IPL 2024 Auction: ಐಪಿಎಲ್ ಹರಾಜಿಗೆ ಮುನ್ನ ಆರ್‌ಸಿಬಿ ತಂಡಕ್ಕೆ ಮಾಜಿ ಕ್ರಿಕೆಟಿಗನ ಸಲಹೆ

ಐಪಿಎಲ್ 2024ರ ಆವೃತ್ತಿಗೆ ಮುನ್ನ ಮಿನಿ ಹರಾಜು ನಡೆಯಲಿದ್ದು, 10 ಫ್ರಾಂಚೈಸಿಗಳು ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಯೋಜನೆಗಳನ್ನು ಹಾಕಿಕೊಳ್ಳುತ್ತಿವೆ. ಡಿಸೆಂಬರ್ 19ರಂದು ದುಬೈನಲ್ಲಿ ಐಪಿಎಲ್ ಮಿನಿ ಹರಾಜು ನಡೆಯಲಿದೆ.

ಎಲ್ಲಾ ತಂಡಗಳು ಹಲವು ಆಟಗಾರರನ್ನು ಬಿಡುಗಡೆ ಮಾಡಿದ್ದು, ಹರಾಜಿನಲ್ಲಿ ಕೆಲವು ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಕೂಡ ಹಲವು ದುಬಾರಿ ಆಟಗಾರರನ್ನು ಬಿಡುಗಡೆ ಮಾಡಿದ್ದು ಹರಾಜಿನಲ್ಲಿ ಪ್ರಮುಖ ಆಟಗಾರರನ್ನು ಖರೀದಿ ಮಾಡುವ ಯೋಜನೆ ಹೊಂದಿದೆ.

 Former Indian Cricketer Gives IPL 2024 Auction Advice to RCB on Bowling Concerns

ಇನ್ನು ಭಾರತ ತಂಡದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗೆ ಮಿನಿ ಹರಾಜಿನ ಬಗ್ಗೆ ಸಲಹೆಗಳನ್ನು ನೀಡಿದರು. ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಪಠಾಣ್, ಕ್ಯಾಮರೂನ್ ಗ್ರೀನ್ ಅವರನ್ನು ತಂಡಕ್ಕೆ ಸೇರಿಸಿದ ನಂತರ, ಆರ್‌ಸಿಬಿ ತಮ್ಮ ಮಧ್ಯಮ ಕ್ರಮಾಂಕದ ತಲೆನೋವನ್ನು ಪರಿಹರಿಸಿದೆ ಎಂದು ಹೇಳಿದರು.

ಬೌಲಿಂಗ್ ದಾಳಿ ಬಲಿಷ್ಠಪಡಿಸಲು ಸಲಹೆ

ಆರ್‌ಸಿಬಿ ಬೌಲಿಂಗ್ ದಾಳಿಯನ್ನು ಬಲಿಷ್ಠಗೊಳಿಸಬೇಕಾಗಿದೆ ಮತ್ತು ಶ್ರೀಲಂಕಾದ ಬೌಲರ್ ವನಿಂದು ಹಸರಂಗಾ ಅವರನ್ನು ಕಡಿಮೆ ಬೆಲೆಗೆ ಮತ್ತೆ ಖರೀದಿ ಮಾಡಿದರೆ ತಂಡಕ್ಕೆ ಒಳ್ಳೆಯದು ಎಂದು ಪಠಾಣ್ ಹೇಳಿದರು.

ಹಸರಂಗಾ ಅವರನ್ನು ಖರೀದಿ ಮಾಡಲು ವಿಫಲವಾದರೆ, ಅವರು ಮುಜೀಬ್ ಉರ್ ರೆಹಮಾನ್‌ ಅವರನ್ನು ಖರೀದಿ ಮಾಡಬಹುದು ಎಂದರು. ಮುಜೀಬ್‌ರನ್ನು ಹೊಗಳಿ ಪಠಾಣ್ ಹೊಸ ಚೆಂಡಿನೊಂದಿಗೆ ಆತ ನಿಗೂಢ ಬೌಲರ್ ಮತ್ತು ಕಠಿಣ ಪರಿಸ್ಥಿತಿಗಳಲ್ಲಿ ಬದಲಾವಣೆಯನ್ನು ಮಾಡಬಹುದು ಎಂದು ಹೇಳಿದರು.

ಗ್ರೀನ್ ಬಂದಿದ್ದು ತಂಡಕ್ಕೆ ಬಲ ತಂದಿದೆ

ಕ್ಯಾಮರೂನ್ ಗ್ರೀನ್ ತಂಡವನ್ನು ಸೇರಿದ ಬಳಿಕ ಅವರಿಗೆ ದೊಡ್ಡ ತಲೆನೋವು ಬಗೆಹರಿದಿದೆ. ಮಧ್ಯಮ ಕ್ರಮಾಂಕದ ಗೊಂದಲ ಬಗೆಹರಿದಿದೆ. ಅವರು ತಮ್ಮ ಬೌಲಿಂಗ್ ದಾಳಿಯನ್ನು ಬಲಗೊಳಿಸಬೇಕಾಗಿದೆ ಎಂದು ಪಠಾಣ್ ಹೇಳಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಿಚೆಲ್ ಸ್ಟಾರ್ಕ್ ಬಂದರೆ ಬೌಲಿಂಗ್ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಪಠಾಣ್ ಹೇಳಿದ್ದಾರೆ.

ಮಿಚೆಲ್ ಸ್ಟಾರ್ಕ್ ಆರ್‌ಸಿಬಿಗಾಗಿ ಆಡುವುದನ್ನು ನೋಡಬಹುದು ಎಂದು ನಾನು ಭಾವಿಸುತ್ತೇನೆ ಏಕೆಂದರೆ ಅವರು ಈಗಾಗಲೇ ಆ ತಂಡಕ್ಕೆ ಆಡಿದ್ದಾರೆ. ಅವರು ಎಡಗೈ ಬೌಲಿಂಗ್, 140-ಪ್ಲಸ್ ಬೌಲಿಂಗ್, ಚಿನ್ನಸ್ವಾಮಿಯಲ್ಲಿನ ಆ ರೀತಿಯ ಪಿಚ್‌ಗಳಲ್ಲಿ ಹೆಚ್ಚುವರಿ ವೇಗವನ್ನು ಹೊಂದಿರುವ ಕಾರಣ ಅವರು ಮಾರಕವಾಗಬಲ್ಲರು. ಆರ್‌ಸಿಬಿಗೆ ಸ್ಟೇಡಿಯಂ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ಐಪಿಎಲ್ 2024 ರ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ರಚಿನ್ ರವೀಂದ್ರ, ಟ್ರಾವಿಸ್ ಹೆಡ್ ಮತ್ತು ಇತರರು ಸೇರಿದಂತೆ 1166 ಆಟಗಾರರು ಹರಾಜಿಗೆ ನೋಂದಾಯಿಸಿಕೊಂಡಿದ್ದಾರೆ. ಬೆಂಗಳೂರು ತಂಡ 23.25 ಕೋಟಿ ರೂಪಾಯಿ ಪರ್ಸ್ ಹೊಂದಿದ್ದು ಯಾವ ಆಟಗಾರರನ್ನು ಖರೀದಿ ಮಾಡಲಿದೆ ಎಂದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+