ದೇಶೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಆಸ್ಟ್ರೇಲಿಯಾ ಮಾಜಿ ನಾಯಕ ಟಿಮ್ ಪೈನ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಟಿಮ್ ಪೈನ್ ದೇಶೀಯ ಕ್ರಿಕೆಟ್‌ನ ಎಲ್ಲಾ ಮಾದರಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಶಿಫೀಲ್ಡ್ ಶೀಲ್ಡ್ ಟೂರ್ನಿಯ ಟಸ್ಮೇನಿಯಾ ಹಾಗೂ ಕ್ವೀನ್ಸ್‌ಲ್ಯಾಂಡ್ ಪಂದ್ಯದ ಅವರ ದೇಶೀಯ ಕ್ರಿಕೆಟ್‌ನ ಅಂತಿಮ ಪಂದ್ಯವಾಗಿತ್ತು. ಈ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದ್ದು ಪಂದ್ಯದ ಮುಕ್ತಾಯದ ಬಳಿಕ ಇತರ ಸದಸ್ಯರು ಪೈನ್‌ಗೆ ಗಾರ್ಡ್ ಆಫ್ ಹಾನರ್ ಮೂಲಕ ಗೌರವಿಸಿದ್ದಾರೆ.

ಶಿಫೀಲ್ಡ್ ಶೀಲ್ಡ್ ಟೂರ್ನಿಯ ಪರವಾಗಿ ಆಡುವ ಟಿಮ್ ಪೈನ್ ಅಂತಿಮ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 62 ಎಸೆತಗಳಲ್ಲಿ 42 ರನ್ ಬಾರಿಸಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 3 ರನ್‌ಗಳಿಸಿದ್ದಾರೆ. ಶಿಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ 95 ಪಂದ್ಯಗಳನ್ನು ಆಡುವ ಮೂಲಕ ಟಿಮ್ ಪೈನ್ ಅವರ ದೇಶೀಯ ಕ್ರಿಕೆಟ್ ವೃತ್ತಿಜೀವನ ಅಂತ್ಯವಾಗಿದೆ. 2005ರಲ್ಲಿ ಸೌತ್ ಆಸ್ಟ್ರೇಲಿಯಾ ವಿರುದ್ಧ ಅವರು ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

Former Australia Test skipper Tim Paine retires from all forms of domestic cricket

ಟಾಸ್ಮೇನಿಯಾ ವಿಕೆಟ್ ಕೀಪರ್ ಆಗಿ ಅತೀ ಹೆಚ್ಚು ಬಲಿ ಪಡೆದ ದಾಖಲೆ ಟಿಮ್ ಪೈನ್ ಹೆಸರಿನಲ್ಲಿದೆ. ಒಟ್ಟು 295 ಬಲಿ ಪಡೆದಿದ್ದಾರೆ ಪೈನ್. ಕಳೆದ ವರ್ಷದ ಆಗಸ್ಟ್ ತಿಂಗಳ ಬಳಿಕ ಮಾನಸಿಕ ಆರೋಗ್ಯದ ಕಾರಣದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವುಳಿದಿದ್ದ ಟಿಮ್ ಪೈನ್ ಮತ್ತೆ ಕ್ರಿಕೆಟ್‌ಗೆ ಮರಳಿದ್ದರು. 2022-23ನೇ ಆವೃತ್ತಿಯ ದೇಶೀಯ ಕ್ರಿಕೆಟ್‌ನಲ್ಲಿ 17.33ರ ಸರಾಸರಿಯಲ್ಲಿ ಅವರು 156 ರನ್‌ಗಳಿಸಿದ್ದಾರೆ. ಇನ್ನು ಒಟ್ಟಾರೆಯಾಗಿ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಪೈನ್ 30ರ ಆಸುಪಾಸಿನ ಸರಾಸರಿಯಲ್ಲಿ 4000ಕ್ಕೂ ಅಧಿಕ ರನ್‌ಗಳಿಸಿದ್ದಾರೆ. ಟಾಸ್ಮೇನಿಯಾ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದಾಗ ಪೈನ್ ತಂಡದ ಸದಸ್ಯರಾಗಿದ್ದರು.

LLC 2023: ಕ್ರಿಸ್ ಎಂಪೊಫು, ಟಿನೋ ಬೆಸ್ಟ್ ಬೌಲಿಂಗ್ ದಾಳಿಗೆ ಬೆಚ್ಚಿದ ಏಷ್ಯಾ ಲಯನ್ಸ್: ವರ್ಲ್ಡ್ ಜೈಂಟ್ಸ್ ತಂಡಕ್ಕೆ ಗೆಲುವು

ಆಸ್ಟ್ರೇಲಿಯಾದ ಅತ್ಯುತ್ತಮ ಟೆಸ್ಟ್ ವಿಕೆಟ್‌ಕೀಪರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಟಿಮ್ ಪೈನ್ 2021ರಲ್ಲಿ ಆಶಸ್ ಸರಣಿ ಆರಂಭವಾಗುವ ಒಂದು ವಾರದ ಮೊದಲು ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಈ ಪ್ರತಿಷ್ಠಿತ ಸರಣಿಯಲ್ಲಿ ಪೈನ್ ಆಸ್ಟ್ರೇಲಿಯಾವನ್ನು ಮುನ್ನಡೆಸಲು ಸಿದ್ಧರಾಗಿದ್ದರು ಆದರೆ ಲೈಂಗಿಕತೆಯ ಆರೋಪಗಳು ಕೇಳಿಬಂದ ಬಳಿಕ ಅವರು ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಲ್ಲದೆ ಸರಣಿಯಿಂದ ಹಿಂದಕ್ಕೆ ಸರಿದರು. ಟಿಮ್ ಪೈನ್ ಅವರ ರಾಜೀನಾಮೆಯ ಬಳಿಕ ಪ್ಯಾಟ್ ಕಮ್ಮಿನ್ಸ್ ಟೆಸ್ಟ್ ನಾಯಕರಾಗಿ ಜವಾಬ್ಧಾರಿ ವಹಿಸಿಕೊಂಡು ಆಸ್ಟ್ರೇಲಿಯಾದ ಆಶಸ್ ಗೆಲುವಿನತ್ತ ಮುನ್ನಡೆಸಿದರು.

ಇನ್ನು ಟಿಮ್ ಪೈನ್ ಕೂಡ ಆಸ್ಟ್ರೇಲಿಯಾ ತಂಡದ ನಾಯಕತ್ವವನ್ನು ಸಂದಿಗ್ಧ ಪರಿಸ್ಥಿತಿಯಲ್ಲಿಯೇ ವಹಿಸಿಕೊಂಡಿದ್ದರು ಎಂಬುದು ಗಮನಾರ್ಹ. 2018ರಲ್ಲಿ ಆಸ್ಟ್ರೇಲಿಯಾ ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿಕೊಂಡ ಬಳಿಕ ನಾಯಕನಾಗಿದ್ದ ಸ್ಟೀವ್ ಸ್ಮಿತ್ ರಾಜೀನಾಮೆ ನೀಡಬೇಕಾಯಿತು. ಈ ಸಂದರ್ಭದಲ್ಲಿ ಪೈನ್ ಟೆಸ್ಟ್ ತಂಡವನ್ನು ಮುನ್ನಡೆಸುವ ಹೊಣೆಗಾರಿಕೆ ವಹಿಸಿಕೊಂಡಿದ್ದರು.

ಪೈನ್ ಆಸ್ಟ್ರೇಲಿಯ ಪರ 35 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಅದರಲ್ಲಿ 23 ಪಂದ್ಯಗಳಲ್ಲಿ ನಾಯಕನಾಗಿ ಮುನ್ನಡೆಸಿದ್ದಾರೆ. ಗಮನಾರ್ಹ ಅಂಶವೆಂದರೆ 2018-19ರಲ್ಲಿ ಭಾರತವು ತಮ್ಮ ಚೊಚ್ಚಲ ಟೆಸ್ಟ್ ಸರಣಿಯನ್ನು ಗೆದ್ದಾಗ ಮತ್ತು 2020-21 ರಲ್ಲಿ ಭಾರತವು ಆಸ್ಟ್ರೇಲಿಯಾದ ಭದ್ರಕೋಟೆ ಗಾಬಾವನ್ನು ಭೇದಿಸಿದಾಗ ಹಾಗೂ ಸತತ ಎರಡನೇ ಬಾರಿಗೆ ಆಸಿಸ್ ನೆಲದಲ್ಲಿಯೇ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದಾಗ ಪೈನ್ ಅವರು ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕರಾಗಿದ್ದರು. ಹಾಗಿದ್ದರೂ ಟೆಸ್ಟ್ ನಾಯಕನಾಗಿ ಟಿಮ್ ಪೈನ್ ಉತ್ತಮ ದಾಖಲೆಯನ್ನೇ ಹೊಂದಿದ್ದಾರೆ. 23 ಪಂದ್ಯಗಳ ಪೈಕಿ 11 ಪಂದ್ಯಗಳನ್ನು ಗೆದ್ದಿದ್ದು 8ರಲ್ಲಿ ಸೋಲು ಕಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+