Virat Kohli: ವಿರಾಟ್ ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಗೌತಮ್ ಗಂಭೀರ್
ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಇಬ್ಬರೂ ಮೈದಾನದ ಒಳಗೆ ಮತ್ತು ಮೈದಾನದ ಹೊರಗಿನ ತಿಕ್ಕಾಟದಿಂದ ಸಾಕಷ್ಟು ಚರ್ಚೆಗೆ ಒಳಗಾಗಿದ್ದರು. ಆದರೆ ಈ ಬಾರಿ ಐಪಿಎಲ್‌ನಲ್ಲಿ ಇಬ್ಬರೂ ಕೂಡ ಮೈದಾನದಲ್ಲಿ ಎಲ್ಲ ಮುನಿಸು ಮರೆತು ಒಂದಾಗಿದ್ದಾರೆ.
ಆರ್ ಸಿಬಿ ಕೆಕೆಆರ್ ವಿರುದ್ಧ ಒಂದ್ ರನ್‌ನಿಂದ ಸೋತ ಬಳಿಕ ತಂಡದ ಆಟವನ್ನು ಶ್ಲಾಘಿಸಿದ್ದರು. ಈ ಬಾರಿ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ, ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ರನ್ ಗಳಿಸಿದರೂ ಕೊಹ್ಲಿ ಟೀಕೆಗೆ ಒಳಗಾಗಿದ್ದಾರೆ.

ಹೆಚ್ಚು ರನ್ ಗಳಿಸಿದರೂ, ಕೊಹ್ಲಿ ಸ್ಟ್ರೈಕ್ ರೇಟ್ ಉತ್ತಮವಾಗಿಲ್ಲ ಎಂದು ಹಲವು ಬಾರಿ ಟೀಕೆಗೆ ಒಳಗಾಗಿದ್ದಾರೆ. ಕೆಲವು ಬಾರಿ ನಿಧಾನಗತಿಯ ಬ್ಯಾಟಿಂಗ್ ತಂಡಕ್ಕೆ ಹಿನ್ನಡೆ ಉಂಟು ಮಾಡುತ್ತದೆ ಎನ್ನುವ ಟೀಕೆಗಳನ್ನು ಕೇಳಿದ್ದೇವೆ, ಕೊಹ್ಲಿ ಸ್ಟ್ರೈಕ್ ರೇಟ್ ವಿಚಾರ ಹೆಚ್ಚು ಚರ್ಚೆಯಾಗುತ್ತಿರುವ ಬೆನ್ನಲ್ಲೇ ಗಂಭೀರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಗೌತಮ್ ಗಂಭೀರ್ ಹೇಳಿದ್ದೇನು?
ಕೊಹ್ಲಿ ಬಗ್ಗೆ ಮಾತನಾಡುತ್ತಾ, ಇದು ಎಲ್ಲಾ ಟಿಆರ್‌ಪಿ ವಿಚಾರವಾಗಿದೆ. ನಾನು ಎಂತಹ ವ್ಯಕ್ತಿ, ವಿರಾಟ್ ಎಂತಹ ವ್ಯಕ್ತಿ ಎಂದು ಮಾಧ್ಯಮಗಳಿಗೆ ಯಾವುದೇ ಸುಳಿವು ಇಲ್ಲ. ಮಾಧ್ಯಮಗಳಿಗೆ ಪ್ರಚಾರ ಬೇಕು, ಆದರೆ ಪ್ರಚೋದನೆಯನ್ನು ಸಕಾರಾತ್ಮಕ ರೀತಿಯಲ್ಲಿ ಸಹ ರಚಿಸಬಹುದು, ಎಂದು ಗಂಭೀರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದ್ದಾರೆ.
ಐಪಿಎಲ್ 2024 ರಲ್ಲಿ ಕೊಹ್ಲಿ-ಗಂಭೀರ್ ಅಪ್ಪುಗೆಯ ನಂತರ, ಆರ್‌ಸಿಬಿ ಸ್ಟಾರ್ ಜನರು ತಮಗೆ ಬೇಕಾದುದನ್ನು ನೋಡಲು ಸಾಧ್ಯವಾಗಲಿಲ್ಲ ಮತ್ತು ಆದ್ದರಿಂದ ನಿರಾಶೆಗೊಂಡಿದ್ದಾರೆ ಎಂದು ನೇರವಾಗಿ ಹೇಳಿದ್ದಾರೆ. ವಿರಾಟ್ ಅವರ ಹೇಳಿಕೆಗೆ ಗಂಭೀರ್ ಸಹಮತ ವ್ಯಕ್ತಪಡಿಸಿದ್ದಾರೆ.
"ವಿರಾಟ್ ಹೇಳಿದ್ದನ್ನು ನಾನು ಒಪ್ಪುತ್ತೇನೆ. ಜನರಿಗೆ ಮಸಾಲೆ ಬೇಕು, ಇಬ್ಬರು ವ್ಯಕ್ತಿಗಳು ಸಾಕಷ್ಟು ಪ್ರಬುದ್ಧರಾದಾಗ, ಇಬ್ಬರ ನಡುವೆ ಹಸ್ತಕ್ಷೇಪ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅದು ಅವರಿಬ್ಬರ ನಡುವೆ ಇರುತ್ತದೆ" ಎಂದು ಗಂಭೀರ್ ಇಬ್ಬರ ನಡುವಿನ ಸಂಘರ್ಷ ಮತ್ತು ಮುನಿಸು ಮರೆತು ಒಂದಾದ ಬಗ್ಗೆ ಹೇಳಿದರು.
ಗೆದ್ದರೆ ಯಾವ ಸಮಸ್ಯೆಯೂ ಇರಲ್ಲ
ಕೊಹ್ಲಿ ಸ್ಟ್ರೈಕ್-ರೇಟ್‌ಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. "ಪ್ರತಿಯೊಬ್ಬ ಆಟಗಾರನಿಗೆ ವಿಭಿನ್ನ ಆಟವಿರುತ್ತದೆ. ಮ್ಯಾಕ್ಸ್‌ವೆಲ್ ಆಡಿದಂತೆ ಕೊಹ್ಲಿ ಆಡಲು ಆಗದು, ಹಾಗೆ ಕೊಹ್ಲಿ ಮಾಡಿದ್ದನ್ನು ಮ್ಯಾಕ್ಸ್‌ವೆಲ್‌ಗೆ ಮಾಡಲು ಆಗುವುದಿಲ್ಲ. ಸ್ಫೋಟಕ ಬ್ಯಾಟರ್ ಗಳು 300 ರನ್ ಕೂಡ ಹೊಡೆಯಬಹುದು 30 ರನ್‌ಗಳಿಗೆ ಕೂಡ ಔಟಾಗಬಹುದು" ಎಂದರು.
"ನೀವು ಗೆದ್ದಾಗ, 100 ಸ್ಟ್ರೈಕ್ ರೇಟ್ ಕೂಡ ಒಳ್ಳೆಯದು. ಆದರೆ ನೀವು 180 ಸ್ಟ್ರೈಕ್ ರೇಟ್ ಹೊಂದಿದ್ದರೂ ನೀವು ಸೋತಾಗ, ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಅದು ವಾಸ್ತವ" ಎಂದು ಗಂಭೀರ್ ಹೇಳಿದರು.












Click it and Unblock the Notifications