ಸೆ.10ರಿಂದ ಬಳ್ಳಾರಿಯಲ್ಲಿ ಫುಟ್‍ಬಾಲ್ ಲೀಗ್ ಪಂದ್ಯಾವಳಿ

ಕಲಬುರಗಿ, ಆಗಸ್ಟ್ 18; ಬಳ್ಳಾರಿಯಲ್ಲಿ ಫುಟ್‍ಬಾಲ್ ಲೀಗ್ ಪಂದ್ಯಾವಳಿಗಳು ಸೆಪ್ಟೆಂಬರ್ 10 ರಿಂದ 17ರ ತನಕ ನಡೆಯಲಿವೆ. ಪಾಲ್ಗೊಳ್ಳಲು ಇಚ್ಛಿಸುವ ತಂಡಗಳು ಆಗಸ್ಟ್ 31ರೊಳಗೆ ತಮ್ಮ ತಂಡವನ್ನು ಬಿಡಿಎಎ ಫುಟ್‍ಬಾಲ್ ಮೈದಾನದಲ್ಲಿ ನೋಂದಾಯಿಸಿಕೊಳ್ಳಬಹುದು.

ಬಳ್ಳಾರಿ ನಗರದ ಡಾ. ರಾಜ್‍ಕುಮಾರ್ ರಸ್ತೆಯ ಬಿಡಿಎಎ ಫುಟ್‍ಬಾಲ್ ಮೈದಾನದಲ್ಲಿ ಲೀಗ್ ಪಂದ್ಯಾವಳಿಗಳು ಪ್ರತಿ ದಿನ ಸಂಜೆ 6 ರಿಂದ 9 ಗಂಟೆಯ ತನಕ ಹೊನಲು ಬೆಳಕಿನಲ್ಲಿ ನಡೆಯಲಿದೆ. ಈ ಕುರಿತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಭಾಗವಹಿಸಲು ಆಸಕ್ತಿ ಹೊಂದಿರುವ ಫುಟ್‍ಬಾಲ್ ತಂಡಗಳು ಆಗಸ್ಟ್ 31ರೊಳಗಾಗಿ ತಮ್ಮ ತಂಡವನ್ನು ಬಿಡಿಎಎ ಫುಟ್‍ಬಾಲ್ ಮೈದಾನ ಇಲ್ಲಿ ನೋಂದಾಯಿಸಿಕೊಳ್ಳಬಹುದು. ಕ್ರೀಡಾಕೂಟದಲ್ಲಿ ಗೆದ್ದ ತಂಡಕ್ಕೆ ಪ್ರಥಮ ಬಹುಮಾನ 10 ಸಾವಿರ ರೂ. ಆಗಿದೆ. ದ್ವಿತೀಯ ಬಹುಮಾನ 5 ಸಾವಿರ ರೂ. ಆಗಿದೆ.

Football League In Ballari From September 10th

ಪಂದ್ಯಾವಳಿ ನಿಯಮಗಳು: ಫುಟ್‌ಬಾಲ್ ಲೀಗ್ ಪಂದ್ಯಾವಳಿಗಳು ಸೆಪ್ಟೆಂಬರ್ 10ರಿಂದ 17ರವರೆಗೆ ನಡೆಯಲಿವೆ. ಬಳ್ಳಾರಿ ಜಿಲ್ಲೆಯ ಆಟಗಾರರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ (ಆಧಾರ್ ಕಾರ್ಡ್ ಐಡಿ/ ಪುರಾವೆ ಹಾಜರುಪಡಿಸಬೇಕು). ಕ್ರೀಡಾ ಇಲಾಖೆಯ ವಿದ್ಯಾರ್ಥಿಗಳು ಭಾಗವಹಿಸಬಹುದು.

ಪ್ರತಿ ತಂಡದಲ್ಲಿ 16 ಸದಸ್ಯರು ಮಾತ್ರ ಇರತಕ್ಕದ್ದು, ನೋಂದಾಯಿತ 16 ಆಟಗಾರರನ್ನು ಮಾತ್ರ ಲೀಗ್ ಪಂದ್ಯಾವಳಿಯಲ್ಲಿ ಆಡಲು ಅನುಮತಿಸಲಾಗುವುದು. ವಯಸ್ಸು 16 ವರ್ಷ ಮೇಲ್ಪಟ್ಟವರಿಗೆ ಮಾತ್ರ, ಎಲ್ಲಾ ಪಂದ್ಯಾವಳಿಗಳನ್ನು AIFF ನಿಯಮಗಳ ಪ್ರಕಾರ ಪೂರ್ಣ ಅಳತೆಯ ಮೈದಾನದಲ್ಲಿ ನಡೆಸಲಾಗುವುದು.

ಪಂದ್ಯದ ಅವಧಿಯು 20-10-20 ನಿಮಿಷಗಳು ಆಗಿರುತ್ತದೆ. ಸಂಘಟನಾ ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನ ಆಗಿರುತ್ತದೆ. ಮೊದಲು ಬಂದ ತಂಡಗಳಿಗೆ ನೋಂದಣಿಯಲ್ಲಿ ಆದ್ಯತೆ ನೀಡಲಾಗುವುದು. ಗರಿಷ್ಠ 8 ತಂಡಗಳನ್ನು ಪರಿಗಣಿಸಲಾಗುವುದು.

ಎಲ್ಲಾ ಪಂದ್ಯಗಳನ್ನು ಹೊನಲು ಬೆಳಕಿನಲ್ಲಿ ಸಂಜೆ 6 ರಿಂದ 9 ರವರೆಗೆ ನಡೆಸಲಾಗುವುದು. ಪ್ರವೇಶ ಶುಲ್ಕ 500 ರೂ.. ಎಲ್ಲಾ ತಂಡದ ನಮೂದುಗಳನ್ನು ನಿರ್ದಿಷ್ಟ ಪಡಿಸಿದ ಅರ್ಜಿ ನಮೂನೆಯಲ್ಲಿ ಸಲ್ಲಿಸಬೇಕು.

Football League In Ballari From September 10th

ಪಂದ್ಯ ಪ್ರಾರಂಭವಾಗುವ ಒಂದು ಗಂಟೆಯ ಮೊದಲು ತಂಡಗಳು ಅಧಿಕಾರಿಗಳಿಗೆ ವರದಿ ಮಾಡಬೇಕು. ನೋಂದಣಿ ಸಮಯದಲ್ಲಿ ತಂಡಗಳು ಜರ್ಸಿ ವಿನ್ಯಾಸ/ ಬಣ್ಣ ಮತ್ತು ಆಟಗಾರರ ಸಂಖ್ಯೆಯನ್ನು ತಿಳಿಸಬೇಕು. ಲೀಗ್ ಕಮ್ ನಾಕ್ ಔಟ್ ಆಧಾರದ ಮೇಲೆ ಪಂದ್ಯಗಳನ್ನು ನಡೆಸಲಾಗುವುದು.

ಲೀಗ್ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಪ್ರಥಮ ಬಹುಮಾನ 10 ಸಾವಿರ ರೂ.ಗಳು. ದ್ವಿತೀಯ ಬಹುಮಾನ 5 ಸಾವಿರ ರೂ. ಒಳಗೊಂಡಿರುತ್ತದೆ. ಆಸ್ತಕರು ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು 9036335986 ಮತ್ತು 8553821749 ಕರೆ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+