಕೃತಿ ಸಚಿವಾಲಯವು 'ಆಜಾದಿ ಕಾ ಅಮೃತ್ ಮಹೋತ್ಸವ'ದ ಅಭಿಯಾನದ ಭಾಗವಾಗಿ ಪಂದ್ಯವನ್ನು ಆಡಲು ಭಾರತದ ಅಗ್ರ ಆಟಗಾರರು ಮತ್ತು ವಿದೇಶದ ಜನಪ್ರಿಯ ಕ್ರಿಕೆಟಿಗರನ್ನು ಒಂದುಗೂಡಿಸಲು ಬಿಸಿಸಿಐ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

If Everything Gets Work Team India Vs World XI Match Will be Held In Delhi

"ಆಗಸ್ಟ್ 22 ರಂದು ಭಾರತ ಇಲೆವೆನ್ ಮತ್ತು ವಿಶ್ವ ಇಲೆವೆನ್ ನಡುವೆ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲು ಸರ್ಕಾರದಿಂದ ಪ್ರಸ್ತಾವನೆಯನ್ನು ಸ್ವೀಕರಿಸಿದ್ದೇವೆ. ಉಳಿದ ವಿಶ್ವ ತಂಡಕ್ಕೆ, ನಮಗೆ ಕನಿಷ್ಠ 13-14 ಅಂತರಾಷ್ಟ್ರೀಯ ಆಟಗಾರರು ಬೇಕಾಗಿದ್ದಾರೆ ಮತ್ತು ಅವರ ಲಭ್ಯತೆ ಬಗ್ಗೆ ಪರಿಶೀಲಿಸುವ ಅಗತ್ಯವಿದೆ" ಎಂದು ಮೂಲವೊಂದು ತಿಳಿಸಿದೆ.

ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲಿ, ಇಲ್ಲ ಸ್ಥಾನ ಬಿಟ್ಟುಕೊಡಲಿವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲಿ, ಇಲ್ಲ ಸ್ಥಾನ ಬಿಟ್ಟುಕೊಡಲಿ

ಆಟಗಾರರ ಲಭ್ಯತೆ ಬಗ್ಗೆ ಪರಿಶೀಲನೆ; ಆಗಸ್ಟ್ ವೇಳೆಯಲ್ಲಿ ಇಂಗ್ಲಿಷ್ ದೇಶೀಯ ಕ್ರಿಕೆಟ್ ನಡೆಯುತ್ತಿದೆ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್ ಕೂಡ ಪ್ರಾರಂಭವಾಗುತ್ತದೆ. ಅಂತಾರಾಷ್ಟ್ರೀಯ ಆಟಗಾರರು ತಮ್ಮ ಭಾಗವಹಿಸುವಿಕೆಗಾಗಿ ಹಣ ನೀಡಬೇಕಾ? ಎನ್ನುವುದರ ಕುರಿತು ಬಿಸಿಸಿಐ ಪರಿಶೀಲಿಸುತ್ತಿದೆ.

ಅಂತಾರಾಷ್ಟ್ರೀಯ ಕ್ರಿಕೆಟಿಗರ ಸೇವೆಗಳಿಗೆ ಸಂಬಂಧಿಸಿದಂತೆ ಐಸಿಸಿ ವಾರ್ಷಿಕ ಸಮ್ಮೇಳನಕ್ಕೆ ಬಿಸಿಸಿಐನ ಉನ್ನತ ಅಧಿಕಾರಿಗಳು ಬರ್ಮಿಂಗ್‌ಹ್ಯಾಮ್‌ನಲ್ಲಿ ಇರುತ್ತಾರೆ. ಅಲ್ಲಿ ಅವರು ಭಾರತದ ವಿರುದ್ಧ ಪಂದ್ಯಕ್ಕೆ ತಮ್ಮ ಕೆಲವು ಆಟಗಾರರನ್ನು ಬಿಡುಗಡೆ ಮಾಡಲು ಇತರ ಮಂಡಳಿಗಳ ಅಧಿಕಾರಿಗಳೊಂದಿಗೆ ಮಾತನಾಡಬಹುದು.

ಭಾರತದ ಸ್ಟಾರ್ ಆಟಗಾರರ ಲಭ್ಯತೆ; ಭಾರತ ತಂಡದ ಅಗ್ರ ಆಟಗಾರನ್ನು ಆಯ್ಕೆ ಮಾಡುವುದು ಸಮಸ್ಯೆಯಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಮೂರು ಏಕದಿನ ಪಂದ್ಯಗಳನ್ನು ಒಳಗೊಂಡ ಜಿಂಬಾಬ್ವೆ ವಿರುದ್ಧದ ವಿದೇಶ ಸರಣಿ ಆಗಸ್ಟ್ 20ರಂದು ಕೊನೆಗೊಳ್ಳುತ್ತದೆ. ಈ ನಿರ್ದಿಷ್ಟ ಸರಣಿಯಲ್ಲಿನ ಕೆಲಸ ಆಟಗಾರರು ಆಗಸ್ಟ್ 22ರಂದು ಮಾತ್ರ ಆಗಮಿಸಬಹುದು. ಆದ್ದರಿಂದ ಕೆಲವು ಆಟಗಾರರು ಲಭ್ಯವಿರುವುದಿಲ್ಲ ಎಂಬ ಮಾಹಿತಿ ಇದೆ.

ಜಿಂಬಾಬ್ವೆ ಪ್ರವಾಸಕ್ಕೆ ಹೋಗದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ಅವರಂತಹ ಅಗ್ರ ಆಟಗಾರರು ಶ್ರೀಲಂಕಾದಲ್ಲಿ ಆಗಸ್ಟ್ 27ರಿಂದ ಪ್ರಾರಂಭವಾಗುವ ಏಷ್ಯಾ ಕಪ್‌ಗೆ ಹೊರಡುವ ಮೊದಲು ಇಲ್ಲಿನ ಪಂದ್ಯಕ್ಕೆ ಲಭ್ಯವಿರುತ್ತಾರೆ.

ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಪಂದ್ಯ?; ಎಲ್ಲಾ ಭಾರತೀಯ ಆಟಗಾರರನ್ನು ವಿನಂತಿಸಲಾಗುವುದು ಮತ್ತು ಅವರು ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದು ಭಾರತ ಸರ್ಕಾರದ ಆಶ್ರಯದಲ್ಲಿ ಆಯೋಜಿಸಲಾದ ಕಾರ್ಯಕ್ರಮವಾಗಿರುವುದರಿಂದ ಭಾರತೀಯ ಕ್ರಿಕೆಟಿಗರಿಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ ಎಂದು ಅವರು ಹೇಳಿದರು.

ಬಲಿಷ್ಟ ವಿಶ್ವ ಇಲೆವೆನ್ ತಂಡ ಭಾಗವಹಿಸುವಂತೆ ಮಾಡುವುದು ಬಿಸಿಸಿಐಗೆ ದೊಡ್ಡ ಸವಾಲಾಗಿದೆ. ಸದ್ಯಕ್ಕೆ ಪಂದ್ಯವು ಅಂತರರಾಷ್ಟ್ರೀಯ ಟಿ20 ಸ್ಥಾನಮಾನವನ್ನು ಹೊಂದಿದೆಯೇ ಅಥವಾ ಸೌಹಾರ್ದ ಪಂದ್ಯವನ್ನು ಹೊಂದಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಪಂದ್ಯ ನಡೆಯುವುದು ಇನ್ನೂ ಖಚಿತವಾಗದಿದ್ದರೂ, ಪಂದ್ಯವನ್ನು ನಡೆಸಿದರೆ, ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುವ ಸಾಧ್ಯತೆಯಿದೆ.

English summary
The Ministry of Culture has sent a proposal to the BCCI to organize a match with a team comprising top cricketers from India and the rest of the world as part of the Azadi Ka Amrit Mahotsav campaign to celebrate 75 years of India's independence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X