Virat Kohli-Rohit Sharma: ನಿವೃತ್ತಿಯಿಂದ ವಾಪಸ್ ಬರ್ತಾರ ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ?
ಟಿ20 ವಿಶ್ವಕಪ್ ಗೆದ್ದ ಖುಷಿಯಲ್ಲಿರುವ ಭಾರತ ತಂಡದ ಅಭಿಮಾನಿಗಳಿಗೆ ಜಿಂಬಾಬ್ವೆ ಆಘಾತ ನೀಡಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದು, ಜಿಂಬಾಬ್ವೆ ವಿರುದ್ಧದ ಸರಣಿಗೆ ಯುವ ಪಡೆಯನ್ನು ಆಯ್ಕೆ ಮಾಡಲಾಗಿತ್ತು.
ಶನಿವಾರ ಹರಾರೆಯಲ್ಲಿ ನಡೆದ ಐದು ಟಿ20 ಪಂದ್ಯಗಳ ಸರಣಿಯಲ್ಲಿ ಜಿಂಬಾಬ್ವೆ ಭಾರತವನ್ನು ಸೋಲಿಸಿದೆ. 115 ರನ್‌ಗಳನ್ನು ಕಲೆಹಾಕಿದ ಜಿಂಬಾಬ್ವೆ, ಭಾರತವನ್ನು 102 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 13 ರನ್‌ಗಳ ಗೆಲುವು ಸಾಧಿಸಿತು.

ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೋತಿದ್ದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಈಗ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಳಿಕ ವಿಶೇಷ ಬೇಡಿಕೆ ಇಟ್ಟಿದ್ದಾರೆ.
ನಿವೃತ್ತಿಯಿಂದ ವಾಪಸ್ ಬನ್ನಿ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿಯನ್ನು ಹಿಂಪಡೆದು ಮತ್ತೆ ಟಿ20 ಕ್ರಿಕೆಟ್ ಆಡಬೇಕು ಎಂದು ಒತ್ತಾಯಿಸಿದ್ದಾರೆ.
Petition to nullify retirement of Rohit Sharma and Virat Kohli #INDvsZIM
— Ritushree 🌈 (@QueerNaari) July 6, 2024
ಜಿಂಬಾಬ್ವೆ ವಿರುದ್ದ ಬ್ಯಾಟಿಂಗ್‌ನಲ್ಲಿ ಭಾರತದ ಯುವ ಆಟಗಾರರು ಕಳಪೆ ಪ್ರದರ್ಶನ ನೀಡಿದ ನಂತರ, ಕ್ರಿಕೆಟ್ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಅಭಿಮಾನಿಗಳು ಭಾರತದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜಿಂಬಾಬ್ವೆ ತಂಡದ ವಿರುದ್ಧ ಸೋಲು ಬಂದ ಕಾರಣ, ಇದು ಖಂಡಿತವಾಗಿಯೂ ವಿಶ್ವಚಾಂಪಿಯನ್ನರಿಗೆ ದೊಡ್ಡ ಹಿನ್ನಡೆಯಾಗಿದೆ.
ರೋಹಿತ್ ಶರ್ಮಾ ಹಿಂತಿರುಗಬೇಕೆಂದು ಬಹಳಷ್ಟು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ, ವಿಶ್ವಕಪ್ ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದ ವಿರಾಟ್ ಕೊಹ್ಲಿ ಕೂಡ ಅವರು ಮರಳಬೇಕೆಂದು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.
ನಿವೃತ್ತಿಯಿಂದ ವಾಪಸ್ ಬರಲ್ಲ
ಯುವ ಆಟಗಾರರಿಗೆ ಅವಕಾಶ ಸಿಗಬೇಕು ಎನ್ನುವ ಕಾರಣಕ್ಕಾಗಿ ನಿವೃತ್ತಿ ಹೊಂದುತ್ತಿರುವುದಾಗಿ ಕೊಹ್ಲಿ, ರೋಹಿತ್ ತಿಳಿಸಿದ್ದಾರೆ. ಮುಂದಿನ ಟಿ20 ವಿಶ್ವಕಪ್ 2026ಕ್ಕೆ ಇರುವ ಕಾರಣ, ಯುವ ಆಟಗಾರರ ತಂಡವನ್ನು ಕಟ್ಟಲು ಈಗಿನಿಂದಲೇ ಬಿಸಿಸಿಐ ಸಜ್ಜಾಗಿದೆ.
ಜಿಂಬಾಬ್ವೆ ವಿರುದ್ಧ ಭಾರತ ಮೊದಲನೇ ಟಿ20 ಪಂದ್ಯ ಸೋತಿರಬಹುದು ಆದರೆ ಆಡುತ್ತಿರುವ ಯುವ ಆಟಗಾರರು ನಿಜಕ್ಕೂ ಪ್ರತಿಭಾವಂತರು. ಪಂದ್ಯವೆಂದ ಮೇಲೆ ಸೋಲು ಗೆಲುವು ಇದ್ದದ್ದೇ, ಸರಣಿಯಲ್ಲಿ ಇನ್ನೂ 4 ಪಂದ್ಯಗಳಿದ್ದು ಭಾರತ ಎಲ್ಲಾ ಪಂದ್ಯಗಳನ್ನು ಗೆದ್ದು ಸರಣಿ ಗೆಲ್ಲುವ ಸಾಮರ್ಥ್ಯ ಹೊಂದಿದೆ.












Click it and Unblock the Notifications