Get Updates
Get notified of breaking news, exclusive insights, and must-see stories!

Gautam Gambhir: ರೋಹಿತ್, ವಿರಾಟ್ ಕೊಹ್ಲಿ ಭವಿಷ್ಯದ ಬಗ್ಗೆ ಗಂಭೀರ್ ಅಚ್ಚರಿಯ ಹೇಳಿಕೆ

ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕವಾದ ಬಳಿಕ ಗೌತಮ್ ಗಂಭೀರ್ ಮೊದಲ ಬಾರಿಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದು, ಹಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ತಂಡದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕೂಡ ಜೊತೆಯಾಗಿದ್ದರು.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ, ಮೊಹಮ್ಮದ್ ಶಮಿ ವಾಪಸಾತಿ ಬಗ್ಗೆ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಗಂಭೀರ್ ಪ್ರಸ್ತಾಪಿಸಿದ್ದಾರೆ.

Gautam Gambhir Addresses Media as Team India s New Head Coach

ಶಮಿ ವಾಪಸಾತಿ ಯಾವಾಗ?

ಮೊಹಮ್ಮದ್ ಶಮಿ ಬೌಲಿಂಗ್ ಅಭ್ಯಾಸ ಶುರು ಮಾಡಿದ್ದು, ಬಾಂಗ್ಲಾದೇಶ ವಿರುದ್ಧದ ಸೆಪ್ಟಂರ್ 19ರಂದು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದ್ದು ಆ ವೇಳೆಗೆ ಅವರು ವಾಪಸಾತಿ ಮಾಡುವ ವಿಶ್ವಾಸವಿದ್ದು, ನಾನು ಎನ್‌ಸಿಎನಲ್ಲಿರುವವರ ಜೊತೆ ಮಾತನಾಡುತ್ತೇನೆ ಎಂದರು.

ಬುಮ್ರಾ, ರೋಹಿತ್, ವಿರಾಟ್ ಅವರ ಕೆಲಸದ ಹೊರೆ ಬಗ್ಗೆ ಮಾತನಾಡಿದ್ದು, "ಜಸ್ಪ್ರೀತ್ ಬುಮ್ರಾ ಅವರಂತಹ ಬೌಲರ್ ಗಳಿಗೆ ಕೆಲಸದ ಹೊರೆ ನಿರ್ವಹಣೆ ಮುಖ್ಯವಾಗಿದೆ. ಅವರು ಅಪರೂಪದ ಬೌಲರ್. ಅವರು ಪ್ರಮುಖ ಪಂದ್ಯಗಳಲ್ಲಿ ಆಡಬೇಕೆಂದು ಬಯಸುತ್ತೇವೆ, ಅದಕ್ಕೆ ಅವರ ಕೆಲಸದ ಹೊರೆ ಮುಖ್ಯವಾಗಿದೆ." ಎಂದರು.

ಕೊಹ್ಲಿ, ರೋಹಿತ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುವುದರಿಂದ ಅವರು, ಹೆಚ್ಚಿನ ಪಂದ್ಯಗಳಿಗೆ ಲಭ್ಯವಿರುತ್ತಾರೆ ಎಂದರು.

ಕೋಚಿಂಗ್ ಸಿಬ್ಬಂದಿ ಬಗ್ಗೆ

ಕೋಚಿಂಗ್ ಸಿಬ್ಬಂದಿಯನ್ನು ಇನ್ನೂ ಅಂತಿಮಗೊಳಿಸಿಲ್ಲ, ರಿಯಾನ್ ಟೆನ್ ಡೋಸ್ಚಾಟ್ ಮತ್ತು ಅಭಿಷೇಕ್ ನಾಯರ್ ಜೊತೆ ಕೆಲಸ ಮಾಡಿದ್ದೇನೆ, ಆಟಗಾರರು ಕೂಡ ಅವರ ಬಗ್ಗೆ ಉತ್ತಮ ಭಾವನೆ ಹೊಂದಿದ್ದಾರೆ ಎಂದರು.

ಡ್ರೆಸ್ಸಿಂಗ್ ರೂಮ್ ಬಗ್ಗೆ ಕೂಡ ಮಾತನಾಡಿದ್ದು, ಆಟಗಾರರಿಗೆ ಸ್ವಾತಂತ್ರ್ಯವನ್ನು ನೀಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ, ನಾನು ಅದನ್ನು ಸಂಪೂರ್ಣವಾಗಿ ನಂಬುತ್ತೇನೆ ಮತ್ತು ಮುಖ್ಯ ತರಬೇತುದಾರ ಮತ್ತು ಆಟಗಾರನ ಸಂಬಂಧವನ್ನು ಹೊಂದಿಲ್ಲ ,ವಿಷಯಗಳನ್ನು ಸಂಕೀರ್ಣಗೊಳಿಸುವುದಿಲ್ಲ ಎಂದರು.

ರಿಷಭ್ ಬಹಳ ದಿನಗಳಿಂದ ಹೊರಗುಳಿದಿದ್ದರು. ಹಾಗಾಗಿ ಆತನಿಗೆ ಹೊರೆಯಾಗದಂತೆ ವಾಪಸ್ ಕರೆತರಬೇಕೆಂದರು. ಬಹಳ ಸಮಯದ ನಂತರ ಹಿಂತಿರುಗಿದ ಯಾರಾದರೂ, ನೀವು ಅವರನ್ನು ಕ್ರಮೇಣವಾಗಿ ವಾಪಸಾತಿ ಮಾಡಬೇಕು ಎಂದು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಹೇಳಿದ್ದಾರೆ.

ಕೊಹ್ಲಿ, ರೋಹಿತ್ 2027ರ ವಿಶ್ವಕಪ್‌ನಲ್ಲಿ ಆಡ್ತಾರ

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್‌ನಲ್ಲಿ ಆಡ್ತಾರಾ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟ ಗಂಭೀರ್, ಇಬ್ಬರಲ್ಲೂ ಸಾಕಷ್ಟು ಕ್ರಿಕೆಟ್ ಇದೆ. ಆಶಾದಾಯಕವಾಗಿ, ಅವರು ತಮ್ಮ ಫಿಟ್ನೆಸ್ ಅನ್ನು ಮುಂದುವರಿಸಿದರೆ, 2027 ರ ವಿಶ್ವಕಪ್ ದೂರವಿಲ್ಲ. ವಿರಾಟ್ ಮತ್ತು ರೋಹಿತ್ ಅವರಲ್ಲಿ ಎಷ್ಟು ಕ್ರಿಕೆಟ್ ಉಳಿದಿದೆ ಎಂದು ಹೇಳಲು ಸಾಧ್ಯವಿಲ್ಲ ತಂಡಕ್ಕೆ ಅದು ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.

ಶ್ರೀಲಂಕಾ ಪ್ರವಾಸದ ನಂತರ, ನಾವು ಸುದೀರ್ಘ ವಿರಾಮವನ್ನು ಪಡೆದುಕೊಂಡಿದ್ದೇವೆ ಮತ್ತು ನಂತರ ನಾವು 10 ಟೆಸ್ಟ್ ಪಂದ್ಯಗಳನ್ನು ಆಡುತ್ತೇವೆ. ಅದು ಸವಾಲಾಗಿದೆ. ಈ 10 ಟೆಸ್ಟ್ ಪಂದ್ಯಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡಬಹುದು ಎಂದು ಭಾವಿಸುತ್ತೇವೆ. ಆ 10 ಟೆಸ್ಟ್ ಪಂದ್ಯಗಳಿಗೆ ಜಡೇಜಾ ಮುಖ್ಯ, ಆ 10 ಪಂದ್ಯಗಳಿಗಾಗಿ ಎದುರು ನೋಡುತ್ತಿದ್ದೇನೆ ಎಂದ ಗಂಭೀರ್, ಜಡೇಜಾರನ್ನು ಶ್ರೀಲಂಕಾ ವಿರುದ್ಧದ ಸರಣಿಗೆ ಕೈಬಿಟ್ಟ ಬಗ್ಗೆ ಸ್ಪಷ್ಟನೆ ಕೊಟ್ಟರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+